ನಂದಿನಿ ಅಂದರೆ ಕಾಂಗ್ರೆಸ್? ಅಮೂಲ್ ಅಂದ್ರೆ ಬಿಜೆಪಿ ನಾ?: ಡಾ.ಕೆ. ಸುಧಾಕರ್ ಪ್ರಶ್ನೆ

ಕೆಎಂಫ್‌ ಹಾಗೂ ಅಮುಲ್‌ ಹಾಲಿನ ನಡುವೆ ವಿವಾದ ಸೃಷ್ಟಿಸುತ್ತಿರುವ ವಿಪಕ್ಷಗಳ ವಿರುದ್ಧ ಗುಡುಗಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ನಂದಿನಿ ಅಂದರೆ ಕಾಂಗ್ರೆಸ್? ಅಮೂಲ್ ಅಂದ್ರೆ ಬಿಜೆಪಿ ನಾ? ಎಂದು ಪ್ರಶ್ನೆ ಮಾಡಿದ್ದಾರೆ. 

Nandini means Congress Amul means BJP  Dr K Sudhakar question sat

ಬೆಂಗಳೂರು (ಏ.08):  ಇಡೀ ದೇಶದಲ್ಲಿ ರೈತರು ಹಾಲು ಒಕ್ಕೂಟಗಳಿಗೆ ಮಾರಾಟ ಮಾಡುವಂತಹ ಹಾಲಿಗೆ ಪ್ರೋತ್ಸಾಹ ಧನ‌ ನೀಡಿರುವ ಸರ್ಕಾರವೆಂದರೆ ಅದು‌ ಬಿಜೆಪಿ ಸರ್ಕಾರ ಮಾತ್ರ. ರಾಜ್ಯದಲ್ಲಿ ಪ್ರತಿ‌ ಲೀಟರ್ ಗೆ 5 ರೂ. ಪ್ರೋತ್ಸಾಹ ಧನ ಕೊಟ್ಟಿದೆ. ಆದರೆ, ವಿವಾದ ಸೃಷ್ಟಿಸುತ್ತಿರು ವಿಪಕ್ಷಗಳ ವಿರುದ್ಧ ಗುಡುಗಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ನಂದಿನಿ ಅಂದರೆ ಕಾಂಗ್ರೆಸ್? ಅಮೂಲ್ ಅಂದ್ರೆ ಬಿಜೆಪಿ ನಾ? ಎಂದು ಪ್ರಶ್ನೆ ಮಾಡಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಆದಾಯದಲ್ಲಿ ಹಾಲು ಉತ್ಪಾದಕರಿಗೆ‌ ಕೊಡುವ ವ್ಯವಸ್ಥೆ ಮಾಡಲಾಗಿದೆ. ಆಮದು ಮಾಡಲು ಅವಕಾಶ ಇದೆ. ಇದಕ್ಕೆ ಅಡ್ಡಿ ಮಾಡಿರೋದೆ ಯುಪಿಎ ಸರ್ಕಾರವಾಗಿದೆ. ನಂದಿನಿ‌ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ, ತಿರುಪತಿ ತಿರುಮಲ ಹಾಗೂ ‌ಮಹಾರಾಷ್ಟ್ರ ವಿವಿಧ ಪ್ರದೇಶಗಳಿಗೆ ನಮ್ಮ ರಾಜ್ಯದಿಂದ ಕೆಎಂಎಫ್‌ ಹಾಲು ಹೋಗುತ್ತಿದೆ. ಈಗ ದೆಹಲಿಗೂ ಹಾಲನ್ನು ಕಳುಹಿಸಲು ಪ್ರಯತ್ನ‌ ನಡೆದಿದೆ ಎಂದು ಹೇಳಿದರು. 

Amul Vs Nandini: ಅಮುಲ್‌ ಕಂಪನಿಯ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ ಸರಣಿ ಟ್ವೀಟ್

ಹೆರಿಟೇಜ್,‌ ದೊಡ್ಲಾ, ಆರೋಗ್ಯ ಹಾಲು ಮಾರಾಟ:  ಹಲವು ವರ್ಷಗಳಿಂದಲೇ ನಮ್ಮ ರಾಜ್ಯದಲ್ಲಿ ಹೆರಿಟೇಜ್,‌ ದೊಡ್ಲಾ, ಆರೋಗ್ಯ ಹಾಲನ್ನು ಮಾರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈಗ ಅಮುಲ್‌ ಹಾಲು ಇಲ್ಲಿಗೆ ಬರುತ್ತಿದ್ದಂತೆ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದಿನಿಂದಲೂ ಕೆಎಂಎಫ್‌ನ ನಂದಿನ ಹಾಲಿನ ಹೊರತಾಗಿಯೂ ಬೇರೆ ಬೇರೆ ಹಾಲುಗಳನ್ನು ಮಾರಾಟ ಮಾಡಲಾಗುತ್ತಿದೆ. ನಾವು ಕೂಡ ಕೆಎಂಎಫ್‌ಗೆ ಯಾವುದೇ ಸಮಸ್ಯೆ ಆಗದಂತೆ ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದೇವೆ. ಈಗ ವಿಪಕ್ಷಗಳು ಮಾತನಾಡುವುನ್ನು ನೋಡಿದರೆ ಅಮುಲ್ ಅಂದ್ರೆ‌ ಬಿಜೆಪಿ.. ನಂದಿನಿ ಅಂದ್ರೆ ಕಾಂಗ್ರೆಸ್ಸಾ? ಇದೆಲ್ಲ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ಕಾಮಾಲೆ ಕಣ್ಣಿನಿಂದ ನೋಡೋದು ಬಿಡಿ: ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡೋದನ್ನ‌ಬಿಡಿ. ಈಗಾಗಲೇ ಕಾಂಗ್ರೆಸ್‌ನವರು ಪಾತಾಳಕ್ಕೆ ಕಚ್ಚಿದ್ದೀರಿ. ಅಪಹಾಸ್ಯಕ್ಕೆ ಈಡಾಗಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಸುಧಾಕರ್ ತಿರುಗೇಟು ನೀಡಿದರು.

ಗುಜರಾತ್‌ಗೆ ಅಡವಿಟ್ಟರೆ ಒಪ್ಪಲ್ಲ: ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು, ರಾಜ್ಯದ ಎಲ್ಲ ಆದಾಯವನ್ನೂ ಗುಜರಾತ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಂದಿನಿ ಕನ್ನಡಿಗರ ಅಸ್ಮಿತೆಯಾಗಿದೆ. ಸಾಕಷ್ಟು ಕುಟುಂಬ ಇದರಿಂದ ಬದುಕುತ್ತಿದೆ. ಅದನ್ನು ತೆಗೆದುಕೊಂಡು ಗುಜರಾತ್ ಗೆ ಅಡ ಇಟ್ಟರೆ ಯಾರೂ ಒಪ್ಪಲ್ಲ. ಒಂದು ದೇಶ ಒಂದು ಹಾಲು ಒಂದು ಕುರಿ ಎನ್ನುತ್ತಾರೆ. ನಾವು ಒಕ್ಕೂಟ  ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಕಿಡಿ ಕಾರಿದರು. 

ಅಮುಲ್‌ನ ಏಕೈಕ ಸ್ಪರ್ಧಿ ನಂದಿನಿ ಬ್ರಾಂಡ್ ಮುಗಿಸಲು ಕೇಂದ್ರ ಸಂಚು: ಎಚ್‌ಡಿಕೆ 
ಬೆಂಗಳೂರು: ಗುಜರಾತ್ ಮೂಲದ ಅಮುಲ್ ಮತ್ತು ರಾಜ್ಯದ ನಂದಿನಿ ಹಾಲು ವಿಚಾರವಾಗಿ ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ನಂದಿನಿ ಬ್ರಾಂಡ್ ಅಪೋಶನ ಮಾಡಲು ಹೊರಟಿದೆ ಎಂದು ಕನ್ನಡಿಗರು ಟ್ವಿಟರ್‌ನಲ್ಲಿ #Savenandini ಹ್ಯಾಷ್ ಟ್ಯಾಗ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವಿಟ್ ಮಾಡಿದ್ದಾರೆ. 

‘ನಂದಿನಿ’ ಆಪೋಶನಕ್ಕೆ ಮೋದಿ, ಶಾ ಸಂಚು: ಸಿದ್ದರಾಮಯ್ಯ

ಹಿಂದಿ ಹೇರಿಕೆ ಒಪ್ಪದ ನಂದಿನಿ ವಿರುದ್ಧ ಅಸ್ತ್ರ: ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದಲ್ಲದೆ, ಇದೀಗ ನಂದಿನಿ ಬ್ರಾಂಡ್‌ ಬದಲಿಗೆ ಅಮುಲ್ ಹೇರುತ್ತಿರುವ ವಿಚಾರವಾಗಿ ಟ್ವಿಟ್ ಮಾಡಿರುವ ಕುಮಾರಸ್ವಾಮಿಯವರು,  "ಇಲ್ಲಿನ ಡಬಲ್ ಎಂಜಿನ್ ಬಿಜೆಪಿ ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ತಕ್ಷಣ ರಾಜ್ಯದಲ್ಲಿ "ಅಮುಲ್ʼನ ಪ್ಯಾಕೆಟ್ ಹಾಲಿನ ಮಾರಾಟಕ್ಕೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕೇಂದ್ರದ ಒತ್ತಾಸೆಯಿಂದ ಅಮುಲ್ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಕರೆ ನೀಡಿದ್ದಾರೆ.

Latest Videos
Follow Us:
Download App:
  • android
  • ios