ಹೊಸ ವರ್ಷಾಚರಣೆಗೆ ಕಾಫಿನಾಡಿನತ್ತ ಪ್ರವಾಸಿಗರ ದಂಡು: ಹೋಂ ಸ್ಟೇ, ರೆಸಾರ್ಟ್ ಹೌಸ್‌ಫುಲ್!
ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.30): ಇಯರ್ ಎಂಡ್ ಅಂದ್ರೆ ಏನೋ ಸಂಭ್ರಮ, ಸಡಗರ. ಹೊಸ ಮನ್ವಂತರಕ್ಕೆ ಸಾಕ್ಷಿಯಾಗುವ ಸುಸಮಯ. ಹಾಗಾಗಿ, 2023ಕ್ಕೆ ಟಾಟಾ ಹೇಳಿ, 24ಕ್ಕೆ ವೆಲ್ಕಂ ಹೇಳೋಕೆ ಈಗಾಗ್ಲೇ ಪ್ಲಾನ್ ರೆಡಿಯಾಗಿದೆ. ಜನ ತಮ್ಮ ಫೇವರಿಟ್ ಸ್ಪಾಟ್ಗಳಿಗೆ ಹೋಗಿ ಸೆಟ್ಲ್ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಾಫಿನಾಡು ಚಿಕ್ಕಮಗಳೂರಂತೂ ಫುಲ್ ಹೌಸ್ಫುಲ್. ಎಲ್ಲಿ ನೋಡಿದ್ರು ಪ್ರವಾಸಿಗರ ದಂಡು. ಇಯರ್ ಎಂಡ್ ಆಗಿರೋದ್ರಿಂದ ರಾಜ್ಯದ ಎತ್ತರದ ಪ್ರದೇಶವಾಗಿರೋ ಮುಳ್ಳಯ್ಯನಗಿರಿಯಲ್ಲಿ ಪ್ರತಿ ದಿನ ಜನಸಾಗರವೇ ಸೇರ್ತಿದೆ. ಹಾಗಾಗಿ, ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ಫುಲ್ ಬುಕ್ ಆಗಿವೆ. ಬಹುತೇಕರು ಇಯರ್ ಎಂಡ್, ನ್ಯೂ ಇಯರ್ಗೆ ಬುಕ್ ಮಾಡಿಸಿದ್ದಾರೆ.
800 ಹೋಂ ಸ್ಟೇ, 40ಕ್ಕೂ ಹೆಚ್ಚು ರೆಸಾರ್ಟ್ ಭರ್ತಿ: ಕಾಫಿನಾಡ ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾಗಿದ್ದಾರೆ. 10-15 ದಿನ ಕೆಲವರು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಿದ್ದಾರೆ. ಕಾಫಿನಾಡಲ್ಲಿರೋ ಸುಮಾರು 800ಕ್ಕೂ ಅಧಿಕ ಹೋಂಸ್ಟೇ ಹಾಗೂ 40ಕ್ಕೂ ಹೆಚ್ಚು ರೆಸಾರ್ಟ್ಗಳು ಆಲ್ ಮೋಸ್ಟ್ ಬುಕ್ ಆಗಿವೆ. ಫುಲ್ ಆಗಿವೆ. ಡಿಸೆಂಬರ್ ತಿಂಗಳಲ್ಲಿ ಕಾಫಿನಾಡಿಗೆ 11 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದ್ರೆ, ಡಿಸೆಂಬರ್ ಇಂದು ನಾಳೆ ಹಾಗೂ ಜನವರಿ 1ರ ಮೂರೇ ದಿನಕ್ಕೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಪ್ರವಾಸಿಗರು ಕಾಫಿನಾಡಲ್ಲಿ ಜಮಾಯಿಸುವ ಸಾಧ್ಯತೆ ಇದೆ ಎನ್ನುವ ಲೆಕ್ಕಚಾರವನ್ನು ಪ್ರವಾಸೋದ್ಯಮ ಇಲಾಖೆ ಹಾಕಿದೆ.
ಡಿಸಿಎಂ ಹುದ್ದೆ ಬಿಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ಪರಮೇಶ್ವರ್
ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆ: ಕಾಂಕ್ರೀಟ್ ಕಾಡಿನ ಮಧ್ಯೆ ವಾಯು ಹಾಗೂ ಶಬ್ಧ ಮಾಲಿನ್ಯದಿಂದ ಕಳೆದು ಹೋಗಿದ್ದ ಪ್ರವಾಸಿಗರಿಗೆ ಭೂಲೋಕದ ಸ್ವರ್ಗ ಕಾಫಿನಾಡು ವಿಶಿಷ್ಟ ಅನುಭವ ನೀಡೋದು ಗ್ಯಾರಂಟಿ. ಪರ್ವತ ಶ್ರೇಣಿಗಳಲ್ಲಿ ನಿಮಿಷಕ್ಕೊಮ್ಮೆ ಬದಲಾಗೋ ಪ್ರಕೃತಿಯ ವಿಸ್ಮಯ ಕಂಡು ಪ್ರವಾಸಿಗ್ರು ಮೈಮರೆಯುತ್ತಿದ್ದಾರೆ. ಆದ್ರೆ, ಪ್ರವಾಸಿಗರ ದಂಡನ್ನ ಕಂಡ ಕೆಲ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್ ಮಾಲೀಕರು ಪ್ರವಾಸಿಗರಿಂದ ದುಬಾರಿ ಹಣ ಕೇಳ್ತಿರೋದು ಉಂಟು. ಆದ್ರೆ, ಆಯ್ತು ಕೊಡ್ತೀವಿ. ಮೊದ್ಲು ರೂಂ ಕೊಡಿ ಎಂದೇಳ್ತಿರೋ ಪ್ರವಾಸಿಗ್ರು ಇದ್ದಾರೆ. ಜಿಲ್ಲೆಯ ಬಹುತೇಕ ಹೋಂಸ್ಟೆ, ರೆಸಾರ್ಟ್, ಲಾಡ್ಜ್ಗಳು ಭರ್ತಿಯಾಗಿದ್ದು, ಬುಕ್ಕಿಂಗ್ ಕ್ಯಾನ್ಸಲ್ ಆದ್ರಷ್ಟೆ ರೂಂ ಸಿಗೋದು ಎಂಬಂತಾಗಿದೆ.
ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ
ಇನ್ನು ಹೋಂಸ್ಟೆ, ರೆಸಾರ್ಟ್ ಮಾಲೀಕರು ಕೂಡ ಬಗೆಬಗೆಯ ಭೋಜನ, ಡಿಜೆ ಪಾರ್ಟಿ, ಫೈರ್ ಕ್ಯಾಂಪ್ ಸೇರಿದಂತೆ ಪ್ರವಾಸಿಗರ ಬೇಡಿಕೆಯನ್ನ ಈಡೇರಿಸೋದಕ್ಕೆ ಸನ್ನದ್ಧರಾಗಿದ್ದಾರೆ. ಒಟ್ಟಾರೆ, ಕಳೆದ ವರ್ಷ ಕೊರೋನಾ ಆತಂಕವಿದ ನಡುವೆಯೂ ನಿರಾತಂಕವಾಗಿ ಹೊಸ ವರ್ಷ ಆಚರಣೆ ಮಾಡಿದ್ದ ಜನ ಈ ವರ್ಷ ಮತ್ತೆ ಕೊರೋನಾ ಭಯದ ನೆರಳಲ್ಲೇ ಹೊಸ ವರ್ಷಕ್ಕೆ ವೆಲ್ ಕಂ ಹೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಪ್ರವಾಸಿಗರು ಮಾತ್ರ ಯಾವ ಕೊರೋನಾಗು ತಲೆ ಕೇಡಿಸಿಕೊಳ್ತಿಲ್ಲ. ಬರೋದೆಲ್ಲಾ ಬರ್ಲಿ ಅಂತ ಕೊರೋನಾ ಭಯದ ಮಧ್ಯೆಯೂ ಹೊಸ ವರ್ಷ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಸದ್ಯಕ್ಕೆನೋ ಸರ್ಕಾರ ಕೂಡ ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹಾಗಾಗಿ, ಖುಷಿಯಾಗಿರೋ ಪ್ರವಾಸಿಗರು ಕಾಫಿನಾಡಲ್ಲಿ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆ ಮಾಡ್ಕೊಂಡು ಭಾನುವಾರ ರಾತ್ರಿಯಾಗೋದ್ನೆ ಕಾಯ್ತಿದ್ದಾರೆ.