Asianet Suvarna News Asianet Suvarna News

ಆರೋಗ್ಯ ಬಿಕ್ಕಟ್ಟು ಎದುರಿಸಲು ರಾಜ್ಯ ಸಮರ್ಥ: ಸಚಿವ ಸುಧಾಕರ್‌

ಕೋವಿಡ್‌ ಸಮಯದಲ್ಲಿ ಹಾಗೂ ಆ ನಂತರ ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆ ಹಾಗೂ ಬಲವರ್ಧನೆಗೆ ಸಾಕಷ್ಟುಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಇಂತಹ ತುರ್ತು ಆರೋಗ್ಯ ಬಿಕ್ಕಟ್ಟುಗಳು ಎದುರಾದರೆ ಸಮರ್ಥವಾಗಿ ನಿಯಂತ್ರಿಸಲು ಹಾಗೂ ನಿಭಾಯಿಸುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

The state is capable of dealing with the health crisis says minister dr k sudhakar gvd
Author
First Published Nov 5, 2022, 2:45 AM IST

ಬೆಂಗಳೂರು (ನ.05): ಕೋವಿಡ್‌ ಸಮಯದಲ್ಲಿ ಹಾಗೂ ಆ ನಂತರ ರಾಜ್ಯದ ಆರೋಗ್ಯ ಕ್ಷೇತ್ರದ ಸುಧಾರಣೆ ಹಾಗೂ ಬಲವರ್ಧನೆಗೆ ಸಾಕಷ್ಟುಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಇಂತಹ ತುರ್ತು ಆರೋಗ್ಯ ಬಿಕ್ಕಟ್ಟುಗಳು ಎದುರಾದರೆ ಸಮರ್ಥವಾಗಿ ನಿಯಂತ್ರಿಸಲು ಹಾಗೂ ನಿಭಾಯಿಸುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಕೊನೆಯ ದಿನದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ‘ಕೋವಿಡ್‌ ನಂತರ ಭವಿಷ್ಯದ ಆರೋಗ್ಯ ಬಿಕ್ಕಟ್ಟುಗಳಿಗೆ ಸಮರ್ಥ ತಯಾರಿ ಹೇಗೆ’ ವಿಷಯ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತಿಹಾಸದಲ್ಲಿ ಕಂಡು ಕೇಳರಿಯದ ಕೋವಿಡ್‌ ಸಾಂಕ್ರಾಮಿಕ ರಾಜ್ಯವನ್ನೂ ಆವರಿಸಿದಾಗ ಆರಂಭದಲ್ಲಿ ಅದನ್ನು ಎದುರಿಸಲು ಸಾಕಷ್ಟುವೈದ್ಯಕೀಯ ಮೂಲಸೌಕರ್ಯ, ತಾಂತ್ರಿಕ ಉಪಕರಣ, ಔಷಧ, ಸಿಬ್ಬಂದಿ ಸೌಲಭ್ಯಗಳ ಕೊರತೆ ಉಂಟಾಯಿತು. ಅದರಲ್ಲೂ ಸಿಬ್ಬಂದಿ ಹೊಂದಿಸುವುದು ಬಹಳ ಕಷ್ಟಕರ ವಿಚಾರ ಆಗಿತ್ತು’ ಎಂದರು.

ಅವಳಿ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆಯಿಂದ ದಿಗ್ಭ್ರಮೆಗೆ ಒಳಗಾಗಿದ್ದೇನೆ: ಸಚಿವ ಸುಧಾಕರ್‌

‘ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಸಣ್ಣ ಪುಟ್ಟ ಆಸ್ಪತ್ರೆಗಳನ್ನೂ ಕೋವಿಡ್‌ ಆಸ್ಪತ್ರೆಗಳಾಗಿಸಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಿದ್ದು, ಟೆಲಿ ಮೆಡಿಸಿನ್‌, ಟೆಲಿ ವೈದ್ಯ ಸೇವೆ ಆರಂಭಿಸಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ರೋಗಿಗೆ ಸಿಗುವ ಸೇವೆಯನ್ನು ಇತರೆ ಎಲ್ಲ ಆಸ್ಪತ್ರೆಗಳ ರೋಗಿಗಳಿಗೂ ಸಿಗುವಂತೆ ಮಾಡಲಾಯಿತು. ದೊಡ್ಡ ಸಂಖ್ಯೆಯಲ್ಲಿ ಕೋವಿಡ್‌ ಪರೀಕ್ಷೆ, ಸೋಂಕು ಉಲ್ಬಣಿಸುವ ಮೊದಲೇ ಚಿಕಿತ್ಸೆ ನೀಡುವಂತಹ ತುರ್ತು ಕ್ರಮದ ನಿರ್ಧಾರ, ಯೋಜನೆಗಳಿಂದ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಯಿತು’ ಎಂದರು.

ಸಾವು ಮುಚ್ಚಿಡಲಾಗಿದೆ ಎಂಬ ವರದಿ ಸುಳ್ಳು: ನಾರಾಯಣ ಹೆಲ್ತ್‌ ಸಮೂಹದ ಅಧ್ಯಕ್ಷ ಡಾ.ದೇವಿಶೆಟ್ಟಿ ಮಾತನಾಡಿ, ‘ಕೆಲ ಅಂತಾರಾಷ್ಟ್ರೀಯ ವರದಿಗಳು ಭಾರತ ಕೋವಿಡ್‌ ಸಾವಿನ ಸಂಖ್ಯೆ ಮುಚ್ಚಿಟ್ಟಿದೆ ಎಂದು ಹೇಳಿವೆ. ಆದರೆ ಇದನ್ನು ಒಪ್ಪಲಾಗುವುದಿಲ್ಲ’ ಎಂದರು.

‘ಭಾರತ ಕೋವಿಡ್‌ ಬಿಕ್ಕಟ್ಟು ನಿಭಾಯಿಸಲು ಹಂತ ಹಂತವಾಗಿ ಕೈಗೊಳ್ಳುತ್ತಾ ಹೋದ ಪರಿಣಾಮಕಾರಿ ಮಾರ್ಗಸೂಚಿ ಕ್ರಮಗಳಿಂದಾಗಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ಆರಂಭದಲ್ಲಿ ರಾಜ್ಯದಲ್ಲೂ ಕೋವಿಡ್‌ ಪರಿಸ್ಥಿತಿ ನಿಭಾಯಿಸುವುದು ಸುಲಭವಾಗಿರಲಿಲ್ಲ. ಆಗ ಕೊಂಚ ಸಮಸ್ಯೆಯಾಗಿದ್ದು ನಿಜ. ಆದರೆ, ಸರ್ಕಾರ ತಜ್ಞರೊಂದಿಗೆ ಸಮಾಲೋಚಿಸಿ ಕೈಗೊಂಡ ನಿಯಂತ್ರಣ ಸೂತ್ರಗಳು. ಆರೋಗ್ಯ ಇಲಾಖೆಯ ಹೊಣೆ ಹೊತ್ತ ಡಾ.ಸುಧಾಕರ್‌ ಅವರು ಖಾಸಗಿ ಆಸ್ಪತ್ರೆಗಳನ್ನೂ ಸರ್ಕಾರದ ನಿಯಂತ್ರಣಕ್ಕೆ ಪಡೆದು ಬಡವರಿಗೂ ಸೂಕ್ತ ಚಿಕಿತ್ಸೆ ದೊರೆಯುವಂತೆ ಕೈಗೊಂಡ ದಿಟ್ಟಕ್ರಮಗಳಿಂದ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಯಿತು’ ಎಂದು ಹೊಗಳಿದರು.

ಕೋವಿಡ್‌ ಕೊನೆಯಾಗಿಲ್ಲ ಎಚ್ಚರ: ಕೋವಿಡ್‌ ಕೊನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಘೋಷಿಸಿಲ್ಲ. ಕೋವಿಡ್‌ ಇನ್ನೂ ಕೂಡ ರೂಪಾಂತರಗೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಇನ್ನಷ್ಟುದಿನ ಎಲ್ಲಾ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸುವುದು ಉತ್ತಮ ಎಂದು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್‌ ಹೇಳಿದ್ದಾರೆ. 

ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೋವಿಡ್‌ಅನ್ನು ಯಾರೂ ಕೂಡ ನಿರ್ಲಕ್ಷಿಸಬಾರದು. ಅದು ಇನ್ನೂ ಕೊನೆಯಾಗಿಲ್ಲ. ಆದರೆ, ಸಮರ್ಪಕವಾಗಿ ಎರಡು ಡೋಸ್‌ ವ್ಯಾಕ್ಸಿನ್‌ ನೀಡಿಕೆಯಿಂದ ನಿಯಂತ್ರಣಕ್ಕೆ ಬಂದಿದೆ. 3ನೇ ಡೋಸ್‌ ಲಸಿಕೆ ನೀಡಿಕೆ ಇನ್ನೂ ಪರಿಣಾಮಕಾರಿಯಾಗಿ ಆಗಬೇಕಿದೆ. ಜತೆಗೆ ಇನ್ನಷ್ಟು ಕಾಲ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಕೆಯಂತಹ ಮಾರ್ಗಸೂಚಿಗಳನ್ನು ಅನುಸರಿಸುವುದು ಒಳ್ಳೆಯದು’ ಎಂದು ಸಲಹೆ ನೀಡಿದರು.

ಪರಿಶಿಷ್ಟರ ಅಭಿವೃದ್ಧಿಗೆ ಬಿಜೆಪಿ ಕಂಕಣ ಬದ್ಧ: ಸಚಿವ ಸುಧಾಕರ್‌

ಕೋವಿಡ್‌ ನಿಂದಾಗಿ ಆರೋಗ್ಯ ಕಾರ್ಯಕರ್ತರು, ವೈದ್ಯರು, ಸಿಬ್ಬಂದಿಗಳ ಹೆಚ್ಚಿನ ಕಾರ್ಯಕ್ಷಮತೆ, ಹೆಚ್ಚುವರಿ ಚಿಕಿತ್ಸೆ, ಔಷಧ, ಆಕ್ಸಿಜನ್‌ ಶೇಖರಣೆ ಎಲ್ಲವುಗಳ ಅರಿವಾಗಿದೆ. ಕೋವಿಡ್‌ ಬಳಿಕ ಬೇರೆ ಬೇರೆ ಆರೋಗ್ಯ ಸಮಸ್ಯೆಗಳನ್ನೂ ಜನರು ಎದುರಿಸುತ್ತಿದ್ದಾರೆ. ಈ ಆರೋಗ್ಯ ಬಿಕ್ಕಟ್ಟುಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಸಾಕಷ್ಟುಪರಿಹಾರ ಸೂತ್ರಗಳನ್ನು ನೀಡಿದೆ. ಇದನ್ನು ಇನ್ನಷ್ಟುಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಕೋವಿಡ್‌ ಬಳಿಕ ಆರೋಗ್ಯ ಕ್ಷೇತ್ರ ಸಾಕಷ್ಟು ಬಲವರ್ಧನೆಯಾಗಿದೆ ಎಂದರು.

Follow Us:
Download App:
  • android
  • ios