ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್‌ಐಟಿ) ಆರನೇ ಆವೃತ್ತಿಯ ಮೀಡಿಯಾ ಅವಾರ್ಡ್ಸ್ನಲ್ಲಿ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ಸಂಗೀತ ಕ್ಷೇತ್ರದ ಸಾಧಕಿ ಮಂಜುಳಾ ಗುರುರಾಜ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು (ಮಾ.7) : ದಿ ನ್ಯೂ ಇಂಡಿಯನ್ ಟೈಮ್ಸ್ (ಟಿಎನ್‌ಐಟಿ) ಆರನೇ ಆವೃತ್ತಿಯ ಮೀಡಿಯಾ ಅವಾರ್ಡ್ಸ್ನಲ್ಲಿ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ(Ravi Hegde) ಹಾಗೂ ಸಂಗೀತ ಕ್ಷೇತ್ರದ ಸಾಧಕಿ ಮಂಜುಳಾ ಗುರುರಾಜ್(Manjula gururaj) ಅವರಿಗೆ ಜೀವಮಾನ ಸಾಧನೆ(lifetime achievement) ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ರವೀಂದ್ರ ಕಲಾಕ್ಷೇತ್ರ(Rabindra Kalakshetra)ದಲ್ಲಿ ಸೋಮವಾರ ನಡೆದ ಟಿಎನ್‌ಐಟಿ ಮೀಡಿಯಾ ಅವಾರ್ಡ್ಸ್(TNIT Media Awards) ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Pejavar shree), ಹಿರಿಯ ನಟ ದತ್ತಣ್ಣ ಅವರು ಪುರಸ್ಕರಿಸಿದರು. ಜತೆಗೆ ಮಾಧ್ಯಮ ಕ್ಷೇತ್ರದ ಸಂಪಾದಕೀಯ, ವರದಿಗಾರಿಕೆ, ನಿರೂಪಣೆ, ಛಾಯಾಗ್ರಹಣ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವಮಾಧ್ಯಮಕ್ಕೆ ಗೇಟ್‌ಕೀಪರ್ ವ್ಯವಸ್ಥೆ ಅಗತ್ಯ: ಪತ್ರಕರ್ತರ ಸಮ್ಮೇಳನದಲ್ಲಿ ರವಿ ಹೆಗಡೆ ಸಲಹೆ
ಸುವರ್ಣ ನ್ಯೂಸ್(Asianet suvarna news)ನ ಉತ್ತಮ ಜ್ಯೋತಿಷ್ಯ ಕಾರ್ಯಕ್ರಮಕ್ಕಾಗಿ ಶ್ರೀಕಾಂತ ಶಾಸ್ತ್ರಿ(Shrikanha shashtri), ಸಿನಿಮಾ ವರದಿಗಾರಿಕೆಗೆ ವಿಜಯ್ ಆರ್., ಅಪರಾಧ ವರದಿಗಾರಿಕೆಗೆ ರಮೇಶ್ ಕೆ.ಎಚ್., ಬೆಸ್ಟ್ ರೆಸ್ಟ್ ಆಫ್ ಕರ್ನಾಟಕ ವರದಿಗಾರಿಕೆ ವಿಭಾಗದಲ್ಲಿ ಷಡಕ್ಷರಿ ಕಂಪುನವರ್ ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಪ್ರಸಾದ್ ಅವರು ಪ್ರಶಸ್ತಿ ಪಡೆದರು.
ಇನ್ನು, ಬೆಸ್ಟ್ ಪ್ರಾಮಿಸಿಂಗ್ ಎಡಿಟೋರಿಯಲ್‌ಗೆ ನಿಖಿಲ್ ಜೋಶಿ, ಬೆಸ್ಟ್ ಮೆಮೋರೆಬಲ್ ಆ್ಯಂಕರ್ ಶೀತಲ್ ಶೆಟ್ಟಿ, ಪ್ರಾಮಿಸಿಂಗ್ ಚಾನಲ್ ವಿಸ್ತಾರ ನ್ಯೂಸ್‌ನ ಪರಶುರಾಮ, ಪ್ರೈಡ್ ಆಫ್ ಕರ್ನಾಟಕ ಡಾ
ನಿರ್ಮಲಾ ಯಲಿಗಾರ್, ತನಿಖಾ ಪತ್ರಿಕೋದ್ಯಮಕ್ಕಾಗಿ ರಾಕೇಶ್ ಶೆಟ್ಟಿ, ಮಾಲತೇಶ್, ಮಹಿಳಾ ವಿಭಾಗದಲ್ಲಿ ದೀಪಿಕಾ ಬಿ., ಉತ್ತಮ ನಿರೂಪಣೆಗೆ ಶ್ರೀನಿವಾಸ್ ಆರ್.ಹಳಕಟ್ಟಿ, ನವಿತಾ ಜೈನ್, ಹಿನ್ನೆಲೆ ಧ್ವನಿಗಾಗಿ ಗೋಪಾಲಕೃಷ್ಣ ಜಿ.ಬಿ., ಸಂದೇಶ್ ಎಸ್. ಕಾಮತ್, ಅಪೇಕ್ಷಾ , ಪ್ರತೀಕ್ಷಾ ಗೌಡ, ಅತ್ಯುತ್ತಮ ನಿರೂಪಕ ಪ್ರಶಸ್ತಿಯನ್ನು ವಿದ್ಯಾಶ್ರೀ, ಶಮಂತ್, ಪೃಥ್ವಿರಾಜ ಹಾರನಹಳ್ಳಿ, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ವಿನೋದ್‌ಕುಮಾರ್ ಎಸ್.ಜಿ., ಪ್ರಾಮಿಸಿಂಗ್ ವಾಯ್‌್ಸ ಓವರ್‌ಗಾಗಿ ಸೈಯದ್ ಇದಾಯತ್, ಪ್ರಾಮಿಸಿಂಗ್ ವಿಡಿಯೋ ಎಡಿಟರ್ ಪ್ರಕಾಶ್ ಎಚ್.ಎಲ್., ರೆಸ್ಟ್ ಆಫ್ ಕರ್ನಾಟಕ ಛಾಯಾಗ್ರಹಣಕ್ಕಾಗಿ ಮಾರುತಿ ಹನುಮಂತಪ್ಪ ಕಟ್ಟಿಮನಿ, ಉತ್ತಮ ವಿಡಿಯೋ ಎಡಿಟರ್ ಪ್ರಭು ಎ., ರಾಜೇಶ್ ವಿ., ಲಾವಣ್ಯ, ಸುಶ್ಮನ್ ಎಚ್.ಎಸ್., ಉತ್ತಮ ಮೆಟ್ರೋ ವರದಿಗಾರಿಕೆಗಾಗಿ ಸ್ವಾತಿ ಹುಲಗಂಟಿ, ರಘು ಪೌಲ್, ಬೆಸ್ಟ್ ಸೌಥ್‌ವೆಸ್ಟ್ ರಿಪೋರ್ಟರ್ ಮೋಹನ್ ಕೃಷ್ಣ, ಷಡಕ್ಷರಿ ಕಂಪುನವರ್ ಪ್ರಶಸ್ತಿಯನ್ನು ಪಡೆದರು.
ಎಸ್‌ಡಿಎಂಸಿ ಉಜಿರೆ ಕಾಲೇಜು(SDMC Ujire College), ಕುವೆಂಪು ವಿಶ್ವವಿದ್ಯಾಲಯ(Kuvempu University) ಹಾಗೂ ಬೆಂಗಳೂರು ವಿಶ್ವವಿದ್ಯಾಲಯ(Bengaluru University)ದ ಪತ್ರಿಕೋದ್ಯಮ ವಿಭಾಗಗಳಿಗೆ ಅತ್ಯುತ್ತಮ ಪತ್ರಿಕೋದ್ಯಮ ಶಿಕ್ಷಣ ಪ್ರಶಸ್ತಿ ನೀಡಲಾಯಿತು.
ಸುದ್ದಿ ನೀಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯೂ ಮಾಧ್ಯಮಗಳ ಹೊಣೆ: ರವಿ ಹೆಗಡೆ
ಕಾರ್ಯಕ್ರಮದಲ್ಲಿ ಟಿಎನ್‌ಐಟಿ ಸಂಸ್ಥಾಪಕ ರಘು ಭಟ್(Raghu bhat), ನಿರ್ದೇಶಕ ಟಿ.ಎಸ್.ನಾಗಾಭರಣ(TS Nagabharan), ಪ್ರೇಮ್, ಶರಣ್, ಸಪ್ತಮಿಗೌಡ, ಅನುಪ್ರಭಾಕರ್, ರಘು ಮುಖರ್ಜಿ, ಮೇಘನಾ ಗಾಂವ್ಕರ್ ಸೇರಿ ಹಲವರಿದ್ದರು.
