Asianet Suvarna News Asianet Suvarna News

Viral: ಬಾಲಕಿಯ ಮೈಮೇಲೆ ಮೂಡುತ್ತಿದೆ ರಾಮ್‌, ರಾಧೆಯ ಹೆಸರು, ವೈದ್ಯಲೋಕಕ್ಕೆ ಅಚ್ಚರಿ!

Ram And Radhe Name are seen written on the girl body: ವೈದ್ಯಲೋಕಕ್ಕೆ ಅಚ್ಚರಿ ಎನಿಸುವಂತೆ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಹರ್ದೋಯಿಯಲ್ಲಿ 8 ವರ್ಷದ ಬಾಲಕಿಯ ಮೈಮೇಲೆ ರಾಮ್‌, ರಾಧೆ ಎನ್ನುವ ಹೆಸರು ಹಿಂದಿಯಲ್ಲಿ ಮೂಡುತ್ತಿದೆ. ಇದನ್ನು ಕಂಡು ವೈದ್ಯರು ಹಾಗು ಕುಟುಂಬಸ್ಥರು ಅಚ್ಚರಿ ಪಟ್ಟಿದ್ದಾರೆ
 

uttar pradesh hardoi girl Sakshi stomach has ram Radhe hindi words doctors surprised Viral Video san
Author
First Published Nov 7, 2023, 4:00 PM IST

ನವದೆಹಲಿ (ನ.7): ಉತ್ತರ ಪ್ರದೇಶದ ಹರ್ದೋಯಿಯಲ್ಲಿ ವೈದ್ಯಲೋಕಕ್ಕೆ ಅಚ್ಚರಿ ಎನಿಸುವಂಥ ಸಿದ್ದಿ ವರದಿಯಾಗಿದೆ. ಕಳೆದ 15-20 ದಿನಗಳಿಂದ ಇಲ್ಲಿನ 8 ವರ್ಷದ ಸಾಕ್ಷಿ ಎನ್ನುವ ಬಾಲಕಿಯ ಮೈಮೇಲೆ ರಾಮ, ರಾಧೆಯ ಹೆಸರುಗಳು ತನ್ನಿಂದ ತಾನೆ ಮೂಡುತ್ತಿವೆ. ಹಿಂದಿ ಭಾಷೆಯಲ್ಲಿ ಈ ಹೆಸರುಗಳು ಮೂಡಲು ಆರಂಭಿಸುತ್ತಿದ್ದು, ಸುಲಭವಾಗಿ ಓದಲು ಕೂಡ ಸಾಧ್ಯವಾಗುವಷ್ಟು ಸ್ಪಷ್ಟವಾಗಿ ಮೂಡಿಬಂದಿದೆ. ಕುಟುಂಬಸ್ಥರು ಆರಂಭದಲ್ಲಿಯೇ ಇದನ್ನು ನೋಡಿದ್ದರಾದರೂ, ಈ ಬಗ್ಗೆ ಹೆಚ್ಚಿನ ಗಮನ ನೀಡಿರಲಿಲ್ಲ. ಬಳಿಕ ಆಕೆಯ ದೇಹದ ಮೇಲೆ ಈ ಹೆಸರುಗಳು ಬಹಳ ಸ್ಪಷ್ಟವಾಗಿ ಕಾಣಿಸಲು ಆರಂಭಿಸಿದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಸ್ಪತ್ರೆಯಿಂದ ಆಕೆ ಮನೆಗೆ ಬಂದ ಬಳಿಕ ಸಾಕ್ಷಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿಂದು ದೇವರು ಹಾಗೂ ದೇವತೆಯ ಹೆಸರುಗಳು ತನ್ನಿಂದ ತಾನೆ ಆಕೆಯ ಮೈಮೇಲೆ ಮೂಡುತ್ತಿರುವುದನ್ನು ನೋಡಿ ಸ್ಥಳೀಯರು ಕೂಡ ಬಹಳ ಅಚ್ಚರಿಪಟ್ಟಿದ್ದಾರೆ. ಜಗತ್ತಿನಲ್ಲಿ ಸಾಕಷ್ಟು ಅಚ್ಚರಿಗಳಿವೆ. ಆದರೆ, ಸೋಶಿಯಲ್‌ ಮೀಡಿಯಾ ಜಮಾನದಲ್ಲಿ ಇದು ಇನ್ನಷ್ಟು ಬೆಳಕಿಗೆ ಬರುತ್ತಿದ್ದು, ವಿಜ್ಞಾನಿಗಳು ಹಾಗೂ ವೈದ್ಯರಿಗೆ ಇದು ಸವಾಲಾಗಿ ಪರಿಣಮಿಸಿದೆ.

ಹರ್ದೋಯಿಯ ಬಾಲಕಿಯ ಮೈಮೇಲೆ ರಾಧೆ ಹಾಗೂ ರಾಮ್‌ನ ಹೆಸರುಗಳು ತನ್ನಿಂದ ತಾನೆ ಮೂಡಿ ಬರುತ್ತಿದೆ. ಇದನ್ನು ಕಂಡು ವೈದ್ಯರು ಹಾಗೂ ಕುಟುಂಬಸ್ಥರು ಕೂಡ ಅಚ್ಚರಿಪಟ್ಟಿದ್ದಾರೆ. ಇಲ್ಲಿಯವರೆಗೂ ಆಕೆಯ ಮೈಮೇಲೆ ದೇವರ ಹೆಸರು ಹಿಂದಿಯಲ್ಲಿ ಮೂಡಿ ಬರಲು ಕಾರಣವೇನು ಅನ್ನೋದು ಈವರೆಗೂ ತಿಳಿದುಬಂದಿಲ್ಲ. ಕೆಲವರು ಇದು ಪವಾಡ ಎಂದಿದ್ದರೆ, ಇನ್ನೂ ಕೆಲವರು ಇದು ದೇವರ ಆಶೀರ್ವಾದ ಎಂದಿದ್ದಾರೆ. ಆದರೆ, 8 ವರ್ಷದ ಬಾಲಕಿಯ ತಂದೆ ಹೇಳುವ ಪ್ರಕಾರ, ದೇವರನ್ನು ಆಕೆ ಅತಿಯಾಗಿ ಪೂಜೆ ಮಾಡುತ್ತಿದ್ದಳು. ಅದೇ ಕಾರಣಕ್ಕೆ ಆಕೆಯ ಮೈಮೇಲೆ ಈ ಹೆಸರುಗಳು ಮೂಡುತ್ತಿವೆ ಎಂದು ಹೇಳಿದ್ದಾರೆ.

ಹರ್ದೋಯಿ ಮೂಲದ ರೈತ ದೇವೇಂದ್ರ ಶಾಹಿಜಾನ್‌ ಗ್ರಾಮ ಮಧೋಗಂಜ್‌ ಬ್ಲಾಕ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಕಳೆದ 15-20 ದಿನಗಳಿಂದ ಆಕೆಯ ಮೈಮೇಲೆ ಈ ಹೆಸರು ಮೂಡಿದ್ದನ್ನು ಗಮನಿಸಿದ್ದಾಗಿ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆವು. ವೈದ್ಯರು ಕೂಡ ಇದನ್ನು ಕಂಡು ಅಚ್ಚರಪಟ್ಟಿದ್ದಾರೆ. ಆದರೆ, ವೈದ್ಯರು ಕೂಡ ಈಕೆಯ ಮೈಮೇಲೆ ಹೆಸರು ಮೂಡಿರುವುದಕ್ಕೆ ಕಾರಣವೇನು ಅನ್ನೋದನ್ನು ತಿಳಿಸಿಲ್ಲ ಎಂದಿದ್ದಾರೆ.

ವೈದ್ಯಕೀಯ ವಿಜ್ಞಾನದಲ್ಲಿ ಇಲ್ಲಿಯವರೆಗೆ ಏನೂ ದಾಖಲಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಸಾಕ್ಷಿ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಲ್ಲಿ, ಇದ್ದಕ್ಕಿದ್ದಂತೆ ದೇಹದ ಮೇಲೆ ಹಿಂದಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಹೆಸರುಗಳನ್ನು ನೋಡಿದ ಸಾಕ್ಷಿ ಆಶ್ಚರ್ಯಚಕಿತರಾಗಿದ್ದಾರೆ. ಆದರೆ, ರೈತ ದೇವೇಂದ್ರ ಮಾತ್ರ ಮಗಳ ಸ್ಥಿತಿಯಿಂದ ಚಿಂತೆಗೀಡಾಗಿದ್ದಾರೆ. ಇದ್ದಕ್ಕಿದ್ದಂತೆ ಸಾಕ್ಷಿಯ ಕೈ, ಕಾಲು, ಹೊಟ್ಟೆ ಮತ್ತು ಬೆನ್ನಿನ ಮೇಲೆ ದೇವರ ಹೆಸರುಗಳು ಮೂಡಲು ಆರಂಭಿಸಿವೆ. ಈ ವಿಷಯ ತಿಳಿದ ಕುಟುಂಬಸ್ಥರು ಕಂಗಾಲಾಗಿದ್ದಲ್ಲದೆ, ಬಾಲಕಿಯ ಶಾಲಾ ಸಹಪಾಠಿಗಳು, ಶಿಕ್ಷಕರು, ಗ್ರಾಮಸ್ಥರು, ಆಸ್ಪತ್ರೆ ವೈದ್ಯರೂ ಬೆಚ್ಚಿಬಿದ್ದಿದ್ದಾರೆ.

ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್‌, 'ಡೈವೋರ್ಸ್‌ ಆಗಿರೋ ಬಗ್ಗೆ ಡೌಟೇ ಇಲ್ಲ' ಎಂದ ಫ್ಯಾನ್ಸ್‌!

ಬಾಲಕಿಯನ್ನು ಪರೀಕ್ಷಿಸಿದ ಪಿಎಚ್‌ಸಿ ವೈದ್ಯ ಸಂಜಯ್ ಬಾಲಕಿಯನ್ನು ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಂತಹ ಘಟನೆಯನ್ನು ಹಿಂದೆಂದೂ ನೋಡಿಲ್ಲ, ಕೇಳಿಲ್ಲ ಎಂದಿದ್ದಾರೆ. ಮತ್ತೊಂದೆಡೆ, ಮೊಮ್ಮಕ್ಕಳಿಗೆ ದೇವರ ಮೇಲಿನ ಭಯ, ಭಕ್ತಿ ಎಲ್ಲವೂ ಇದೆ. ಆ ಕಾರಣಕ್ಕಾಗಿಯೇ ಇದು ಸಂಭವಿಸಿರಬಹುದು ಎಂದು ಸಾಕ್ಷಿ ಅಜ್ಜ ಹೇಳಿದ್ದಾರೆ. ತಮ್ಮ ಇಡೀ ಕುಟುಂಬ ದೈವ ಭಕ್ತರು. ಆ ಕಾರಣದಿಂದಾಗಿ, ದೇವರ ದಯೆಯಿಂದ ಮೊಮ್ಮಗಳ ದೇಹದಲ್ಲಿ ಇಂತಹ ಪವಾಡಗಳು ಸಂಭವಿಸಿದೆ. ಇದರಿಂದ ನಾವು ಧನ್ಯರಾಗಿದ್ದೇವೆ ಎಂದು ಹೇಳಿದ್ದಾರೆ. 

'ವೇಶ್ಯಾವಾಟಿಕೆ ಕೂಲ್‌ ಪ್ರೊಫೆಶನ್‌..' ಎಂದ ವಿದೂಷಿ ಸ್ವರೂಪ್‌, ಸೋಶಿಯಲ್‌ ಮೀಡಿಯಾದಲ್ಲಿ ಶುರು ಜಟಾಪಟಿ!

ಕಳೆದ 15-20 ದಿನಗಳಲ್ಲಿ ಸಾಕಷ್ಟು ವೈದ್ಯರಿಗೆ ಮಗಳನ್ನು ತೋರಿಸಿದ್ದೇನೆ. ವೈದ್ಯಕೀಯ ಕಾಲೇಜಿನ ಚರ್ಮ ವಿಭಾಗಕ್ಕೆ ಭೇಟಿ ನೀಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆದರೆ, ಮಗಳಿವೆ ಯಾವುದೇ ಸಮಸ್ಯೆ ಇಲ್ಲದ ಕಾರಣ, ದೇವರ ದರ್ಶನ ಪಡೆಯಲು ತೀರ್ಮಾನ ಮಾಡಿದ್ದೇವೆ. ವೈದ್ಯರ ಬಳಿಗೆ ಹೋಗೋದಿಲ್ಲ. ಆದರೆ, ಬಾಲಕಿಯ ಮೈಮೇಲೆ, ರಾಧೆ-ರಾಧೆ, ರಾಮ್‌ ರಾಮ್‌ ಹೆಸರು ಮೂಡಿಬರಲು ಕಾರಣವೇನು ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

Follow Us:
Download App:
  • android
  • ios