ಕೊಂಚ ಇಳಿದ ದರ ಸ್ಥಿರವಾಗಿ ನಿಲ್ಲುವ ಅಥವಾ ಸದ್ಯಕ್ಕೆ ಬೆಲೆ ಇಳಿಯುವ ಯಾವುದೇ ಲಕ್ಷಣವಿಲ್ಲ. ಬಕ್ರೀದ್ ಕಾರಣಕ್ಕೆ ಸ್ವಲ್ಪ ಕಡಿಮೆ ಆಗಿದ್ದಿರಬಹುದು. ಇನ್ನೂ ನಾಲ್ಕೈದು ದಿನಗಳ ಕಾಲ ಹೆಚ್ಚೂ ಕಡಿಮೆ ಇದೆ ದರ ಮುಂದುವರೆಯಬಹುದು, ಆದರೆ ಇತರೆಡೆಯಿಂದ ಟೊಮೆಟೋ ಮಾರುಕಟ್ಟೆಗೆ ಬಂದಲ್ಲಿ ಮಾತ್ರ ಬೆಲೆ ನಿಯಂತ್ರಣವಾಗಬಹುದು.
ಬೆಂಗಳೂರು(ಜೂ.28): ಶತಕ ದಾಟಿರುವ ಟೊಮೆಟೋ ದರ ಮಂಗಳವಾರವೂ ದುಬಾರಿಯಾಗಿಯೇ ಮುಂದುವರಿದಿದ್ದು, ರಾಜ್ಯ ರಾಜಧಾನಿಯ ಪ್ರಮುಖ ಮಂಡಿಗಳಿಗೆ ತುಸು ಹೆಚ್ಚಿನ ಪ್ರಮಾಣದ ಟೊಮೆಟೋ ಬಂದಿದ್ದರಿಂದ ಬೆಲೆ ಕೊಂಚ ಇಳಿಕೆಯಾಗಿತ್ತು. ಸೋಮವಾರಕ್ಕೆ ಹೋಲಿಸಿದರೆ ಹಾಪ್‌ಕಾಮ್ಸ್‌ನಲ್ಲಿ 15 ಕಡಿಮೆಯಾಗಿ ಒಂದು ಕೆಜಿಗೆ 110ಗೆ ಮಾರಾಟವಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲೂ ಹೆಚ್ಚು ಕಡಿಮೆ ಇದೇ ದರವಿತ್ತು.
ಗುಣಮಟ್ಟಕ್ಕೆ ತಕ್ಕಂತೆ ಟೊಮೆಟೋ ಬೆಲೆ ನಗರದ ವಿವಿಧೆಡೆ ಭಿನ್ನವಾಗಿದ್ದು, ನಗರದ ಗಾಂಧಿ ಬಜಾರ್, ಮಲ್ಲೇಶ್ವರ, ಜೆ.ಪಿ.ನಗರ, ಜಯನಗರ, ನಂದಿನಿ ಲೇಔಟ್, ಯಶವಂತಪುರ ಸೇರಿ ಎಲ್ಲ ಚಿಲ್ಲರೆ ಮಾರುಕಟ್ಟೆಯಲ್ಲಿ ಬಹುತೇಕ ಕನಿಷ್ಠ .80 ರಿಂದ ಗರಿಷ್ಠ . 110ವರೆಗೆ ವ್ಯಾಪಾರವಾಗಿದೆ. ಸಗಟು ಮಾರುಕಟ್ಟೆ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗೆ ಹೆಚ್ಚಿನ ಟೊಮೆಟೋ ಲಾರಿಗಳು ಬಂದಿದ್ದವು. ಮೊದಲ ದರ್ಜೆಯ ನಾಟಿ ಟೊಮೆಟೋ 22 ಕೆಜಿ ಬಾಕ್ಸ್ ಸೋಮವಾರ 2000 ಬಿಕರಿಯಾಗಿತ್ತು. ಆದರೆ, ಮಂಗಳವಾರ ಈ ದರ ಇಳಿಕೆಯಾಗಿ . 1800- .1600 ಮಾರಾಟವಾಯಿತು. ಮೂರನೇ ದರ್ಜೆಯ ಬೆಳೆ . 1200- . 1500 ಬೆಲೆಯಿತ್ತು. 15 ಕೆಜಿ ಬಾಕ್ಸ್‌ಗೆ . 1100- . 900 ವರೆಗಿತ್ತು.
ಟೊಮೆಟೋ ದರ 125: ಈವರೆಗಿನ ಗರಿಷ್ಠ ದಾಖಲೆ, ಗ್ರಾಹಕರ ಜೇಬಿಗೆ ಕತ್ತರಿ..!
ಸದ್ಯಕೆ ಬೆಲೆ ಇಳಿಕೆ ಲಕ್ಷಣವಿಲ್ಲ:
ದರ ನೂರರ ಗಡಿ ದಾಟಿದೆ ಹೆಚ್ಚಾಗಿದೆ ಎಂಬ ಸುದ್ದಿಯಿಂದ ದಾಸ್ತಾನಿದ್ದ ಟೊಮೆಟೋ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದ ಕಾರಣ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಕೊಂಚ ಇಳಿದ ದರ ಸ್ಥಿರವಾಗಿ ನಿಲ್ಲುವ ಅಥವಾ ಸದ್ಯಕ್ಕೆ ಬೆಲೆ ಇಳಿಯುವ ಯಾವುದೇ ಲಕ್ಷಣವಿಲ್ಲ. ಬಕ್ರೀದ್ ಕಾರಣಕ್ಕೆ ಸ್ವಲ್ಪ ಕಡಿಮೆ ಆಗಿದ್ದಿರಬಹುದು. ಇನ್ನೂ ನಾಲ್ಕೈದು ದಿನಗಳ ಕಾಲ ಹೆಚ್ಚೂ ಕಡಿಮೆ ಇದೆ ದರ ಮುಂದುವರೆಯಬಹುದು, ಆದರೆ ಇತರೆಡೆಯಿಂದ ಟೊಮೆಟೋ ಮಾರುಕಟ್ಟೆಗೆ ಬಂದಲ್ಲಿ ಮಾತ್ರ ಬೆಲೆ ನಿಯಂತ್ರಣವಾಗಬಹುದು ಎಂದು ವರ್ತಕರು ತಿಳಿಸಿದ್ದಾರೆ.
ಆಹಾರ ಧಾನ್ಯ ಬೆಲೆ ಹೆಚ್ಚಳ ತಡೆ ಕೇಂದ್ರದ ಕೆಲಸ: ಸಿಎಂ ಸಿದ್ದರಾಮಯ್ಯ
ರೈತರಲ್ಲಿ ಟೊಮೆಟೋ ಇಲ್ಲ:
ಕೇವಲ ಒಂದೆರಡು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್‌ಗೆ 50 ರು.ನಂತೆ ಮಾರಿ ಹೋಗಿದ್ದೇವೆ. ಈಗ ನಗರದ ಮಾರುಕಟ್ಟೆಗಳಲ್ಲಿ ಟೊಮೆಟೋಗೆ ಬೆಲೆಯೇನೋ ಇದೆ. ಆದರೆ, ನಮ್ಮ ಬಳಿ ಉತ್ಪನ್ನವೇ ಇಲ್ಲ. ಹಿಂದೆ ಮಳೆ ವೈಪರಿತ್ಯಕ್ಕೆ ಟೊಮೆಟೋ ನಾಶವಾಗಿದೆ. ಈಗ ಕಾಯಿ ಬಿಟ್ಟಸಸಿಗಳೂ ಇಲ್ಲ. ಹಿಂದಿನ ದಿನಗಳಲ್ಲಿನ ನಷ್ಟವನ್ನು ಈಗ ಒಂದಿಷ್ಟು ತುಂಬಿಕೊಂಡಂತಾಗುತ್ತಿದೆ ಅಷ್ಟೇ ಎಂದು ಮಾರುಕಟ್ಟೆಗೆ ಬಂದಿದ್ದ ರೈತರು ಹೇಳಿದರು.
ಉಳಿದವೂ ಕಡಿಮೆಯಿಲ್ಲ
ಬೀನ್ಸ್, ನವಿಲುಕೋಸು ಬೆಲೆ ಕೂಡ ಏರಿಕೆಯಾಗುತ್ತಲೇ ಇದೆ. ಇದರ ಜೊತೆಗೆ ಹಸಿಶುಂಠಿ ಕಳೆದ 12 ದಿನಗಳಲ್ಲಿ ಪುನಃ 10-15ರು. ಏರಿಕೆಯಾಗಿ ಕೆಜಿಗೆ . 270ರಷ್ಟಾಗಿದೆ. ಬ್ರಕೋಲಿ ಬೆಲೆಯಲ್ಲಿ . 30 ರು ಕಡಿಮೆಯಾಗಿದ್ದು ಸದ್ಯ . 170 ಇದೆ.
ತರಕಾರಿ ದರ
ಟೊಮೆಟೋ .110
ಬಟಾಣಿ .208
ಡಬ್ಬಲ್ ಬೀನ್ಸ್ .250
ಕ್ಯಾರೆಟ್ .90
ಗೆಡ್ಡೆಕೋಸು .80
ಹಸಿಮೆಣಸಿಕಾಯಿ .120
ಹಸಿಶುಂಠಿ .272
