ದ.ಕ. ಜಿಲ್ಲೆಯಲ್ಲಿರುವ ಕೈಗಾರಿಕೆ ಜತೆಗೆ ಇತರ ಕ್ಷೇತ್ರದ ಕುಂದುಕೊರತೆಗಳ ಕುರಿತು ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ. ಕೇರಳ, ಗೋವಾ ಮಾದರಿ ಬಿಟ್ಟು ಪ್ರವಾಸೋದ್ಯಮದಲ್ಲಿ ಮಂಗಳೂರು ಮಾದರಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಮಂಗಳೂರು (ಜೂ.25) : ದ.ಕ. ಜಿಲ್ಲೆಯಲ್ಲಿರುವ ಕೈಗಾರಿಕೆ ಜತೆಗೆ ಇತರ ಕ್ಷೇತ್ರದ ಕುಂದುಕೊರತೆಗಳ ಕುರಿತು ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ. ಕೇರಳ, ಗೋವಾ ಮಾದರಿ ಬಿಟ್ಟು ಪ್ರವಾಸೋದ್ಯಮದಲ್ಲಿ ಮಂಗಳೂರು ಮಾದರಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಅವರು ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕ್ರೆಡೈ, ಕೆಸಿಸಿಐ, ಕೆ ಐಎ, ಸಿಐಐ, ಕೆಡಿಇಎಂ ಮೊದಲಾದ ಸಂಘಟನೆಗಳ ಜತೆಯಲ್ಲಿ ದ.ಕ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತ ಸಂವಾದದಲ್ಲಿ ಮಾತನಾಡಿದರು.

ನಳಿನ್‌ ಕುಮಾರ್‌ ಕಟೀಲ್‌ ಮನೆಗೆ ಮಾರಿ, ಪರರಿಗೆ ಉಪಕಾರಿ: ಸಚಿವ ದಿನೇಶ್‌ ಗುಂಡೂರಾವ್‌

ಸರ್ಕಾರಿ ಮಟ್ಟದಲ್ಲಿ ಕಾನೂನು ಸಡಿಲು ಮಾಡಿ ಸುಧಾರಣೆ ತರುವ ಜತೆಗೆ ಮಾಹಿತಿ ಸಂಗ್ರಹಿಸಿಕೊಂಡು ಬೆಂಗಳೂರಿನಲ್ಲೇ ಈ ಕುರಿತು ಸಭೆ ನಡೆಸಲಾಗುತ್ತದೆ. ಈ ಮೂಲಕ ಜಿಲ್ಲೆಯ ಪ್ರಗತಿಯ ಚಿಂತನೆ ನಡೆಸಲಾಗುವುದು. ದ.ಕ. ಜಿಲ್ಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಹೊರ ಜಗತ್ತಿಗೆ ಪರಿಚಯವಾಗುತ್ತಿಲ್ಲ. ಶಿಕ್ಷಣ, ಪ್ರವಾಸೋದ್ಯಮದಲ್ಲಿ ಸಾಕಷ್ಟುಅವಕಾಶಗಳು ಇದ್ದು, ಇದಕ್ಕೆ ಇನ್ನಷ್ಟುಪೂರಕ ವಿಚಾರಗಳಲ್ಲಿ ಅಭಿವೃದ್ಧಿ ಮಾಡುವ ಅಗತ್ಯವಿದೆ. ಜಿಲ್ಲೆಯ ಕುರಿತು ಇರುವ ಅಪಪ್ರಚಾರವನ್ನು ಮೆಟ್ಟಿನಿಂತು ಇತರರನ್ನು ಜಿಲ್ಲೆಯ ಕುರಿತು ಆಕರ್ಷಣೆಗೊಳಿಸುವ ಕೆಲಸ ಸಾಗಬೇಕು ಎಂದರು.

ವಿವಿಧ ಬೇಡಿಕೆಗಳ ಪ್ರಸ್ತಾಪ:

ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ನ ಅಧ್ಯಕ್ಷ ಗಣೇಶ್‌ ಕಾಮತ್‌ ಮಾತನಾಡಿ, ಕೆಪಿಟಿಯಲ್ಲಿ ಅಂಡರ್‌ ಪಾಸ್‌, ನಂತೂರಿನಲ್ಲಿ ಫ್ಲೈ ಓವರ್‌, ಬೈಕಂಪಾಡಿ ಕೈಗಾರಿಕ ವಲಯದ ಅಭಿವೃದ್ಧಿ, ಟೂರಿಸಂ ಕ್ಷೇತ್ರದ ಬೆಳವಣಿಗೆ, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ, ಎಂಎಸ್‌ಎಂಇಯಲ್ಲಿ ಸ್ಟ್ಯಾಂಪ್‌ ಡ್ಯೂಟಿ ಕಡಿತ ಮಾಡುವುದು, ಐಟಿ ಪಾರ್ಕ್ ಸ್ಥಾಪನೆ ಕುರಿತು ಕ್ರಮದ ವಿಚಾರದಲ್ಲಿ ಸಚಿವರ ಗಮನ ಸೆಳೆಯಲಾಯಿತು. ದ.ಕ ಹಾಗೂ ಉಡುಪಿ ಕ್ವಾರಿ ಸಂಘಗಳ ಅಧ್ಯಕ್ಷ ಮನೋಜ್‌ ಶೆಟ್ಟಿಮಾತನಾಡಿ, ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಇರುವಂತೆ ಕ್ವಾರಿಗಳಿಗೂ ಪ್ರತ್ಯೇಕ ನೀತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಕ್ರಮ ಜರುಗಿಸುವ ಅಗತ್ಯವಿದೆ ಎಂದರು.

ಉದ್ಯಮಿ ಗೌರವ್‌ ಹೆಗ್ಡೆ ಮಾತನಾಡಿ, ಈಗಾಗಲೇ ಇಲ್ಲಿನ ಬೀಚ್‌ಗಳಲ್ಲಿ ಸರ್ಫಿಂಗ್‌ ಕ್ರೀಡೆಯನ್ನು ಜನಪ್ರಿಯ ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸರ್ಕಾರ ಇನ್ನಷ್ಟುನೆರವು ನೀಡಿದರೆ ಇದರಿಂದ ಪ್ರವಾಸೋದ್ಯಮಕ್ಕೆ ಬಹಳಷ್ಟುಲಾಭವಾಗಲಿದೆ ಎಂದರು.

ಈ ಸಂದರ್ಭ ಕ್ರೆಡೈಯ ಡಿ.ಬಿ.ಮೆಹ್ತಾ, ತಾಂತ್ರಿಕ ಎಂಜಿನಿಯರ್‌ ಧರ್ಮರಾಜ್‌ ಅವರು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಕುರಿತು ಗಮನ ಸೆಳೆದರು.

ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌, ಶಾಸಕ ಅಶೋಕ್‌ ರೈ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮಾಜಿ ಎಂಎಲ್‌ಸಿ ಐವನ್‌ ಡಿಸೋಜಾ ಇದ್ದರು.

ಮಂಗಳೂರು: ಶಿಷ್ಟಾಚಾರ ಉಲ್ಲಂಘನೆಗೆ ಬಿಜೆಪಿ ಶಾಸಕರು ಗರಂ, ಸಚಿವ‌ ಗುಂಡೂರಾವ್ ಎದುರಲ್ಲೇ ಆಕ್ರೋಶ..!

ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ಕೊಡಿ

ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಅನಂತೇಶ್‌ ವಿ. ಪ್ರಭು ಅವರು ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗುವ ಆರು ವಿಚಾರಗಳ ಕುರಿತು ಗಮನ ಸೆಳೆದರು.

ಬಳ್ಕುಂಜೆ ಕೈಗಾರಿಕಾ ವಲಯದ ವಿಸ್ತರಣೆಗೆ ಕ್ರಮ, ಜಿಲ್ಲೆಯ ಎಂಎಸ್‌ಎಂಇ ಹಾಗೂ ಬಹುಮಾದರಿಯ ಲಾಜಿಸ್ಟಿಕ್‌ ಪಾರ್ಕ್ಗಾಗಿ ಜೆಸ್ಕೋ ಭೂಮಿಯ ಅಭಿವೃದ್ಧಿ, ಎಪಿಎಂಸಿಯ ಸಮರ್ಥ ಬಳಕೆ, ಸೆಸ್‌ನಲ್ಲಿ ಡೋರ್‌ ಸಂಖ್ಯೆ ಹಾಗೂ ಖಾತೆಯಲ್ಲಿನ ಸಮಸ್ಯೆಗಳ ಬಗೆಹರಿಸುವ ಜತೆಗೆ ಕೈಗಾರಿಕೆಗೆ ಪ್ರತ್ಯೇಕವಾದ ಸೆಸ್‌ ಜಾರಿಗೊಳಿಸುವುದು, ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ತರಬೇತಿಗೆ ವ್ಯವಸ್ಥೆ ಮಾಡಲು ಕ್ರಮ ಜರುಗಿಸಲು ಮನವಿ ಮಾಡಲಾಯಿತು.