ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ
ಉಪಚುನಾವಣೆಯಿಂದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಚನ್ನಪಟ್ಟಣ ನೆನಪಾಗ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣ (ಅ.07): ಉಪಚುನಾವಣೆಯಿಂದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಚನ್ನಪಟ್ಟಣ ನೆನಪಾಗ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ತಾಲೂಕಿನ ಕೋಡಂಬಳ್ಳಿಯಲ್ಲಿ ಭಾನುವಾರ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅವರು ಮಾತನಾಡಿದರು. ಚನ್ನಪಟ್ಟಣದ ಸೀಟ್ ಖಾಲಿ ಇರುವ ಕಾರಣಕ್ಕೆ ಬಂದಿದ್ದೀನಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿ, ಕುರ್ಚಿ ಖಾಲಿ ಇಲ್ಲದಿದ್ದರೆ ಚನ್ನಪಟ್ಟಣಕ್ಕೆ ಬರ್ತಿರಲಿಲ್ವಾ?. ಕುರ್ಚಿ ಖಾಲಿ ಇರುವ ಕಾರಣಕ್ಕೆ ತಾನೆ ಬಂದಿರೋದು. ಇಲ್ಲವಾದರೆ ಚನ್ನಪಟ್ಟಣದ ಕಡೆ ತಿರುಗಿ ಕೂಡ ನೋಡುತ್ತಿರಲಿಲ್ಲ.
ಚುನಾವಣೆ ಮುಗಿದ ಮೇಲೆ ಚನ್ನಪಟ್ಟಣಕ್ಕೆ ಬರಲ್ಲ, ಟಾಟಾ ಮಾಡ್ಕೊಂಡು ಹೋಗ್ತಿನಿ ಅನ್ನೋದೆ ಇದರ ಅರ್ಥ ಎಂದು ವ್ಯಂಗ್ಯವಾಡಿದರು. ಕಳೆದ ಮೂರು ತಿಂಗಳಲ್ಲಿ 20 ಬಾರಿ ಬಂದಿದ್ದೇನೆ ಅಂತೀರಲ್ಲ. ಏನು ಸಾಧನೆ ಮಾಡಿದ್ದೀರಿ ಪಟ್ಟಿ ಕೊಡಿ. ಮೂರು ತಿಂಗಳಲ್ಲಿ ಇವರ ಕೊಡುಗೆ ಏನು?, ಒಬ್ಬ 300 ಕೋಟಿ ಹೂಡಿಕೆ ಮಾಡಿದ್ದೇವೆ. ಅಂತಾರೆ, ಮತ್ತೊಬ್ಬ500 ಕೋಟಿ ಅಂತಾರೆ. ಎಲ್ಲಿದೆ ಹಣ?. ಇವರ ಕೈಯಲ್ಲಿ ರಸ್ತೆ ಗುಂಡಿ ಮುಚ್ಚಲೇ ಆಗಿಲ್ಲ. ಇನ್ನು ಅಭಿವೃದ್ಧಿ ಎಲ್ಲಿಂದ ಮಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ನೀರು, 600 ಬೈಕ್ ಮುಳುಗಡೆ
ಇನ್ನೊಂದು ವಾರದಲ್ಲಿ ಅಭ್ಯರ್ಥಿ ಹೆಸರು ಘೋಷಣೆ: ನಾನು ನೀವು ಬೆಳೆಸಿದ ನಿಮ್ಮ ಮನೆ ಮಗ. ನೀವು ಬೆಳೆಸಿದ ನಿಮ್ಮ ಮಗನಿಗೆ ಹಾಲಾದರೂ ನೀಡಿ, ವಿಷವಾದರೂ ಕೊಡಿ. ನಾನು ಒಳ್ಳೆಯ ಕೆಲಸ ಮಾಡಿದ್ದರೆ, ಜನಪರ ಯೋಜನೆ ತಂದಿದ್ದರೆ ಬೆಂಬಲ ನೀಡಿ. ಕ್ಷೇತ್ರದಲ್ಲಿ ಅಭ್ಯರ್ಥಿಯನ್ನ ಗೆಲ್ಲಿಸಿ ಕೊಡಿ ಎಂದು ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಹೆಸರು ಘೋಷಣೆ ಮಾಡುವಂತೆ ಪಟ್ಟು ಹಿಡಿದರು. ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸುವಂತೆ ಒತ್ತಾಯಿಸಿದರು. ಈಗಾಗಲೇ ಈ ಬಗ್ಗೆ ಮೀಟಿಂಗ್ ಮಾಡಿದ್ದೀವಿ. ಇನ್ನೊಂದು ವಾರದಲ್ಲಿ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಕಾರ್ಯ ಕರ್ತರನ್ನು ಸಮಾಧಾನಪಡಿಸಿದರು.