ಬಿಜೆಪಿಯವರನ್ನು ಕೇಳಿ ಪ್ರಣಾಳಿಕೆಯಲ್ಲಿ ಸೇರಿಸುವ ಅಗತ್ಯವಿಲ್ಲ: ಲಾಡ್‌ ಕಿಡಿ

ಫುಡ್‌ ಕಾರ್ಪೋರೇಷನ್‌ನವರು ಅಗತ್ಯ ಅಕ್ಕಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಈಗ ಹಿಂಪಡೆದಿದ್ದಾರೆ. ಹೀಗಾಗಿ, ನಾವು ಅದನ್ನು ಹೇಳುತ್ತಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

There is no need to ask the BJP and prepare manifesto says santosh lad at dharwad rav

ಹುಬ್ಬಳ್ಳಿ (ಜೂ.27) ಫುಡ್‌ ಕಾರ್ಪೋರೇಷನ್‌ನವರು ಅಗತ್ಯ ಅಕ್ಕಿ ಕೊಡುತ್ತೇವೆ ಎಂದು ಬರೆದುಕೊಟ್ಟಿದ್ದರು. ಈಗ ಹಿಂಪಡೆದಿದ್ದಾರೆ. ಹೀಗಾಗಿ, ನಾವು ಅದನ್ನು ಹೇಳುತ್ತಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದು ನಮ್ಮ ಪ್ರಣಾಳಿಕೆಯಲ್ಲಿ. ಬಿಜೆಪಿಯವರನ್ನು ಕೇಳಿ ನಾವು ಪ್ರಣಾಳಿಕೆಯಲ್ಲಿ ಸೇರಿಸಬೇಕಾದ ಅವಶ್ಯಕತೆ ಇರಲಿಲ್ಲ. ನಾವು ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು. ಮುಂಬರುವ ದಿನಗಳಲ್ಲಿ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದರು.

 

ಅನ್ನಭಾಗ್ಯ ಯೋಜನೆಗೆ ಕೇಂದ್ರ ಅಡ್ಡಿ: ಸಚಿವ ಸಂತೋಷ್ ಲಾಡ್ ಕಿಡಿ

ವಿದ್ಯುತ್‌ ದರ ಏರಿಕೆಗೆ ನಮ್ಮ ಸರ್ಕಾರ ಅಪ್ರೂವ್‌ ಕೊಟ್ಟಿಲ್ಲ. ಹಾಗೇನಾದರೂ ಇದ್ದರೆ ಬಿಜೆಪಿಯವರು ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಲಾಡ್‌ ಸವಾಲೆಸೆದರು.

ಕಾಂಗ್ರೆಸ್‌ನ 14 ಜನರನ್ನು ದುಡ್ಡು ಕೊಟ್ಟು ಕೊಂಡುಕೊಂಡು ಸರ್ಕಾರ ರಚನೆ ಮಾಡಿದವರು ಬಿಜೆಪಿಯವರು. ಮಧ್ಯಪ್ರದೇಶ, ಗೋವಾದಲ್ಲಿ ನಮ್ಮ ಸರ್ಕಾರ ಬೀಳಿಸಿ ಅವರು ಸರ್ಕಾರ ರಚನೆ ಮಾಡಿದರು. ಇದ್ಯಾವ ಶಿಸ್ತಿನ ಪಕ್ಷ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು. ಇವರ ಬಳಿ ಅರ್ಜಿ ಹಾಕಿದ್ದರಾ? ಅವರೇ ಕಾಂಗ್ರೆಸ್‌ ನಾಯಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಕೋಟಿ ಕೊಟ್ಟು, ಮಿನಿಸ್ಟು್ರ ಮಾಡಿದರು. ಕಾಂಗ್ರೆಸ್‌ನಲ್ಲಿದ್ದಾಗ ಅವರೆಲ್ಲರೂ ಚೆನ್ನಾಗಿಯೇ ಇದ್ದರು. ಬಿಜೆಪಿಗೆ ಹೋಗಿಯೇ ಅವರು ಕೆಟ್ಟು ಹೋಗಿದ್ದಾರೆ. ನಾವು ಯಾರಿಗೂ ಮೋಸ ಮಾಡಿಲ್ಲ. ಬದಲಾಗಿ ಬಿಜೆಪಿ ಹಾಗೂ ಮೋದಿಯೇ ಜನತೆಗೆ ಮೋಸ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯುವಕರಿಗೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಕೊಡದೇ ಇರುವುದು ಮೋಸ ಅಲ್ವೇ? ಎಂದು ಪ್ರಶ್ನಿಸಿದರು.

 

ಮೇಯರ್‌ ಉಪ ಮೇಯರ್‌ ಚುನಾವಣೆ: ಪಾಲಿಕೆ ವಶಪಡಿಸಿಕೊಳ್ಳಲು ಕೈ ಕಾರ್ಯತಂತ್ರ

ನಾವು ವರ್ಗಾವಣೆ ದಂಧೆ ಮಾಡುತ್ತಿದ್ದರೆ ಅದನ್ನು ಸಾಬೀತುಪಡಿಸಲಿ. ಅಭಿವೃದ್ಧಿ ಕಾಮಗಾರಿಗಳನ್ನು ತಡೆಹಿಡಿದು ಪರಿಶೀಲನೆ ಮಾಡುತ್ತಿದ್ದೇವೆ. .20 ಕೋಟಿ ಆದಾಯ ಇರುವ ಪಾಲಿಕೆಯಲ್ಲಿ 60 ಕೋಟಿ ಟೆಂಡರ್‌ ಕರೆದಿದ್ದಾರೆ. ಬಿಜೆಪಿ ಕಾಲದಲ್ಲಿನ ಹಗರಣಗಳನ್ನು ತನಿಖೆ ಮಾಡುವುದಾಗಿ ಈಗಾಗಲೇ ಸಿಎಂ ಹೇಳಿದ್ದಾರೆ. ಶೀಘ್ರವೇ ತನಿಖೆ ನಡೆಸುತ್ತೇವೆ ಎಂದರು. 

 ಐದು ಕೆಜಿ ಮೋದಿದಲ್ಲ, ಯುಪಿಎ ಸರ್ಕಾರದ್ದು

ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿ ಪಡಿತರ ಅಕ್ಕಿಯನ್ನು ಮೋದಿ ಅಕ್ಕಿ ಎನ್ನುತ್ತಿರುವುದು ತಪ್ಪು. ಅದು ಯುಪಿಎ ಸರ್ಕಾರದ ಸಮಯದಲ್ಲಿ ಆರಂಭಿಸಿದ ಯೋಜನೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಸ್ಪಷ್ಟಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದ ವೇಳೆಯಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಗಿದೆ. ಭಾರತ ದೇಶದಲ್ಲಿ ಈ ಕಾಯ್ದೆ ಮೂಲಕ 5 ಕೆಜಿ ಅಕ್ಕಿಯನ್ನು ಪಡಿತರ ಮೂಲಕ ಕೊಡಲಾಗುತ್ತಿದೆ. 1.10 ಲಕ್ಷ ಟನ್‌ ಅಕ್ಕಿ ಇಟ್ಟಿದ್ದು ಯುಪಿಎ ಸರ್ಕಾರ. ಹೀಗಾಗಿ, ಅದು ಮೋದಿ ಕೊಡುತ್ತಿರುವ ಅಕ್ಕಿ ಹೇಗಾಗುತ್ತದೆ? ಎಂದು ಪ್ರಶ್ನಿಸಿದ ಲಾಡ್‌, ಅದು ಸರ್ಕಾರದ ಅಕ್ಕಿ. ಕೇಂದ್ರದ ಐದು ಕೆಜಿ ಅಕ್ಕಿಗೆ, ರಾಜ್ಯ ಸರ್ಕಾರ ಐದು ಕೆಜಿ ಸೇರಿ ಒಟ್ಟು ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದು, ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದರು ಲಾಡ್‌.

Latest Videos
Follow Us:
Download App:
  • android
  • ios