ಸಂಚಾರ ನಿಯಮ ಪಾಲಿಸುವರಿಗೆ ಕರ್ನಾಟಕದಲ್ಲಿ ಬಂಪರ್ ಆಫರ್; ಕಡಿಮೆ ವಿಮೆ ಹಾಗೂ ಬೋನಸ್ ಪ್ಲಾನ್!

*ಚರ್ಚೆಯಲ್ಲಿರುವ ಮಹತ್ವದ ವಾಹನ ವಿಮೆ ಕರ್ನಾಟಕದಲ್ಲಿ ಜಾರಿಗೆ ಸಿದ್ಧತೆ
*ಸಂಚಾರ ನಿಯಮ ಪಾಲಿಸುವವರಿಗೆ ಕಡಿಮೆ ವಿಮೆ ಪಾವತಿ
*ಎರಡರಿಂದ ಮೂರು ವರ್ಷಗಳ ಕಾಲ ವಿಮೆ ಅವದಿ ಹೆಚ್ಚಳ

Karnataka plan to implement vehicle insurance benifit to traffic rules fallow merit ckm

ಬೆಂಗಳೂರು(ಆ.10): ಮೋಟಾರು ವಾಹನ ಕಾಯ್ದೆಯಡಿ ಹಲವು ತಿದ್ದುಪಡಿಗಳಾಗಿವೆ. ಇದೀಗ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಂಚಾರ ನಿಯಮ ಪಾಲಿಸುವವರಿಗೆ ಬಂಪರ್ ಆಫರ್ ನೀಡಲು ಕರ್ನಾಟಕ ಮುಂದಾಗಿದೆ. ಇದರಿಂದ ಚಾಚೂ ತಪ್ಪದೆ ಟ್ರಾಫಿಕ್ ನಿಯಮ ಪಾಲಿಸುವವರಿಗೆ ಹಲವು ಪ್ರಯೋಜನಗಳಿವೆ.

ಈ ಎರಡು ಫೀಚರ್ಸ್ ನಿಮ್ಮ ಬೈಕ್, ಸ್ಕೂಟರ್‌ನಲ್ಲಿ ಇಲ್ಲದಿದ್ದರೆ ಬೀಳುತ್ತೆ ದಂಡ!

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ  ಪಾಲನೆ ಮಾಡುವ ವಾಹನ ಸವಾರರಿಗೆ ಒಂದು ವರ್ಷದ ವಾಹನ ವಿಮೆಯನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಹೆಚ್ಚಾಗಿ ನೀಡುವ ಕುರಿತು ಮಾತುಕತೆ ನಡೆಸಲಾಗಿದೆ. ಇನ್ನು ಟ್ರಾಫಿಕ್ ನಿಯಮ ಪಾಲಿಸುವರಿಗೆ ಅಥವಾ ಕಡಿಮೆ ಟ್ರಾಫಿಕ್ ಉಲ್ಲಂಘನೆ ಕೇಸ್ ಇರುವವರಿಗೆ ವಿಮೆ ಮೊತ್ತ ಕಡಿಮೆ ಮಾಡುವ ಕುರಿತು ಮಾತುಕತೆಯಾಗಿದೆ.

ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ; ಕಾರಿನ ಹಿಂಬದಿ ಸೀಟ್ ಬೆಲ್ಟ್ ಹಾಕದಿದ್ರೂ ದಂಡ!

ವಿಮಾ ಕಂಪನಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಇತ್ತ ಕೇಂದ್ರ ಸರ್ಕಾರದ ಜೊತೆಗೂ ಮಾತುಕತೆ ನಡೆಯುತ್ತಿದೆ. ಆರಂಭಿಕ ಹಂತದ ಮಾತುರತೆ ಫಲಪ್ರದವಾಗಿದೆ. ಇದರೊಂದಿಗೆ ಕೆಲ ನಿಯಮಗಳ ಮಾರ್ಪಾಡು ಮಾಡಲಾಗುತ್ತದೆ. ಬಳಿಕ ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.

ಟ್ರಾಫಿಕ್ ನಿಯಮ ಪಾಲಿಸಲು ಉತ್ತೇಜನ
ಜಾರಿಗೆ ತರಲು ಉದ್ದೇಶಿಸಿರುವ ಹೊಸ ವಿಮಾ ನಿಯಮ, ಟ್ರಾಫಿಕ್ ನಿಯಮ ಚಾಚೂ ತಪ್ಪದೆ ಪಾಲಿಸಲು ಉತ್ತೇಜನ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ತಗ್ಗಲಿದೆ. ಜೊತೆಗೆ ನಿಯಮ ಪಾಲಿಸುವ ಮಂದಿಗೆ ಪ್ರಯೋಜನಗಳಾಗಲಿವೆ. ಇತರರು ನಿಯಮ ಪಾಲಿಸಲು ಪ್ರೇರಣೆ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios