Asianet Suvarna News Asianet Suvarna News

ತಾಂತ್ರಿಕ ತೊಡಕು: ಸಹಸ್ರಾರು ಜನಕ್ಕಿಲ್ಲ ಗೃಹಲಕ್ಷ್ಮಿ

ಕಾಂಗ್ರೆಸ್‌ನ 'ಪಂಚ ಗ್ಯಾರಂಟಿ'ಯಲ್ಲಿ ಮಹಿಳಾ ಸಬಲೀಕರಣದ ಮಹತ್ತರ ಧ್ಯೆಯೋದ್ದೇಶ ಹೊಂದಿದ್ದ 'ಗೃಹಲಕ್ಷ್ಮಿ' ಯೋಜನೆಯೇ ಪ್ರಮುಖವಾದುದು. ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಬಹಳಷ್ಟು ಮಹಿಳೆಯರಿಗೆ ಹಣ ಪಾವತಿಯಾಗಿರಲಿಲ್ಲ. ತೆರಿಗೆ ಪಾವತಿ ಯೋಜನೆ ಆರಂಭವಾಗಿ 6 ತಿಂಗಳು ಕಳೆದರೂ ಇನ್ನೂ ತಾಂತ್ರಿಕ ಸಮಸ್ಯೆಗಳನ್ನೇ ಹಿರಿಯ ಅಧಿಕಾರಿಗಳು ನಿವಾರಣೆ ಮಾಡಿಲ್ಲ 

Thousands of People Not Get Gruha Lakshmi Scheme Money in Karnataka Due to Technical problem grg
Author
First Published Jan 28, 2024, 9:27 AM IST

ಬೆಂಗಳೂರು(ಜ.28):  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಕಾರಣದಿಂದಾಗಿ ಸಹಸ್ರಾರು ಮಹಿಳೆಯರು ಮಾಸಿಕ 2 ಸಾವಿರ ರು. ಪಡೆಯುವುದರಿಂದ ವಂಚಿತರಾಗಿದ್ದಾರೆ. ಯೋಜನೆ ಆರಂಭವಾಗಿ ಆರು ತಿಂಗಳಾದರೂ ಅಧಿಕಾರಿಗಳು ಇದಕ್ಕೆ ಪರಿಹಾರ ಕಂಡುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆಯಡಿ ಫಲಾನುಭವಿಯಾಗಲು ಅರ್ಜಿ ಸಲ್ಲಿಸಿ 6 ತಿಂಗಳಾದರೂ ಏಕೆ ಹಣ ಪಾವತಿಯಾಗುತ್ತಿಲ್ಲ ಎಂದು ಪರಿಶೀಲಿಸಿದ ಮಹಿಳೆಯರು ಶಾಕ್ ಆಗಿದ್ದಾರೆ. ನೀವು 'ಐಟಿ (ಆದಾಯ ತೆರಿಗೆ) ಅಥವಾ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿ ಅನಾವರಣವಾಗಿದೆ.

ಬ್ಯಾಂಕ್‌ ಸಾಲಕ್ಕೆ ಗೃಹಲಕ್ಷ್ಮೀ ಭರ್ತಿ: ಪ್ರಿಯಾಂಕ್ ಖರ್ಗೆ ಅಸಮಾಧಾನ

ಕಾಂಗ್ರೆಸ್‌ನ 'ಪಂಚ ಗ್ಯಾರಂಟಿ'ಯಲ್ಲಿ ಮಹಿಳಾ ಸಬಲೀಕರಣದ ಮಹತ್ತರ ಧ್ಯೆಯೋದ್ದೇಶ ಹೊಂದಿದ್ದ 'ಗೃಹಲಕ್ಷ್ಮಿ' ಯೋಜನೆಯೇ ಪ್ರಮುಖವಾದುದು. ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಬಹಳಷ್ಟು ಮಹಿಳೆಯರಿಗೆ ಹಣ ಪಾವತಿಯಾಗಿರಲಿಲ್ಲ. ತೆರಿಗೆ ಪಾವತಿ ಯೋಜನೆ ಆರಂಭವಾಗಿ 6 ತಿಂಗಳು ಕಳೆದರೂ ಇನ್ನೂ ತಾಂತ್ರಿಕ ಸಮಸ್ಯೆಗಳನ್ನೇ ಹಿರಿಯ ಅಧಿಕಾರಿಗಳು ನಿವಾರಣೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಮಾಯಕ ಮಹಿಳೆಯರು ಸುಸ್ತು: 

ತೆರಿಗೆ ಪಾವತಿ ಪಾವತಿಸುವ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ. ಅದೇ ರೀತಿ, ಮಹಿಳೆಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಥವಾ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ ಯೋಜನೆಯ ಪ್ರಯೋಜನ ಪಡೆ ಯಲು ಬರುವುದಿಲ್ಲ. ಆದರೆ ಜೀವಮಾನದಲ್ಲಿ ಎಂದೂ ತೆರಿಗೆ ಪಾವತಿಸದ, ಪತಿಯೂ ತೆರಿಗೆ ಅಥವಾ ಜಿಎಸ್‌ಟಿ ರಿಟರ್ನಸ್‌ ಸಲ್ಲಿಸದಿರುವ ಮಹಿಳೆಯರಿಗೂ ತಾಂತ್ರಿಕ ಸಮಸ್ಯೆಯಿಂದ ಹಣ ಸಂದಾಯವಾಗುತ್ತಿಲ್ಲ,

ಸಮಸ್ಯೆ ಪರಿಹಾರಕ್ಕೆ ಯತ್ನ: 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು, 'ಕುಟುಂಬ್ ಆ್ಯಪ್‌ನಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಅರ್ಜಿದಾರರ ಮಾಹಿತಿ ಯನ್ನು ಸ್ವಯಂ ಪಡೆಯಲಿರುವ ಈ ಆ್ಯಪ್, ದತ್ತಾಂಶ ಗಳನ್ನು ಪರಿಗಣಿಸಿ ಈ ರೀತಿ ತೋರಿಸುತ್ತಿದೆ ಎಂದಿವೆ.

ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ?: ಫಲಾನುಭವಿಗಳಿಗೆ ದುಡ್ಡು ತಲುಪಲು ಹೊಸ ಪ್ಲಾನ್‌..!

ಮಾಹಿತಿ ನೀಡಲು ನಿರ್ದೇಶಕಿ ನಕಾರ

ಅರ್ಹ ಮಹಿಳೆಯರಿಗೆ 'ಗೃಹ ಲಕ್ಷ್ಮಿ' ಯೋಜನೆಯಡಿ 2 ಸಾವಿರ ರೂ. ಪಾವತಿಯಾಗುತ್ತಿಲ್ಲ, ಆದಾಯ ತೆರಿಗೆ ಪಾವತಿ ಮಾಡದಿದ್ದರೂ, ಜಿಎಸ್‌ಟಿ ರಿಟರ್ನ್‌ಸ್ ಸಲ್ಲಿಸದಿದ್ದರೂ ಡಿಲಿಟಿ ಪೋರ್ಟಲ್‌ನಲ್ಲಿ ಈ ರೀತಿ ತೋರಿಸುತ್ತಿದೆಯಲ್ಲಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಎಂ.ಎಸ್.ಅರ್ಚನಾ ಅವರನ್ನು ಖುದ್ದು ಸಂಪರ್ಕಿಸಿದರೂ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಜಿಲ್ಲಾ ಮಟ್ಟದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮುಖ್ಯ ಕಚೇರಿಗೆ ಪತ್ರ ಬರೆಯಲಾಗುವುದು. ಹಾಸನ ಜಿಲ್ಲೆಯಲ್ಲೇ ಮೂರ್ನಾಲ್ಕು ಸಾವಿರ ಐಟಿ/ ಜಿಎಸ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಹಾಸನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಎನ್.ಕುಮಾರ್ ತಿಳಿಸಿದ್ದಾರೆ.  

Follow Us:
Download App:
  • android
  • ios