ಹಿಟ್ಲರ್‌ಗೆ ಉಗ್ರರ ಹೋಲಿಸಿ ಇಸ್ರೇಲ್ ಕಿಚ್ಚು; ಹಮಾಸ್ ಭಯೋತ್ಪಾದಕರ ಸರ್ವನಾಶಕ್ಕೆ ಸಜ್ಜಾಗಿ ನಿಂತ 5ಲಕ್ಷ ಸೈನಿಕರು!
ಗಾಜಾ ಗಡಿ ಪ್ರದೇಶದಲ್ಲಿ ಸುಮಾರು 5 ಲಕ್ಷ ಮಂದಿ ಸೈನಿಕರನ್ನು ಇಸ್ರೇಲ್ ಈಗಾಗಲೇ ನಿಯೋಜನೆ ಮಾಡಿದೆ. ಯಾವುದೇ ಸಮಯ ದೊಳಗೆ ಇವರಿಗೆ ಗಾಜಾದೊಳಗೆ ನುಗ್ಗಿ ದಾಳಿ ನಡೆಸಲು ಸೂಚನೆ ಸಿಗಬಹುದು. ಹೀಗಾಗಿ ಗಡಿ ಪ್ರದೇಶದಲ್ಲಿ ಟ್ಯಾಂಕಗಳ ಜಮಾವಣೆ, ಸೈನಿಕ ರಿಗೆ ಅಗತ್ಯವಸ್ತುಗಳನ್ನು ಪೂರೈಸುವ ಕಾರ್ಯ ಗಳು ಭರದಿಂದ ಸಾಗುತ್ತಿವೆ. ಗಡಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಚೆಕ್ ಪೋಸ್ ನಿರ್ಮಾಣ ಮಾಡಲಾಗಿದ್ದು, ಎಲ್ಲಾ ವಾಹನ ಗಳನ್ನು ಇಲ್ಲಿಂದ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಹಿಟ್ಲರ್‌ನ ಬಳಿಕ ಅತಿದೊಡ್ಡ ಮಾರಣ ಹೋಮ ನಡೆಸಿದ ಹಮಾಸ್ ಉಗ್ರರಿಗೆ ಪಾಠ ಕಲಿಸಲು ಇಸ್ರೇಲ್ ಸಿದ್ಧತೆಗಳನ್ನು ನಡೆಸುತ್ತಿದೆ.

- ಅಜಿತ್ ಹನಮಕ್ಕನವರ್
ಸಂಪಾದಕ, ಏಷ್ಯಾನೆಟ್ ಸುವರ್ವನ್ಯೂಸ್
ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ಸಮಯದಲ್ಲಿ ಕುತಂತ್ರದಿಂದ ದಾಳಿ ನಡೆಸಿ ನೂರಾರು ಇಸ್ರೇಲಿಗರ ಮಾರಣ ಹೋಮ ನಡೆಸಿದ ಹಮಾಸ್ ಉಗ್ರರ ಕೃತ್ಯ, ಇಲ್ಲಿನ ಜನರಿಗೆ ಹಿಟ್ಲರ್ ನ ನೆನಪು ತಂದಿದೆ. ಹಮಾಸ್ ಉಗ್ರರನ್ನು ಹಿಟ್ಲರ್‌ಗೆ ಹೋಲಿಕೆ ಮಾಡಿ ಅವರ ವಿರುದ್ಧ ಕ್ರೋಧಗೊಂಡಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಿರ್ಮಾಣವಾ ಗಿರುವದೇಶದಲ್ಲಿ ಶಾಂತಿನೆಲೆಸಬೇಕಾದರೆ ಹಮಾಸ್ ಉಗ್ರ ರಸರ್ವನಾಶವಾಗಬೇಕು ಎಂದು ನಾವು ಎಲ್ಲಿ ಹೋದರೂ ಇಲ್ಲಿನ ಜನ ಹೇಳುತ್ತಿದ್ದಾರೆ.
ಯಾವ ಸಮಯದಲ್ಲಿ ಬೇಕಾದರೂ ಗಾಜಾ ಮೇಲೆ ದಾಳಿ ನಡೆಸಲು ಇಸ್ರೇಲಿನ ಸೈನಿಕರಿಗೆ ಆಜ್ಞೆ ದೊರೆಯುವ ಸಾಧ್ಯತೆ ಇರುವುದರಿಂದ, ಗಡಿ ಭಾಗದತ್ತ ತೆರಳುತ್ತಿದ್ದ ನಮ್ಮನ್ನು ಸೈನಿಕರು ಮರಳಿ ರಾಜಧಾನಿಗೆ ತೆರಳುವಂತೆ ಸೂಚಿಸಿದರು. ಗಡಿ ಭಾಗದಲ್ಲಿ ಪ್ರಕ್ಷುಬ್ಧ ಸ್ಥಿತಿ ಇದ್ದರೂ ಸಹ ರಾಜಧಾನಿಯಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿರುವುದರಿಂದ ಇಲ್ಲಿನ ನಾಗರಿಕರನ್ನು ಮಾತಾಡಿಸಲು ನಮಗೆ ಅವಕಾಶ ಸಿಕ್ಕಿತು. ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದು, 1948ರಲ್ಲಿ ಇಸ್ರೇಲ್ ರಚನೆಯಾದ ಬಳಿಕ ನಡೆದ ಅತಿ ಭೀಕರ ದಾಳಿಯಾಗಿದೆ. ಹಮಾಸ್ ಭಯೋತ್ಪಾದಕರ ಸರ್ವನಾಸ ಮಾಡಬೇಕು ಎಂದು ಹೇಳುತ್ತಿದ್ದಾರೆ.
ಇಸ್ರೇಲ್ ಯುದ್ಧದಲ್ಲಿ ಅಪಾಚೆ ಹೆಲಿಕಾಪ್ಟರ್‌ಗಳ ಕಾರ್ಯವೇನು.. ಯುದ್ಧ ಭೂಮಿಯಿಂದ ಅಜಿತ್ ಹನಮಕ್ಕನವರ್ ವರದಿ
ರಸ್ತೆಯಲ್ಲೆಲ್ಲಾ ಗುಂಡಿನ ರಾಶಿ:
ಪದೇ ಪದೇ ಇಸ್ರೇಲ್ ಮೇಲೆ ದಾಳಿ ನಡೆಸುತ್ತಾ ಶಾಂತಿ ಕದಡುತ್ತಿದ್ದ ಹಮಾಸ್ ಉಗ್ರರು ಈ ಬಾರಿ ಅತಿದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ್ದಾರೆ. ರಸ್ತೆಯುದ್ದಕ್ಕೂ ಬಿದ್ದಿರುವ ಗುಂಡಿನ ರಾಶಿ ಈ ದಾಳಿಯ ತೀವ್ರತೆಯ ಪ್ರಮಾಣ ಎಷ್ಟಿತ್ತು ಎ೦ಬುದನ್ನು ತೋರಿಸುತ್ತದೆ. ನಾವು ಹಮಾಸ್ ಉಗ್ರರು ಅ.1ರ ಶನಿವಾರ ದಾಳಿ ನಡೆಸಿದ ಪಟ್ಟಣಗಳಿಗೆ ಭೇಟಿ ನೀಡಿದ್ದೆವು. ಈ ವೇಳೆ ಪಟ್ಟಣಗಳ ಎಲ್ಲಾ ಭಾಗದಲ್ಲೂ ಗುಂಡುಗಳ ರಾಶಿ ಬಿದ್ದಿದ್ದು ನಮ್ಮ ಕಣ್ಣಿಗೆ ಬಿದ್ದಿತು. ಇದು ಇಸ್ರೇಲ್‌ನ ಒಳಗೆ ನುಗ್ಗಿದ ಹಮಾಸ್ ಉಗ್ರರು ನಡೆಸಿದ ಮಾರಣಹೋಮಕ್ಕೆ ಸಾಕ್ಷಿಯಾಗಿ ನಿಂತಿದೆ. ಅಲ್ಲದೇ ಗಾಜಾ ಪಟ್ಟಿ ಗಡಿಯ ಸಮೀಪ ಇರುವ ಪಟ್ಟಣಗಳಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಕಟ್ಟಡಗಳು ಸಂಪೂ ರ್ಣ ನಾಶವಾಗಿರುವ ದೃಶ್ಯಗಳು, ಕುಸಿದುಬಿದ್ದಿರುವ ಅಪಾರ್ಟ್ ಮೆ೦ಟ್‌ಗಳು ಕಾಣಸಿಗುತ್ತವೆ.
ಉಗ್ರರನ್ನು ಏಕಾಂಗಿಯಾಗಿ ಎದುರಿಸಿದ್ದ ಮಹಿಳೆ:
ಕಳೆದಶನಿವಾರ ಇಸ್ರೇಲ್‌ನ ಗಡಿಯನ್ನು ಭೇದಿಸಿ ಒಳನುಗ್ಗಿದ್ದ ಹಮಾಸ್ ಉಗ್ರರು, ಒಟ್ಟು 23 ಪಟ್ಟಣಗಳ ಮೇಲೆ ದಾಳಿ ನಡೆಸಿ ಕೈಗೆ ಸಿಕ್ಕ ಇಸ್ರೇಲಿಗರನ್ನು ಕೊಲ್ಲಲು ಉದ್ದೇಶಿಸಿದ್ದರು. ಇದೇ ನಿಟ್ಟಿನಲ್ಲಿ ಸ್ಟೈರ್‌ಡೋಟ್ ಎಂಬ ಪಟ್ಟಣದ ಮೇಲೆ ದಾಳಿ ನಡೆಸಿದ ಉಗ್ರರು, ಇಲ್ಲಿನ ಪೊಲೀಸ್ ಠಾಣೆಯ ಮೇಲೆ ಗುಂಡಿನ ದಾಳಿ ನಡೆಸಿ 7 ಮಂದಿಯನ್ನು ಹತ್ಯೆ ಮಾಡಿದ್ದರು. ಈ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಉಗ್ರರ ದಾಳಿಯನ್ನು ಎದುರಿಸಿದರು. ಬಳಿಕ ಪೊಲೀಸ್ ಠಾಣೆಯಲ್ಲಿ ಉಗ್ರರು ಮಾತ್ರ ಇದ್ದಾರೆ ಎಂದು ತಿಳಿದ ಬಳಿಕ ಸೇನೆ ಇಡೀ ಠಾಣೆಯನ್ನು ಉಡಾಯಿಸಿ ಅಲ್ಲಿದ್ದ ಉಗ್ರರನ್ನು ಹತ್ಯೆ ಮಾಡಿತ್ತು.ಸೊರ್‌ಡೋಟ್ ಪಟ್ಟಣವೊಂದ ರಲ್ಲೇ ಇಸ್ರೇಲ್ ಸೇನಾ ಪಡೆ 23 ಉಗ್ರರನ್ನು ಎನ್‌ಕೌಂಟರ್ ಮಾಡಿ, ಒಂದೇ ದಿನದಲ್ಲಿ ಅವರನ್ನು ಇಲ್ಲಿಂದ ಹಿಮ್ಮೆಟ್ಟಿಸಿತ್ತು.
ಹಮಾಸ್‌ನಿಂದ ಪೈಶಾಚಿಕ ಕೃತ್ಯ:
ಇಸ್ರೇಲ್ ಮೇಲೆ ಈ ಬಾರಿ ದಾಳಿ ನಡೆಸಿದ ಹಮಾಸ್ ಉಗ್ರರು ಮಕ್ಕಳು, ಮಹಿಳೆಯರನ್ನು ಹತ್ಯೆ ಮಾಡುವ ಮೂಲಕ ಪೈಶಾಚಿಕ ಕೃತ್ಯಗಳನ್ನು ಎಸಗಿದ್ದಾರೆ. ಗಡಿಯಿಂದ ಒಳ ನುಗ್ಗಿದ ಉಗ್ರರು, ದಾರಿಯಲ್ಲಿ ಎದುರಾದ ಇಸ್ರೇಲಿಗರ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಿದ್ದಾರೆ. ಮಹಿಳೆಯರನ್ನು ಅಪಹರಣ ಮಾಡಿ, ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಹಸುಳೆಗಳ ಮೇಲೂ ಕರುಣೆ ತೋರದೆ ಅವರನ್ನು ಹತ್ಯೆ ಮಾಡಿದ್ದಾರೆ. ಈ ಎಲ್ಲಾ - ಪೈಶಾಚಿಕಕೃತ್ಯಗಳು ಇಸ್ರೇಲಿಗರನ್ನು ಕೆರಳಿಸಿದ್ದು, ಈ ಬಾರಿ ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡುವ ಪಣ ತೊಟ್ಟಿದ್ದಾರೆ.
ಗಡಿ ಪ್ರದೇಶದಲ್ಲಿ 5 ಲಕ್ಷ ಸೈನಿಕರು: ಹಮಾಸ್
ಉಗ್ರರ ದಾಳಿ ನಡೆದ ಒಂದೆರಡು ದಿನಗಳವರೆಗೆ ಗಡಿ ಭಾಗದವರೆಗೂ ಪತ್ರಕರ್ತರು ಭೇಟಿ ನೀಡಲು ಇಸ್ರೇಲ್‌ನ ಸೇನೆ ಅನುಮತಿ ನೀಡಿತ್ತು. ಆದರೆ ನಾವು ಹೋಗುವ ವೇಳೆಗೆ ಇದಕ್ಕೆ ಅನುಮತಿಯನ್ನು ನಿರಾಕರಿಸಲಾಗಿತ್ತು. ಗಾಜಾ ಗಡಿಯಿಂದ ಸುಮಾರು 2 ಕಿಮೀ ದೂರದವರೆಗೆ ಮಾತ್ರ ನಮಗೆ ಹೋಗಲು ಅನುಮತಿ ನೀಡಲಾಗಿದೆ. ಅದು ಬೆಳಿಗ್ಗೆಯ ಸಮಯದಲ್ಲಿ ಮಾತ್ರ. ರಾತ್ರಿಯಾಗುತ್ತಿದ್ದಂತೆ ರಾಜಧಾನಿ ಟೆಲ್ ಅವಿವ್‌ಗೆ ತೆರಳಲು ಸೂಚಿಸಲಾಗುತ್ತದೆ. ಏಕೆಂದರೆ ಗಡಿ ಭಾಗದಲ್ಲಿ ರಾತ್ರಿಯ ಸಮಯದಲ್ಲಿ 2 ಪಡೆಗಳು ನಡೆಸುವ ದಾಳಿಯ ತೀವ್ರತೆ ಅಧಿಕವಾಗಿರುತ್ತದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಎಲ್ಲರನ್ನೂ ರಾಜಧಾನಿಗೆ ತೆರಳಲು ಸೂಚಿಸಲಾಗುತ್ತದೆ.
ಪ್ರತ್ಯಕ್ಷ ವರದಿ: ಪ್ರತೀಕಾರಕ್ಕೆ ತಹತಹಿಸುತ್ತಿದೆ ಇಸ್ರೇಲ್; ಗಡುವು ಅಂತ್ಯ ಭೂದಾಳಿಗೆ ಸಜ್ಜು
ಗಾಜಾ ಗಡಿ ಪ್ರದೇಶದಲ್ಲಿ ಸುಮಾರು 5 ಲಕ್ಷ ಮಂದಿ ಸೈನಿಕರನ್ನು ಇಸ್ರೇಲ್ ಈಗಾಗಲೇ ನಿಯೋಜನೆ ಮಾಡಿದೆ. ಯಾವುದೇ ಸಮಯ ದೊಳಗೆ ಇವರಿಗೆ ಗಾಜಾದೊಳಗೆ ನುಗ್ಗಿ ದಾಳಿ ನಡೆಸಲು ಸೂಚನೆ ಸಿಗಬಹುದು. ಹೀಗಾಗಿ ಗಡಿ ಪ್ರದೇಶದಲ್ಲಿ ಟ್ಯಾಂಕಗಳ ಜಮಾವಣೆ, ಸೈನಿಕ ರಿಗೆ ಅಗತ್ಯವಸ್ತುಗಳನ್ನು ಪೂರೈಸುವ ಕಾರ್ಯ ಗಳು ಭರದಿಂದ ಸಾಗುತ್ತಿವೆ. ಗಡಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಚೆಕ್ ಪೋಸ್ ನಿರ್ಮಾಣ ಮಾಡಲಾಗಿದ್ದು, ಎಲ್ಲಾ ವಾಹನ ಗಳನ್ನು ಇಲ್ಲಿಂದ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಹಿಟ್ಲರ್‌ನ ಬಳಿಕ ಅತಿದೊಡ್ಡ ಮಾರಣ ಹೋಮ ನಡೆಸಿದ ಹಮಾಸ್ ಉಗ್ರರಿಗೆ ಪಾಠ ಕಲಿಸಲು ಇಸ್ರೇಲ್ ಸಿದ್ಧತೆಗಳನ್ನು ನಡೆಸುತ್ತಿದೆ.