Nandini VS Amul: ಅಣ್ಣಾವ್ರು ನಟಿಸಿದ್ದು ಒಂದೇ ಜಾಹೀರಾತು, ಅಂಥಾ ನಂದಿನಿಗೆ ಬಂದಿತೇಕೆ ಆಪತ್ತು?
ಗುಜರಾತ ಮೂಲದ ಅಮುಲ್ ಕಂಪನಿ ರಾಜ್ಯದ ಅಸ್ಮಿತೆಯಾಗಿರುವ ಕೆಎಂಎಫ್ ನಂದಿನಿ ಬ್ರಾಂಡ್ ಅಪೋಶನ ತೆಗೆದುಕೊಳ್ಳುತ್ತಿದೆ ಎಂಬ ವಿಚಾರವಾಗಿ ರಾಜ್ಯಾದ್ಯಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬೆಂಗಳೂರು (ಏ.8) :ಗುಜರಾತ ಮೂಲದ ಅಮುಲ್ ಕಂಪನಿ ರಾಜ್ಯದ ಅಸ್ಮಿತೆಯಾಗಿರುವ ಕೆಎಂಎಫ್ ನಂದಿನಿ ಬ್ರಾಂಡ್ ಅಪೋಶನ ತೆಗೆದುಕೊಳ್ಳುತ್ತಿದೆ ಎಂಬ ವಿಚಾರವಾಗಿ ರಾಜ್ಯಾದ್ಯಂತೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ಹೌದು ಕೆಎಂಎಫ್ ನಂದಿನಿ ಬ್ರಾಂಡ್ ಕನ್ನಡಿಗರ ಅಸ್ಮಿತೆ ಎಂಬುದರಲ್ಲಿ ಎರಡು ಮಾತಿಲ್ಲ.ಆ ಕಾರಣಕ್ಕಾಗಿಯೇ ಮೇರು ನಟ ಡಾ.ರಾಜ್ ಕುಮಾರ 1994 ರಲ್ಲೇ ಒಂದೂ ರೂಪಾಯಿ ಸಂಭಾವನೆ ಪಡೆಯದೇ ನಂದಿನಿ ಬ್ರಾಂಡ್ ರಾಯಭಾರಿಯಾಗಿದ್ದರು. ಅದೂವರೆಗೆ ಡಾ.ರಾಜ್ ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಂಪನಿಗೆ ಜಾಹೀರಾತು ನೀಡಿದವರಲ್ಲ. ಅಂದು ಕೆಎಂಎಫ್ ಜಾಹೀರಾತು ವಿಚಾರವಾಗಿ ಡಾ.ರಾಜ್‌ರ ಮುಂದೆ ನಿಂತಾಗ, ಒಂದು ಕ್ಷಣ ಯೋಚಿಸದ ಕೆಎಂಎಫ್ ಮಾತಿಗೆ ಓಗೊಟ್ಟು ಜಾಹೀರಾತಿನಲ್ಲಿ ನಟಿಸಲು ಒಪ್ಪಿಕೊಂಡರು. ಅವರ ಒಪ್ಪಿಕೊಂಡ ಹಿಂದಿನ ಉದ್ದೇಶ ರಾಜ್ಯದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಬೇಕು, ಹಾಲಿನ ಉತ್ಪಾದನೆ ಹೆಚ್ಚಿಸಬೇಕು ಅದಕ್ಕಾಗಿ ಒಂದು ಬಲಿಷ್ಠವಾದ ಹಾಲು ಒಕ್ಕೂಟ ವ್ಯವಸ್ಥೆ ಬೇಕಿತ್ತು. ಹೀಗಾಗಿ ನಯಾಪೈಸೆ ಸಂಭಾವನೆ ಪಡೆಯದೆ ನಂದಿನಿ ಬ್ರಾಂಡ್ ರಾಯಭಾರಿಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡರು. 2006ರಲ್ಲಿ ರಾಜ್ ಕುಮಾರ್ ನಿಧನ ಹೊಂದಿದ ಬಳಿಕ ಕೆಲ ವರ್ಷಗಳ ಕಾಲ ಕೆಎಂಎಫ್ ಯಾವುದೇ ರಾಯಭಾರಿಯನ್ನೂ ಹೊಂದಿರಲಿಲ್ಲ.
2003 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಸಹ ಸಂಭಾವನೆ ಪಡೆಯದೆ ಕೆಎಂಎಫ್ ನಂದಿನಿ ಹಾಲು ಉತ್ಪನ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ಬಳಿಕ 2009 ರಲ್ಲಿ ಡಾ.ರಾಜ್ ಪುತ್ರ ದಿ.ಪುನೀತ್ ರಾಜ್‌ಕುಮಾರ ಕೂಡ ತಂದೆಯ ಹಾದಿಯಲ್ಲೇ ನಡೆದರು.ತಂದೆಯ ಗೌರವಧನ ಪಡೆಯದೇ 10 ವರ್ಷ ಕೆಎಂಎಫ್‌ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದರು.
ನಂದಿನಿ ಅಂದರೆ ಕಾಂಗ್ರೆಸ್? ಅಮೂಲ್ ಅಂದ್ರೆ ಬಿಜೆಪಿ ನಾ?: ಡಾ.ಕೆ. ಸುಧಾಕರ್ ಪ್ರಶ್ನೆ
ಅಂದಿನ ಕೆಎಂಎಫ್ ಮುಖ್ಯಸ್ಥರಾಗಿದ್ದ ಸೋಮಶೇಖರ್ ರೆಡ್ಡಿ ಜಾಹೀರಾತು ಸಂಬಂಧ ಪುನೀತ್ ರಾಜ್ ಕುಮಾರ ಜತೆ ಮಾತುಕತೆ ವೇಳೆ ಗೌರವಧನ ಕುರಿತು ಮಾತನಾಡಿದ್ರಂತೆ. ಅದಕ್ಕೆ ಪುನೀತ್ ರಾಜ್ ಕುಮಾರ್, ನನ್ನ ತಂದೆಯವರೇ ಒಂದು ಪೈಸೆ ಹಣವನ್ನೂ ಪಡೆಯದೆಯೇ ನಿಮಗೆ ಪ್ರಚಾರ ನೀಡಿರುವಾಗ, ನಾನು ಹೇಗೆ ಹಣವನ್ನು ಕೇಳಲಿ ಎಂದು ಪ್ರಶ್ನಿಸಿದ್ದರಂತೆ. ಮೊದಲ ವರ್ಷ ಪುನೀತ್ ಅವರು ನಂದಿನಿ ಗುಡ್ ಲೈಫ್ ಟೆಟ್ರಾ ಪ್ಯಾಕ್'ಗೆ ಜಾಹೀರಾತು ನೀಡಿದ್ದರು. ದೇವರಾಯನದುರ್ಗದ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದೆವು. ಅದಕ್ಕೆ ಅವರು ಒಪ್ಪಿದ್ದರು. ಮೂರು ದಿನಗಳ ಕಾಲ ಚಿತ್ರೀಕರಣ ಪ್ರತಿನಿತ್ಯ ಬೆಳಿಗ್ಗೆ 8 ಗಂಟಗೆ ಚಿತ್ರೀಕರಣಕ್ಕೆ ಬಂದು ಸಂಜೆ 6 ಗಂಟೆಗೆ ಹೋಗುತ್ತಿದ್ದರಂತೆ.
ಕೆಎಂಎಫ್ ನಂದಿನಿ ಬ್ರಾಂಡ್ ಗೆ ಮೂವರು ಸ್ಟಾರ್ ನಟ ನಯಾಪೈಸೆ ಸಂಭಾವನೆ ಪಡೆಯದೆ ಜಾಹೀರಾತಿನಲ್ಲಿ ನಟಿಸಲು ಒಪ್ಪಿಕೊಂಡಿರುವುದು ನಂದಿನಿ ಕನ್ನಡಿಗರ ಅಸ್ಮಿತೆ ಎಂಬ ಕಾರಣದಿಂದಲೇ ಅಲ್ಲವೇ?
Amul Vs Nandini: ಅಮುಲ್ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್