ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಮೃತದೇಹ ಕೊನೆಗೂ ಪತ್ತೆ!

ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಮಿಸ್ಸಿಂಗ್ ಪ್ರಕರಣ ಸಂಬಂಧಪಟ್ಟಂತೆ ಮುಮ್ತಾಜ್ ಆಲಿ ಮೃತದೇಹ ಕೊನೆಗೂ ಪತ್ತೆಯಾಗಿದೆ. 

The dead body of former MLA Moiddin brother Mumtaz Ali was finally found gvd

ಮಂಗಳೂರು (ಅ.07): ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಮಿಸ್ಸಿಂಗ್ ಪ್ರಕರಣ ಸಂಬಂಧಪಟ್ಟಂತೆ ಮುಮ್ತಾಜ್ ಆಲಿ ಮೃತದೇಹ ಕೊನೆಗೂ ಪತ್ತೆಯಾಗಿದೆ. ಕುಳೂರು ಸೇತುವೆ ಅಡಿ ಭಾಗದಲ್ಲೇ ಮುಮ್ತಾಜ್ ಮೃತದೇಹ ಪತ್ತೆಯಾಗಿದ್ದು, ಟೀ ಶರ್ಟ್ ಹಾಗೂ ಜೀನ್ಸ್ ಧರಿಸಿದ್ದಾರೆ. 24 ಗಂಟೆಗಳ ಹುಡುಕಾಟದ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದ್ದು, ನಿನ್ನೆ ಬೆ.4.40 ರಿಂದ 5 ಗಂಟೆ ಹೊತ್ತಿಗೆ ನದಿಗೆ ಮುಮ್ತಾಜ್ ಹಾರಿದ್ದಾರೆ. ತಣ್ಣೀರು ಬಾವಿ ಈಜುಗಾರರ ತಂಡಕ್ಕೆ ಮೃತದೇಹ ಸಿಕ್ಕಿದ್ದು, ಮುಮ್ತಾಜ್ ಮೃತದೇಹವನ್ನು  ಮುಳುಗುತಜ್ಞರು ಹೊರತೆಗೆದಿದ್ದಾರೆ. ಸದ್ಯ ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವ ಅಕ್ರಂದನ ವ್ಯಕ್ತಪಡಿಸಿದ್ದಾರೆ.

ಮುಮ್ತಾಜ್ ಆಲಿ ಬ್ಲಾಕ್ ಮೇಲ್‌ಗೆ ನಟೋರಿಯಸ್ 'ಸತ್ತಾರ್' ಎಂಟ್ರಿಯಾಗಿದ್ದೇಗೆ?: ಮಹಿಳೆ ರೆಹಮತ್‌ಳ ಬ್ಲಾಕ್ ಮೇಲ್ ನಿಂದ ಲಕ್ಷ ಲಕ್ಷ ಕಳೆದುಕೊಂಡಿದ್ದ ಮುಮ್ತಾಜ್ ಗೆ ಸತ್ತಾರ್ ಟೀಂ ಬ್ಲ್ಯಾಕ್ ಮೇಲ್ ಮಾಡಿತ್ತು. ಹಲವು ತಿಂಗಳಿಂದ ಮಹಿಳೆಗೆ ಮುಮ್ತಾಜ್ ಅಲಿ ಲಕ್ಷ ಲಕ್ಷ ಹಣವನ್ನು ಸುರಿದಿದ್ದರು. ಆದರೆ ಮತ್ತಷ್ಟು ಹಣಕ್ಕಾಗಿ ಪೀಡಿಸಿದ್ದ ಮಹಿಳೆ ರೆಹಮತ್, ಹಣದ ಜೊತೆಗೆ ಮದುವೆ ಆಗುವಂತೆಯೂ ಟಾರ್ಚರ್ ಕೊಟ್ಟಿದ್ದಳು. ಆದರೆ ಇದಕ್ಕೆ ಒಪ್ಪದೇ ಹಣ ಕೊಡೋದನ್ನೂ ಮುಮ್ತಾಜ್ ನಿಲ್ಲಿಸಿದ್ದ. ಹೀಗಾಗಿ ಬೇರೆ ದಾರಿ ಕಾಣದೇ ಮುಮ್ತಾಜ್, ರೆಹಮತ್ ರಾಜಕೀಯ ವಿರೋಧಿಗಳನ್ನ ಹುಡುಕಿದ್ದ. ಈ ವೇಳೆ ರೆಹಮತ್ ಳಿಗೆ ಸಿಕ್ಕವನೇ ಮುಮ್ತಾಜ್ ಕಡುವಿರೋಧಿ ಸತ್ತಾರ್. 

ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ

ಸತ್ತಾರ್ ಗೆ ಕರೆ ಮಾಡಿ ಮುಮ್ತಾಜ್ ಜೊತೆಗಿನ ಸಂಬಂಧ ರೆಹಮತ್ ಬಿಚ್ಚಿಟ್ಟಿದ್ದಾರೆ. ಈ ವೇಳೆ ರೆಹಮತ್ ಕಾಲ್ ರೆಕಾರ್ಡ್ ಅನ್ನು ಸತ್ತಾರ್ ಮಾಡಿಕೊಂಡಿದ್ದ. ಕಾಲ್ ರೆಕಾರ್ಡ್ ಹಿಡಿದು ಮತ್ತೆ ಮೂವರನ್ನು ಸೇರಿಸಿ ಮುಮ್ತಾಜ್ ಹನಿಟ್ರ್ಯಾಪ್ ಆಡಿಯೋ ಮುಂದಿಟ್ಟು ಮುಮ್ತಾಜ್ ಗೆ ನಿರಂತರ ಬ್ಲಾಕ್ ಮೇಲ್ ಮಾಡಲಾಗಿದೆ.  ಎರಡು ಕೋಟಿ ಕೊಡದೇ ಇದ್ದರೆ ಆಡಿಯೋ ವೈರಲ್ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಕೊನೆಗೆ 25 ಲಕ್ಷ ಕೊಟ್ಟರೂ ಮತ್ತೆ ಮತ್ತೆ ನಿರಂತರ ಬೆದರಿಕೆ ಹಾಕಿದ್ದು, ಹಣ ಕೊಡಲು ಒಪ್ಪದೇ ಇದ್ದಾಗ ಕುಟುಂಬಸ್ಥರಿಗೆ ವಿಷಯವನ್ನು ಮಹಿಳೆ ತಿಳಿಸಿದ್ದಾರೆ. ಕೊನೆಗೆ ಮರ್ಯಾದೆ ಹೋಯ್ತು ಅಂತ ಮುಮ್ತಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios