ಯಕ್ಷಗಾನದ ಡಾಟಾ ಬ್ಯಾಂಕ್‌ ಆಗಬೇಕಾಗಿದೆ. ಯಕ್ಷಗಾನ ಕಲೆಯ ಐತಿಹಾಸಿಕ ಮಾಹಿತಿ ಮತ್ತು ಕಲಾವಿದರ ವಿವರಗಳನ್ನು ಸಂಗ್ರಹಿಸಲು ಕನ್ನಡ ಸಂಸ್ಕೃತಿ ಇಲಾಖೆ ತಕ್ಷಣ ಕಾರ್ಯಾರಂಭ ಮಾಡುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸು​ನಿಲ್‌ ಕುಮಾರ್‌ ಹೇಳಿ​ದ​ರು. 

ಉಡುಪಿ (ಫೆ.13): ಯಕ್ಷಗಾನದ ಡಾಟಾ ಬ್ಯಾಂಕ್‌ ಆಗಬೇಕಾಗಿದೆ. ಯಕ್ಷಗಾನ ಕಲೆಯ ಐತಿಹಾಸಿಕ ಮಾಹಿತಿ ಮತ್ತು ಕಲಾವಿದರ ವಿವರಗಳನ್ನು ಸಂಗ್ರಹಿಸಲು ಕನ್ನಡ ಸಂಸ್ಕೃತಿ ಇಲಾಖೆ ತಕ್ಷಣ ಕಾರ್ಯಾರಂಭ ಮಾಡುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸು​ನಿಲ್‌ ಕುಮಾರ್‌ ಹೇಳಿ​ದ​ರು. ಭಾನುವಾರ ಇಲ್ಲಿನ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದ ಎರಡು ದಿನಗಳ ಪ್ರಥಮ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇ​ಳ​ನದ ಸ್ಮರಣ ಸಂಚಿಕೆ ಬಿಡು​ಗ​ಡೆ​ಗೊ​ಳಿಸಿ ಮಾತ​ನಾ​ಡಿ ಸಮ್ಮೇಳನದ ನಿರ್ಣಯದಂತೆ, ಮುಂದಿನ ವರ್ಷಗಳಲ್ಲಿ ರಾಜ್ಯ ಮತ್ತು ವಿಶ್ವ ಯಕ್ಷಗಾನ ಸಮ್ಮೇಳನಗಳನ್ನು ನಡೆಸಲು ಸರ್ಕಾರ ಬದ್ಧವಾಗಿದೆ. 

ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ನಡೆಸಲಾಗುತ್ತದೆ ಎಂದು ಘೋಷಿಸಿದರು. ಮುಂದಿನ ಸಮ್ಮೇಳನ ದ.ಕ.ದಲ್ಲಿ: ಮುಂದಿನ ಸಮ್ಮೇ​ಳ​ನ​ವನ್ನು ದಕ್ಷಿಣ ಕನ್ನ​ಡ​ದಲ್ಲಿ ನಡೆ​ಸು​ವುದು, ಯಕ್ಷ​ಗಾನ ಕಲಾ​ವಿ​ದ​ರಿಗೆ ಈಗ ನೀಡು​ತ್ತಿ​ರುವ ಗೌರ​ವ​ಧ​ನ​ವನ್ನು 5 ಸಾವಿ​ರ​ಕ್ಕೇ​ರಿ​ಸು​ವುದು ಸೇರಿ​ದಂತೆ ಹಲವು ನಿರ್ಣ​ಯ​ಗ​ಳನ್ನು ಇದೇ ವೇಳೆ ಮಂಡಿ​ಸ​ಲಾ​ಯಿತು. ಜತೆಗೆ 76 ಯಕ್ಷ​ಗಾನ ಸಾಧ​ಕ​ರಿಗೆ ಸನ್ಮಾ​ನಿ​ಸ​ಲಾ​ಯಿ​ತು.

ರಕ್ಷಣಾ ರಫ್ತು 25000 ಕೋಟಿಗೆ ಹೆಚ್ಚಿಸುವ ಗುರಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌

ಕಾಸರಗೋಡಲ್ಲಿ ಸಮ್ಮೇಳನಕ್ಕೆ ಪೂರ್ಣ ಬೆಂಬಲ: ಕಾಸರಗೋಡನ್ನು ಕನ್ನಡದ ಕಾರಣಕ್ಕಾಗಿ ಕೇರಳ ಸರ್ಕಾರ ಅವಗಣನೆ ಮಾಡುತ್ತಿದೆ. ಆದರೆ ಈ ಸಮ್ಮೇಳನದಲ್ಲಿ ಕಾಸರಗೋಡನ್ನು ಸಾಂಸ್ಕೃತಿಕವಾಗಿ ಕರ್ನಾಟಕದ ಭಾಗವಾಗಿ ಪರಿಗಣಿಸುವ ನಿರ್ಣಯ ಮಂಡಿಸಲಾಗಿದೆ. ಯಕ್ಷಗಾನ ಅಕಾಡೆಮಿ ಇಂಥ ಸಮ್ಮೇಳನ ಕಾಸರಗೋಡಿನಲ್ಲಿ ಮಾಡುವುದಾದರೆ ಅದರ ಯಶಸ್ಸಿಗೆ ಮಠದಿಂದ ಎಲ್ಲ ಬೆಂಬಲ ನೀಡಲಿದೆ ಎಂದು ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿ​ದ​ರು.

ಇಂದಿ​ನಿಂದ 2 ದಿನ​ಗಳ ಪ್ರಥ​ಮ ಯಕ್ಷ​ಗಾನ ಸಮ್ಮೇ​ಳ​ನ: ಉಡುಪಿಯಲ್ಲಿ ಎರಡು ದಿನದ ಪ್ರಥಮ ರಾಜ್ಯಮಟ್ಟದ ಮತ್ತು ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಶನಿ​ವಾರ ಚಾಲನೆ ನೀಡ​ಲಿ​ದ್ದಾ​ರೆ. ಇದೇ ಮೊದಲ ಬಾರಿಗೆ ನಡೆ​ಯು​ತ್ತಿ​ರುವ ಈ ಸಮ್ಮೇ​ಳ​ನ​ವನ್ನು ಐತಿಹಾಸಿಕವಾಗಿ​ಸಲು ಈಗಾ​ಗಲೇ ಅಗ​ತ್ಯ ಸಿದ್ಧ​ತೆ​ಗಳು ಪೂರ್ಣ​ಗೊಂಡಿ​ವೆ.

ಯಕ್ಷ​ಗಾ​ನ ಅಕಾ​ಡೆಮಿ ವತಿ​ಯಿಂದ ನಡೆ​ಯು​ತ್ತಿ​ರುವ ಈ ಸಮ್ಮೇ​ಳ​ನ​ ಉದ್ಘಾ​ಟ​ನೆಗೂ ಮುನ್ನ ಸಮ್ಮೇ​ಳ​ನಾ​ಧ್ಯ​ಕ್ಷ ಹಾಗೂ ಯಕ್ಷಗಾನ ರಂಗದ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮತ್ತು ಗಣ್ಯ​ರನ್ನು ಮೆರ​ವ​ಣಿಗೆ ಮೂಲಕ ವೇದಿ​ಕೆಗೆ ಕರೆ​ತ​ರ​ಲಾ​ಗು​ವುದು. ನಂತರ ಎ.ಎ​ಲ್‌.​ಎ​ನ್‌.​ರಾವ್‌ ಕ್ರೀಡಾಂಗ​ಣ​ದಲ್ಲಿ ನಡೆ​ಯುವ ಸಮ್ಮೇ​ಳ​ನಕ್ಕೆ ಸಚಿವ ಸುನಿಲ್‌ ಕುಮಾರ್‌ ಚಾಲನೆ ನೀಡು​ವರು. ಉಡುಪಿ ಶಾಸಕ ರಘು​ಪತಿ ಭಟ್‌ ಕಾರ್ಯ​ಕ್ರ​ಮದ ಅಧ್ಯ​ಕ್ಷತೆ ವಹಿಸುವರು. ಉದ್ಘಾ​ಟನೆ ಕಾರ್ಯ​ಕ್ರ​ಮದ ವೇಳೆ ಯಕ್ಷ​ಗಾ​ನಕ್ಕೆ ಸಂಬಂಧಿ​ಸಿದ 18 ಕೃತಿ​ಗ​ಳನ್ನು ಬಿಡು​ಗಡೆ ಮಾಡ​ಲಾ​ಗು​ವು​ದು.

ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುವ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮತ್ತು ವಿಚಾರಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡಲಿರುವ ಅಂಕಣಕಾರ ರೋಹಿತ್‌ ಚಕ್ರತೀರ್ಥ ಅವರ ಮಾತುಗಳ ಬಗ್ಗೆಯೂ ಯಕ್ಷಗಾನಾಸಕ್ತರಲ್ಲಿ ಕಾತರ ಇದೆ. ಯಕ್ಷಶಿಕ್ಷಣದ ಸವಾಲುಗಳು, ಯಕ್ಷಗಾನ ಕನ್ನಡ ಅಸ್ಮಿತೆ, ಯಕ್ಷಗಾನ ಮತ್ತು ಭಾರತೀಯ ಚಿಂತನೆಗಳು ಎಂಬ ಗೋಷ್ಠಿ ನಡೆಯಲಿದೆ. ತಲಾ 2 ಗಂಟೆ ಅವಧಿಯ ಯಕ್ಷಗಾನ, ತಾಳಮದ್ದಲೆಗಳ ಜೊತೆಗೆ ಯಕ್ಷಗಾನ ಗೊಂಬೆಯಾಟ, ಯಕ್ಷಗಾನ ಕೇಳಿಕೆ, ಯಕ್ಷಗಾನ ಬ್ಯಾಲೆ, ರಸದೌತಣ ನೀಡಲಿವೆ.

ಸಂಬಳ ಸಿಗದೆ ಅರಣ್ಯ ರಕ್ಷಕರು ಸಂಕಷ್ಟದಲ್ಲಿ: ಇಂದಿನಿಂದ ಪ್ರತಿಭಟನೆ

ಬೊಮ್ಮಾಯಿ-ಕಂಬಾರ ಇಲ್ಲ: ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಬೇಕಾಗಿತ್ತು, ಆದರೆ ಕೇಂದ್ರ ಗೃಹಸಚಿವ ಅಮಿತ್‌ ಶಾ ರಾಜ್ಯ ಪ್ರವಾಸದಲ್ಲಿರುವುದರಿಂದ ಬೊಮ್ಮಾಯಿ ಸಮ್ಮೇಳನಕ್ಕೆ ಬರುವ ಸಾಧ್ಯತೆ ಇಲ್ಲ. ಪ್ರಧಾನ ದಿಕ್ಸೂಚಿ ಭಾಷಣ ಮಾಡಬೇಕಾಗಿದ್ದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಕೂಡ ಅನಾರೋಗ್ಯದ ಕಾರಣಕ್ಕೆ ಸಮ್ಮೇಳನಕ್ಕೆ ಬರುವ ಸಾಧ್ಯತೆ ಕಡಿಮೆಯಿದೆ.