Asianet Suvarna News Asianet Suvarna News

ಪರಿಶಿಷ್ಟರ ಅಭಿವೃದ್ಧಿಗೆ ಬಿಜೆಪಿ ಕಂಕಣ ಬದ್ಧ: ಸಚಿವ ಸುಧಾಕರ್‌

ಶ್ರೀರಾಮನನ್ನು ಲೋಕಕ್ಕೆ ಪರಿಚಯಿಸಿರುವ ವಾಲ್ಮೀಕಿ ಸಮುದಾಯದ ಒಳಿತಿಗಾಗಿ ಬಿಜೆಪಿ ಕಂಕಣ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು. 

BJP is committed to the development of Scheduled Castes says Minister Dr K Sudhakar gvd
Author
First Published Nov 3, 2022, 4:58 PM IST

ಚಿಂತಾಮಣಿ (ನ.03): ಶ್ರೀರಾಮನನ್ನು ಲೋಕಕ್ಕೆ ಪರಿಚಯಿಸಿರುವ ವಾಲ್ಮೀಕಿ ಸಮುದಾಯದ ಒಳಿತಿಗಾಗಿ ಬಿಜೆಪಿ ಕಂಕಣ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಭರವಸೆ ನೀಡಿದರು. ಬಳ್ಳಾರಿಯಲ್ಲಿ ನಡೆಯಲಿರುವ ಪರಿಶಿಷ್ಟ ಪಂಗಡಗಳ ಸಮಾವೇಶದ ಹಿನ್ನೆಲೆಯಲ್ಲಿ ಚಿಂತಾಮಣಿ ನಗರದ ವಿ.ಕೆ.ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ 75 ವರ್ಷ ಕಾಂಗ್ರೆಸ್‌ ಆಳ್ವಿಕೆ ಮಾಡಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಓಟ್‌ ಬ್ಯಾಂಕ್‌ ರೀತಿ ನಡೆಸಿಕೊಂಡಿತಷ್ಟೇ ಹೊರತು ಅವರಿಗೆ ಯಾವುದೇ ಅನುಕೂಲ ಮಾಡಲಿಲ್ಲ ಎಂದು ಟೀಕಿಸಿದರು. 

ಪರಿಶಿಷ್ಟರ ಅಭಿವೃದ್ಧಿಗಾಗಿ ಈಗ ಬಿಜೆಪಿ ನ್ಯಾ.ನಾಗಮೋಹನ್‌ ದಾಸ್‌ ವರದಿ ಜಾರಿ ಮೀಸಲು ಪ್ರಮಾಣ ಹೆಚ್ಚಿಸಿದೆ. ದೇಶದ ಪ್ರಥಮ ರಾಷ್ಟ್ರಪತಿಗಳನ್ನಾಗಿ ಬಡಕಟ್ಟು ಜನಾಂಗದ ದ್ರೌಪತಿ ಮರ್ಮುರನ್ನು ಆಯ್ಕೆ ಮಾಡಿದೆ. ದೀನದಲಿತರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪಕ್ಷವು ಕಂಕಣ ತೊಟ್ಟಿದ್ದು ಅದಕ್ಕಾಗಿ ಹತ್ತು-ಹಲವು ಯೋಜನೆಗಳನು ರೂಪಿಸಿ ಕಾರ್ಯಗತಗೊಳಿಸಿದೆ ಎಂದರು.

ಅಮೃತ ನಗರೋತ್ಥಾನ ಹಂತ-4ಕ್ಕೆ 145 ಕೋಟಿ ಮಂಜೂರು: ಸಚಿವ ಎಂಟಿಬಿ ನಾಗರಾಜ್‌

ರಾಮರಾಜ್ಯ ಬಿಜೆಪಿಯಿಂದ ಸಾಧ್ಯ: ಸಚಿವ ಶ್ರೀರಾಮಲು ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೆದ್ದ ಎಂದು ಕರೆಯುತ್ತಾರೆ. ಆದರೆ ಸಿದ್ದರಾಮಯ್ಯ ಕೈಯಲ್ಲಿ ಆಗದ ಕೆಲಸವನ್ನು ಶ್ರೀರಾಮಲು ಮಾಡಿ ತೋರಿಸಿದ್ದಾರೆಂದು ಕುಟುಕಿದರು. ರಾಮರಾಜ್ಯ ನಿರ್ಮಾಣ ಮಾಡಬೇಕಾದರೆ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಕಾಂಗ್ರೆಸ್‌ ಪಕ್ಷದಿಂದ ಸಾಧ್ಯವಿಲ್ಲವೆಂದು ಸವಾಲೆಸೆದರು. ಸುರಪುರ ಶಾಸಕ ರಾಜುಗೌಡ ಮಾತನಾಡಿ ಬಿಜೆಪಿ ಪಕ್ಷವು ಪರಿಶಿಷ್ಟಪಂಗಡದ ನಾಲ್ವರನ್ನು ಮಂತ್ರಿಗಳನ್ನಾಗಿಸಿದೆ ಕಾಂಗ್ರೆಸ್‌ ಪಕ್ಷ ಕೇವಲ ಬಂದಿಖಾನೆ ಸಚಿವ ಸ್ಥಾನ ಮಾತ್ರ ನೀಡಿತ್ತೆಂದ ಅವರು ಶ್ರೀರಾಮನ ಇನ್ನೊಂದು ಅವತಾರವೇ ಪ್ರಧಾನಿ ಮೋದಿ. 

ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಶೇ.3ರಿಂದ ಶೇ. 7 ಮೀಸಲಾತಿ ನೀಡಿರುವ ಪಕ್ಷವನ್ನು ಜೀವನ ಇರುವವರಿಗೂ ಮರೆಯಬಾರದು ಹಾಗೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಕ್ಷದ ಎಂ.ಎಲ್‌.ಸಿ ಕೇಶವ ಪ್ರಸಾದ್‌, ಸಿದ್ದರಾಜು, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಉಪಾಧ್ಯಕ್ಷ ಅರುಣ್‌ ಬಾಬು, ಪ್ರಮುಖರಾದ ಶಿಡ್ಲಘಟ್ಟರಾಜಣ್ಣ, ಆಕಾಂಕ್ಷಿ ಅಭ್ಯರ್ಥಿಗಳಾದ ಸತ್ಯನಾರಾಯಣರೆಡ್ಡಿ, ಎಂ.ಆರ್‌.ಬಾಬು, ಮಹೇಶ್‌ ಬೈ, ಶಿವಾರೆಡ್ಡಿ, ತಳಗವಾರ ಪ್ರತಾಪ್‌, ಪ್ರದೀಪ್‌, ಕೃಷ್ಣಮೂರ್ತಿ, ಡಾಬಾ ಮಂಜುನಾಥ್‌, ಪ್ರಕಾಶ್‌ಗುಪ್ತಾ, ದೇವರಾಜ್‌, ಗಾಜಲಶಿವ, ಮತ್ತಿತರರು ಉಪಸ್ಥಿತರಿದ್ದರು.

ಜೀವ, ಜೀವನಗಳೆರಡೂ ಕನ್ನಡಮಯವಾಗಿರಲಿ: ನಮ್ಮ ನಾಡು ಅಚ್ಚ ಹಸುರಿನಿಂದ ಬೆಟ್ಟಗುಡ್ಡಗಳಿಂದ ಪವಿತ್ರ ನದಿಗಳು ಹರಿಯುತ್ತಿರುವ, ಸಾಧು ಸಂತರು, ಶಿವ ಶರಣರು ದಾಸ ಶ್ರೇಷ್ಠರು ಅಲ್ಲದೆ ಮಹಾ ಮೇಧಾವಿಗಳು, ವೀರ ವನಿತೆಯರು ನಡೆದಾಡಿದ, ಸಾಹಿತಿಗಳು ಕವಿಗಳು ಭಿನ್ನಭಿನ್ನವಾಗಿ ಬಣ್ಣಿಸಿ ಸುಂದರವಾಗಿ ವರ್ಣಿಸಿದ, ವಿಭಿನ್ನ ವನ್ಯ ಜೀವಿಗಳನ್ನು ಹೊಂದಿರುವ ಶ್ರೀಗಂಧದ ಗುಡಿ ನಮ್ಮ ಕನ್ನಡ ನಾಡು ಎಂದು ವೈದ್ಯಕೀಯ ಸಚಿವ ಡಾ.ಸುಧಾಕರ್‌ ಹೇಳಿದರು.

Chikkaballapur: ಯಶಸ್ವಿನಿ ಯೋಜನೆ ಅನುಷ್ಠಾನಕ್ಕೆ ಅಧಿಕೃತ ಆದೇಶ

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗು ತಾಲೂಕು ಆಡಳಿತಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು ನಾಡು ನುಡಿ ಹಾಗು ನೆಲ ಜಲವನ್ನು ಮಾತ್ರವಲ್ಲದೇ ಸಾಹಿತ್ಯ ಸಂಸ್ಕೃತಿಯ ಪರಂಪರೆಯನ್ನು ಉಳಿಸಿರುವ ಎಲ್ಲ ಮಹನೀಯರನ್ನು ಸ್ಮರಣೆ ಮಾಡುವ ಪವಿತ್ರವಾದ ದಿನವಿದು. ವಿಶ್ವದಲ್ಲಿ ಆರುವರೆ ಸಾವಿರ ಭಾಷೆಗಳಿವೆ ಅದರಲ್ಲಿ ನಮ್ಮ ಕನ್ನಡ 27 ನೇ ಸ್ಥಾನದಲ್ಲಿದೆ ನಮ್ಮ ಸುಂದರ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

Follow Us:
Download App:
  • android
  • ios