ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲ: ಕೋಟ ಶ್ರೀನಿವಾಸ್ ಪೂಜಾರಿ

ರಾಜ್ಯ ಸರ್ಕಾರದ ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವಿಲ್ಲದಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. 

Kota Srinivas Poojary Outraged Against Congress Govt At Hassan gvd

ಸಕಲೇಶಪುರ (ಡಿ.30): ರಾಜ್ಯ ಸರ್ಕಾರದ ಉಚಿತ ಕೊಡುಗೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುಧಾನವಿಲ್ಲದಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಎಂದು ಕಂಡರಿಯದಂತ ಆರ್ಥಿಕ ದುಸ್ಥಿತಿಗೆ ರಾಜ್ಯ ಈಡಾಗಿದ್ದು, ಸಾಲದ ಹೊರೆ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿದೆ. ಇದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.

ರಾಜ್ಯದ ಯಾವುದೆ ಕ್ಷೇತ್ರದ ಶಾಸಕರು ಅಭಿವೃದ್ಧಿಗೆ ಅನುದಾನ ನೀಡದ ಪರಿಣಾಮ ಶಾಸಕರು ಕ್ಷೇತ್ರಕ್ಕೆ ತೆರಳಲು ಹಿಂದೇಟು ಹಾಕುವಂತಾಗಿದೆ. ಉಚಿತ ಕೂಡುಗೆ ಪರಿಣಾಮ ರೈತರ ಮೇಲೂ ಬೀರಿದ್ದು ಬರಗಾಲದಿಂದ ರಾಜ್ಯದಲ್ಲಿ ೩೩ ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂಬ ವರಧಿ ಇದೆ. ಆದರೆ ಇದುವರಗೆ ೩೨೪ ಕೋಟಿ ಮಾತ್ರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. 

ಇದರಲ್ಲೂ ಶೇ ೭೫ ಕೇಂದ್ರದ ಅನುದಾನವಾದರೆ ಶೇ ೨೫ ರಷ್ಟು ಅನುದಾನ ಮಾತ್ರ ರಾಜ್ಯ ಸರ್ಕಾರದ್ದು ರೈತರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಆರೋಪದಲ್ಲೇ ಕಾಲ ಕಳೆಯುತ್ತಿರುವ ರಾಜ್ಯಸರ್ಕಾರ ಇಡಿ ಸಮಸ್ಯೆಯನ್ನು ಕೇಂದ್ರದ ಮೇಲೆ ಹೊರಿಸುವ ಯತ್ನ ನಡೆಸುತ್ತಿದೆ. ರಾಜ್ಯ ಸರ್ಕಾರ ಮೊದಲು ಗೊಬ್ಬರ, ಬೀಜಕ್ಕಾಗಿ ೧೦ ಸಾವಿರ ಕೋಟಿ ಬಿಡುಗಡೆ ಮಾಡಲಿ. ನಂತರ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳೋಣ ಎಂಬ ವಿರೋಧ ಪಕ್ಷದ ನಾಯಕರ ಆಗ್ರಹಕ್ಕೆ ಯಾವುದೆ ಕಿಮ್ಮತ್ತು ಇಲ್ಲದಾಗಿದೆ ಎಂದರು.

ಯತ್ನಾಳ್ ಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಬ್ಬರ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ!

ಯತ್ನಾಳ್ ಬಗ್ಗೆ ನಿರ್ಧಾರ: ಈಗಾಗಲೇ ಪಕ್ಷದ ಮುಖಂಡರ ಬಗ್ಗೆ ಅಪಸ್ವರ ಎತ್ತುವ ಮೂಲಕ ವಿರೋದ ಪಕ್ಷದ ನಾಯಕರಂತೆ ನಡೆದುಕೊಳ್ಳುತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ದೂರು ಸಲ್ಲಿಕೆಯಾಗಿದ್ದು ವರೀಷ್ಠರು ಸರಿಯಾದ ನಿರ್ಧಾರ ತೆಳೆಯಲಿದ್ದಾರೆ ಎಂದರು. ಈ ವೇಳೆ ಶಾಸಕ ಸೀಮೆಂಟ್ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios