Asianet Suvarna News Asianet Suvarna News

ಯಾದಗಿರಿಯ ಈ ಬಾಲಕಿ ವೈದ್ಯಕೀಯ ಲೋಕಕ್ಕೆ ಸವಾಲು; 14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸಿ ಬದುಕಿದ ಬಾಲೆ!

ಮನುಷ್ಯ ಸದೃಢವಾಗಿ ಬದುಕಲು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು. ಒಂದು ವೇಳೆ ಒಂದೊತ್ತು ಊಟ ಕಡಿಮೆಯಾದ್ರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ ಆಹಾರವಿಲ್ಲದೇ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸಿಯೇ 14 ವರ್ಷದಿಂದ ಬದುಕಿದ್ದಾಳೆ‌. ಬಾಲಕಿಯ ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.

The Girl lived without food eating only  jaggery and milk from 14 years at yadgir rav
Author
First Published Nov 26, 2023, 7:39 PM IST

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ನ.26): ಮನುಷ್ಯ ಸದೃಢವಾಗಿ ಬದುಕಲು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು. ಒಂದು ವೇಳೆ ಒಂದೊತ್ತು ಊಟ ಕಡಿಮೆಯಾದ್ರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆಯ ರೇಣುಕಮ್ಮ ಎಂಬ ಬಾಲಕಿ ಆಹಾರವಿಲ್ಲದೇ ಕೇವಲ ಬೆಲ್ಲ, ಹಾಲು ಹಾಗೂ ನೀರು ಸೇವಿಸಿಯೇ 14 ವರ್ಷದಿಂದ ಬದುಕಿದ್ದಾಳೆ‌. ಬಾಲಕಿಯ ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.

14 ವರ್ಷದಿಂದ ಕೇವಲ ಬೆಲ್ಲ, ಹಾಲು ಸೇವಿಸಿ ಬದುಕಿದ ಬಾಲೆ!

ಸಾಮಾನ್ಯವಾಗಿ ಮನುಷ್ಯರಿಗೆ ಊಟ ಹಾಗೂ ನೀರು ಬಹಳ ಅವಶ್ಯ. ಊಟವಿಲ್ಲದೇ ಬದುಕುಳಿಯಲು ಸಾಧ್ಯವೆ ಇಲ್ಲ. ಒಂದು ದಿನ , ಎರಡು ದಿನ ಅಥವಾ ಒಂದು ವಾರ ಊಟ ಬಿಡಬಹುದು. ಆದ್ರೆ ಯಾದಗಿರಿಯ ಬಾಲಕಿಯ ಬದುಕಿದ ರೀತಿ ಹಾಗೂ ಅವಳ ಆಹಾರ ಪದ್ಧತಿ ಕೇಳಿದ್ರೆ ಎಲ್ಲರೂ ಶಾಕ್ ಆಗ್ತಾರೆ. 

Viral: ಬಾಲಕಿಯ ಮೈಮೇಲೆ ಮೂಡುತ್ತಿದೆ ರಾಮ್‌, ರಾಧೆಯ ಹೆಸರು, ವೈದ್ಯಲೋಕಕ್ಕೆ ಅಚ್ಚರಿ!

ಹೌದು, ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟ ನಿವಾಸಿ ನಾಗಪ್ಪ-ಅಡಿವೆಮ್ಮ ಎಂಬ ದಂಪತಿಗಳ 2ನೇ ಮಗಳಾದ ರೇಣುಕಮ್ಮ ಕೇವಲ ಬೆಲ್ಲ ಹಾಗೂ ಹಾಲು ಸೇವಿಸಿ ಬರೊಬ್ಬರಿ 14 ವರ್ಷದಿಂದ ಬದುಕಿದ್ದಾಳೆ. ಈ ರೇಣುಕಮ್ಮ 14 ವರ್ಷದ ಬಾಲಕಿ. ರಂಗಂಪೇಟೆಯ ಪ್ರಿಯದರ್ಶಿನಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ಈ ರೇಣುಕಮ್ಮ ತಮ್ಮ ಮನೆಯಲ್ಲಿ ತಾನೇ ಅಡುಗೆ ತಯಾರಿಸ್ತಾಳೆ. ಆದ್ರೆ ತಯಾರಿಸಿದ ಯಾವುದೇ ಅಡುಗೆಯನ್ನು ರುಚಿ ರುಚಿ ತಿಂಡಿಯನ್ನು ತಿನ್ನುವುದಿಲ್ಲ. ಮನೆಯಲ್ಲಿ ಅವರ ತಂದೆ-ತಾಯಿ, ಸಹೋದರರು ಹಾಗೂ ತಮ್ಮ ಕ್ಲಾಸಿನ ಸಹಪಾಠಿಗಳು ಎಷ್ಟೇ ಒತ್ತಾಯ ಮಾಡಿದ್ರೂ ಊಟ ಮಾತ್ರ ಮಾಡೋದಿಲ್ಲ. ಯಾಕಂದ್ರೆ ಈ ಬಾಲಕಿ ರೇಣುಕಮ್ಮನಿಗೆ ಊಟ ಮಾಡಿದ್ರೆ ವಾಂತಿ ಆಗುತ್ತಂತೆ. ಇನ್ನು ಬಾಲಕಿ ಸೇವಿಸುವ ಆಹಾರ ಪದ್ಧತಿ ಬಗ್ಗೆಯೂ ವೈದ್ಯರು ತಪಾಸಣೆ ಮಾಡಿದ್ರೂ ಸಹ ಪರಿಹಾರ ಹುಡುಕುವುದು ಸಾಧ್ಯವಾಗಿಲ್ಲ.

ವೈದ್ಯಕೀಯ ಲೋಕಕ್ಕೆ ಸವಾಲೆಸೆದ ಬಾಲಕಿ ರೇಣುಕಮ್ಮ

ಇನ್ನು ಈ 14 ವರ್ಷದ ಬಾಲಕಿ ರೇಣುಕಮ್ಮ ಆಟ-ಪಾಠ ಎಲ್ಲವೂ ಚೆನ್ನಾಗಿಯೇ ಮಾಡ್ತಾಳೆ. ಆದ್ರೆ ಊಟ ಮಾತ್ರ ಮಾಡಲ್ಲ, ಹುಟ್ಟಿದಾಗಿನಿಂದಲೂ ಕೇವಲ ಬೆಲ್ಲ, ಹಾಲು ಮಾತ್ರ ಸೇವಿಸುತ್ತ ಬದುಕಿದ್ದಾಳೆ. ಇತ್ತೀಚಿಗೆ ಅವರ ಕ್ಲಾಸ್ ಮೆಟ್ ಬೆಲ್ಲ ತಿಂತಾಳೆ ಅಂತ ಅಪಹಾಸ್ಯ ಮಾಡ್ತಿದ್ದರಂತೆ. ಅದಕ್ಕಾಗಿ ಮಧ್ಯಾಹ್ನ ಹೊತ್ತು ಬೆಲ್ಲ ತಿನ್ನೋದು ಸಹ ಈ ಬಾಲಕಿ ರೇಣುಕಾ ಬಿಟ್ಟಿದ್ದಾಳೆ! ಇದರಿಂದಾಗಿ ಈಗ ಒಂದು ದಿನಕ್ಕೆ ಕೇವಲ ಎರಡು ಹೊತ್ತು ಮಾತ್ರ ಬೆಲ್ಲ, ಹಾಲು ಸೇವನೆ ಮಾಡ್ತಿದ್ದಾಳೆ. ಬಾಲಕಿ ರೇಣುಕಮ್ಮನಿಗೆ ಯಾವುದಾದ್ರು ಕಾಯಿಲೆ ಇದೇನಾ ಅಂತ ವೈದ್ಯಕೀಯ ತಪಾಸಣೆ ಮಾಡಿದ್ರೆ ಯಾವುದೇ ಕಾಯಿಲೆ ಪತ್ತೆ ಆಗಿಲ್ವಂತೆ. ಬಾಲಕಿ ಊಟ ಮಾಡದೇ ಕೇವಲ ಬೆಲ್ಲ ಹಾಗೂ ಹಾಲು ಮಾತ್ರ ಸೇವಿಸುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. 

ರೇಣುಕಮ್ಮ ಐದು ವರ್ಷದ ಮಗುವಿದ್ದಾಗ ಬೆಲ್ಲ-ಹಾಲು ಈ ಆಹಾರ ಪದ್ಧತಿಯನ್ನು ತಪ್ಪಿಸಲು ಅವರ ಪೋಷಕರು ಕೊಟ್ಟಿರಲಿಲ್ವಂತೆ, ಆಗ ಐದು ಕೇವಲ ನೀರನ್ನು ಕುಡಿದಿದ್ದಳಂತೆ. ಬಳಿಕ ಹೆತ್ತ ಕರುಳು ಹಟ ಮಾಡಿದ ಮಗಳಿಗೆ ಅಂದು ಬೆಲ್ಲ-ಹಾಲು ನೀಡಿದ್ರಂತೆ. ಅಂದಿನಿಂದ ಬಾಲಕಿ ರೇಣುಕಮ್ಮ ಜೀವಿಸಿದ ರೀತಿ, ಆಹಾರ ಪದ್ಧತಿ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿದೆ. ನಮ್ಮ ಮಗಳು ಕೇವಲ ಬೆಲ್ಲ-ಹಾಲು ಸೇವನೆ ಮಾಡ್ತಾಳೆ. ಆಕೆ ಹುಟ್ಟಿದಾಗಿನಿಂದಲೂ ಈ ಸಮಸ್ಯೆ ಎದುರಾಗಿದೆ. ಇದು ನಮ್ಮನ್ನು ವಿಚಲಿತಗೊಳಿಸಿದೆ. ಯಾವ ಆಸ್ಪತ್ರೆಯಲ್ಲಿ ತೋರಿಸಬೇಕು ಎಂಬ ಆತಂಕವಾಗಿದೆ. ಜೊತೆಗೆ ನಮ್ಮಲ್ಲಿ ಹಣಕಾಸಿನ ಕೊರತೆಯಾಗಿದೆ ಅಂತ ಅಳಲು ತೋಡಿಕೊಂಡಿದ್ದಾರೆ.

ಚಿಕಿತ್ಸೆಗಾಗಿ ಬಾಲಕಿ ಮೆದುಳಿನ ಒಂದು ಭಾಗ ಸ್ವಿಚ್ ಆಫ್ ಮಾಡಿದ ವೈದ್ಯರು!

ಬಾಲಕಿ ರೇಣುಕಮ್ಮನ ನೆರವಿಗೆ ಬರಬೇಕಿದೆ ಸರ್ಕಾರ

ಒಟ್ನಲ್ಲಿ ಬಾಲಕಿ ರೇಣುಕಮ್ಮ ಹುಟ್ಟಿ 14 ವರ್ಷವಾಯಿತು. ಅಂದಿನಿಂದ ಹಿಂದಿನವರೆಗೆ ಕೇವಲ ಬೆಲ್ಲ-ಹಾಲಿನಿಂದ ಬದುಕಿದ್ದು ಎಲ್ಲರನ್ನು ನಿಬ್ಬೆರಗೊಳಿಸಿದೆ. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಬಾಲಕಿಯ ಶಕ್ತಿ ಕುಂದುತಿದೆ ಎಂದು ಪೋಷಕರು ಕಂಗಾಲಾಗಿದ್ದಾರೆ. ಹೀಗಾಗಿ ಬಡತನ ಬೇಗುದಿಯಲ್ಲಿ ಬಳಲುತ್ತಿರುವ ಬಾಲಕಿ ರೇಣುಕಮ್ಮನಿಗೆ ಸರ್ಕಾರ ಹೆಚ್ಚಿನ ವೈದ್ಯಕೀಯ ತಪಾಸಣೆ ಮಾಡಿಸಿ, ಕಾಯಿಲೆ ಪತ್ತೆ ಹಚ್ಚಿ, ಹೆಚ್ಚಿನ ಚಿಕಿತ್ಸೆ ನೀಡಬೇಕು. ಜೊತೆಗೆ ಎಲ್ಲರಂತೆ ಆಹಾರವನ್ನು ಸೇವಿಸುವಂತಾಗಲಿ ಎಂಬುದು ನಮ್ಮ ಆಶಯ.

Latest Videos
Follow Us:
Download App:
  • android
  • ios