ಸುದ್ದಿ ನೀಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯೂ ಮಾಧ್ಯಮಗಳ ಹೊಣೆ: ರವಿ ಹೆಗಡೆ
ಕೇವಲ ಸುದ್ದಿ ನೀಡುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯಲ್ಲ. ಸಾಮಾಜಿಕ ಕಳಕಳಿಯ ಜತೆಗೆ ಪರಿಸರ ಹಾಗೂ ಎಲ್ಲ ಜೀವ ಸಂಕುಲವನ್ನು ಸಂರಕ್ಷಿಸುವ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ. ಈ ಜವಾಬ್ದಾರಿ ನಿರ್ವಹಣೆಯಡಿ ‘ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ’ ಇಂತಹ ವಿಶೇಷ ಅಭಿಯಾನ ನಡೆಸಿಕೊಂಡು ಬರುತ್ತಿದೆ ಎಂದು ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು.
ಬೆಂಗಳೂರು (ಜ.05): ಕೇವಲ ಸುದ್ದಿ ನೀಡುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯಲ್ಲ. ಸಾಮಾಜಿಕ ಕಳಕಳಿಯ ಜತೆಗೆ ಪರಿಸರ ಹಾಗೂ ಎಲ್ಲ ಜೀವ ಸಂಕುಲವನ್ನು ಸಂರಕ್ಷಿಸುವ ಜವಾಬ್ದಾರಿಯೂ ಮಾಧ್ಯಮಗಳ ಮೇಲಿದೆ. ಈ ಜವಾಬ್ದಾರಿ ನಿರ್ವಹಣೆಯಡಿ ‘ಏಷ್ಯಾನೆಟ್ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ’ ಇಂತಹ ವಿಶೇಷ ಅಭಿಯಾನ ನಡೆಸಿಕೊಂಡು ಬರುತ್ತಿದೆ ಎಂದು ಪ್ರಧಾನ ಸಂಪಾದಕ ರವಿ ಹೆಗಡೆ ತಿಳಿಸಿದರು. ‘ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ’ ವತಿಯಿಂದ ಹಮ್ಮಿಕೊಂಡಿರುವ 4ನೇ ಆವೃತ್ತಿಯ ‘ವನ್ಯಜೀವಿಗಳ ಸಂರಕ್ಷಣೆ ಅಭಿಯಾನ’ದ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು.
2017 ರಿಂದ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡು ರಾಜ್ಯದ ಕಾಡಂಚಿನ ಗ್ರಾಮಗಳೂ ಸೇರಿದಂತೆ ಸಮಾಜದ ಎಲ್ಲ ಜನರದಲ್ಲಿ ನಮ್ಮ ಸಂಸ್ಥೆಗಳಿಂದ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದೇವೆ. ಈ ಹಿಂದೆ ಅಭಿಯಾನದ ಮೂರು ಆವೃತ್ತಿಗಳಲ್ಲೂ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ವನ್ಯಜೀವಿಗಳ ಸಂರಕ್ಷಣೆಗೆ ಸಹಕಾರಿಯಾಗಿದೆ ಎಂದರು. ಇದೀಗ ವನ್ಯಜೀವಿ ಸಂರಕ್ಷಣೆ ಬಗ್ಗೆ ಜನರಲ್ಲಿ ಇನ್ನಷ್ಟುಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ನಾಲ್ಕನೇ ಆವೃತ್ತಿಯನ್ನು ಆರಂಭಿಸಿದ್ದೇವೆ. ನಮ್ಮ ಸಂಸ್ಥೆಗಳು ರಾಜ್ಯದಲ್ಲಿ ಇಂತಹ ಸಾಮಾಜಿಕ ಜವಾಬ್ದಾರಿಯ ವಿಶೇಷ ಅಭಿಯಾನ ನಡೆಸುತ್ತಿರುವ ಏಕೈಕ ಮಾಧ್ಯಮ ಸಂಸ್ಥೆಗಳು ಎಂಬ ಹೆಮ್ಮೆ ನಮ್ಮದಾಗಿದೆ ಎಂದರು.
ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ರಿಷಬ್ ಶೆಟ್ಟಿ ರಾಯಭಾರಿ
ಪರಿಸರ ಸಂಕ್ಷರಣೆ ಪ್ರತಿಯೊಬ್ಬರ ಹೊಣೆ: ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಹೊಣೆಯಾಗಿದೆ. ಈ ಜವಾಬ್ದಾರಿ ನನ್ನದಲ್ಲ ಎಂದು ಯಾರೂ ಹೇಳುವಂತಿಲ್ಲ. ಇದನ್ನು ಅರಿತು ನಮ್ಮ ಬ್ಯಾಂಕ್‌ನಿಂದ ನಾವೂ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದೇವೆ ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಭಟ್ ತಿಳಿಸಿದರು. ‘ವನ್ಯಜೀವಿಗಳ ಸಂರಕ್ಷಣೆ ಅಭಿಯಾನ’ದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಟ ರಿಷಬ್ ಶೆಟ್ಟಿಅವರು ತಮ್ಮ ಕಾಂತಾರ ಸೇರಿ ಹಲವು ಚಿತ್ರಗಳಲ್ಲಿ ಅರಣ್ಯ, ಪರಿಸರ ಸಂಕ್ಷರಣೆ, ವನ್ಯಜೀವಿಗಳ ಉಳಿವಿನ ವಿಚಾರಗಳ ಬಗ್ಗೆ ಹಾಗೂ ದೈವದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಲವ್ ಜಿಹಾದ್ ನಿಷೇಧ ಕಾಯ್ದೆ ವಿಚಾರ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ
ಇಂತಹ ಚಿತ್ರಗಳ ಮೂಲಕ ಜನ ಜಾಗೃತಿ ನಡೆಸಿರುವ ನಟರನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಾಮಾಜಿಕ ಜವಾಬ್ದಾರಿಯಿಂದ ಆಯೋಜಿಸಿರುವ ವನ್ಯಜೀವಿ ಸಂರಕ್ಷಣೆಯ ಅಭಿಯಾನದ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು. ಇಂತಹ ದೊಡ್ಡ ನಟ ಯಾವುದೇ ಸಂಭಾವನೆ ಇಲ್ಲದೆ ರಾಯಭಾರಿಯಾಗಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಇದು ಯಾರೊ ಒಬ್ಬರು ಮಾಡುವ ಕೆಲಸವಲ್ಲ ಎಲ್ಲರೂ ಕೈಜೋಡಿಸಬೇಕು. ಹಾಗಾಗಿ ನಾವೂ ಕೂಡ ಭಾಗಿಯಾಗಿದ್ದೇವೆ. ಅದರಲ್ಲೂ ನಮ್ಮ ಬ್ಯಾಂಕ್‌ನ ಶತಮಾನೋತ್ಸವ ಸಂದರ್ಭದಲ್ಲಿ ಇಂತಹ ಒಳ್ಳೆಯ ಉದ್ದೇಶಕ್ಕೆ ಭಾಗಿಯಾಗಿರುವ ತೃಪ್ತಿ ಇದೆ ಎಂದರು.