Asianet Suvarna News Asianet Suvarna News

Kannada Rajyotsava awrds: ಯಾವುದೇ ಪ್ರಶಸ್ತಿಯ ಹಿಂದೆ ದೊಡ್ಡ ಸಾಧನೆ, ಪ್ರಯತ್ನ ಇರುತ್ತದೆ: ಸಿಎಂ

ಎಲ್ಲರಿಗೂ ಕನ್ನಡದ ನಮಸ್ಕಾರಗಳು. ಕನ್ನಡದ ನಮಸ್ಕಾರಗಳು ಹೃದಯದಿಂದ ಬರುತ್ತವೆ. ನಾವು ಚಿಕ್ಕವರಿದ್ದಾಗ, ನಾವು ತೊದಲು ನುಡಿಯುವ ನಮ್ಮ ತಾಯಿ ಕೊಟ್ಟ ಮುತ್ತಿನ ಪ್ರಶಸ್ತಿಯನ್ನ ನಾವು ಮರೆಯೋಕೆ ಆಗಲ್ಲ  ಶಾಲಾ ಹಂತದಲ್ಲಿ ಶಿಕ್ಷಕರು ಕೊಡುವ ಪ್ರಶಸ್ತಿಯನ್ನು ಮರೆಯೋಕೆ ಆಗಲ್ಲ. ಹೀಗೆ ಬದುಕಿನ ಎಲ್ಲ ಹಂತದಲ್ಲಿಯೂ ಪ್ರಶಸ್ತಿ ಇರುತ್ತದೆ. ಯಾವುದೇ ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನ ಇರುತ್ತದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

The CM wished everyone Kannada Rajyotsava bengaluru rav
Author
First Published Nov 1, 2022, 8:24 PM IST

ಬೆಂಗಳೂರು (ನ.1) : ಇಂದು ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು ತಿಳಿಸಿದರು.  'ಎಲ್ಲರಿಗೂ ಕನ್ನಡದ ನಮಸ್ಕಾರಗಳು. ಕನ್ನಡದ ನಮಸ್ಕಾರಗಳು ಹೃದಯದಿಂದ ಬರುತ್ತವೆ. ನಾವು ಚಿಕ್ಕವರಿದ್ದಾಗ, ನಾವು ತೊದಲು ನುಡಿಯುವ ನಮ್ಮ ತಾಯಿ ಕೊಟ್ಟ ಮುತ್ತಿನ ಪ್ರಶಸ್ತಿಯನ್ನ ನಾವು ಮರೆಯೋಕೆ ಆಗಲ್ಲ  ಶಾಲಾ ಹಂತದಲ್ಲಿ ಶಿಕ್ಷಕರು ಕೊಡುವ ಪ್ರಶಸ್ತಿಯನ್ನು ಮರೆಯೋಕೆ ಆಗಲ್ಲ. ಹೀಗೆ ಬದುಕಿನ ಎಲ್ಲ ಹಂತದಲ್ಲಿಯೂ ಪ್ರಶಸ್ತಿ ಇರುತ್ತದೆ. ಯಾವುದೇ ಪ್ರಶಸ್ತಿ ಹಿಂದೆ ದೊಡ್ಡ ಕಥೆ, ಪ್ರಯತ್ನ ಇರುತ್ತದೆ ಎಂದರು.

Puneeth Rajkumar: ಪುನೀತ್‌ಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ

ಬದುಕಿನಲ್ಲಿ ಎರಡು ವಿಚಾರ ಬಹಳ‌ ಕಷ್ಟ ಮೊದಲನೆಯದು ಮುಗ್ಧತೆ ಕಾಪಾಡಿಕೊಳ್ಳುವುದು, ಎರಡನೇಯದು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದು. ಇವರೆಡನ್ನ ಯಾರು ಮಾಡ್ತಾರೋ ಅವರು ದೊಡ್ಡ ಸಾಧಕರಾಗ್ತಾರೆ ಎಂದರು.

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಕೊಟ್ಟಿರೋದಕ್ಕೆ ಇಡೀ ಕರ್ನಾಟಕ ಸಂಭ್ರಮಿಸ್ತಿದೆ. 60 ವರ್ಷ ಆದವರಿಗೆ ಮಾತ್ರ ಪ್ರಶಸ್ತಿ ಅಂತಾ ಮಾಡಿರೋದು ನಮ್ಮ ಸರ್ಕಾರ ಮಾಡಿರೋ ತಪ್ಪು. ಸಣ್ಣ ವಯಸ್ಸಿನಲ್ಲಿಯೇ ಪ್ರಶಸ್ತಿ ಕೊಟ್ರೆ, ಇನ್ನೂ ಹೆಚ್ಚಿನ ಸಾಧನೆ ಮಾಡೋಕೆ ಆಗುತ್ತೆ. ಮುಂದಿನ ವರ್ಷ ಪ್ರಶಸ್ತಿ ಪಡೆಯಲು ಇರಬೇಕಾದ ವಯಸಿನ ಬಗ್ಗೆ ಬದಲಾವಣೆ ಆಗಲೇಬೇಕು. ವಯಸ್ಸಿನ ಗಡಿಮಿತಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತೆ ಎಂದರು.

ಅಶ್ವಿನಿ ಆಸೀನರಾಗಬೇಕಿದ್ದ ಕುರ್ಚಿ ಸ್ವಚ್ಛಗೊಳಿಸಿದ ಜೂ. ಎನ್‌ಟಿಆರ್

ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನ ಗುರುತಿಸಿ ಅವರ ಅನುಭವ, ಸಂದೇಶವನ್ನ ಸಂಗ್ರಹಿಸುವಂತೆ ಸಚಿವ ಸುನೀಲ್ ಕುಮಾರ್ ತಿಳಿಸಿದರು.  ಪ್ರಶಸ್ತಿ ಪಡೆದವರು ನಾಡು ಕಟ್ಟುವಲ್ಲಿ ಹೇಗೆ ಶ್ರಮಿಸಿದ್ರು ಅನ್ನೋದನ್ನ ತಿಳಿದುಕೊಳ್ಳಬೇಕು ಅವರ ಅನುಭವದಿಂದ ನಾಡು ಕಟ್ಟುವ ಒಂದು ಕೃತಿಯನ್ನ ಬಿಡುಗಡೆ ಮಾಡಬೇಕು. ಆ ಕೃತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಹಂಚಬೇಕು. ನಾಡು ಕಟ್ಟಲು ಭಿನ್ನಾಭಿಪ್ರಾಯ ಇರಬಾರದು. ನಾವೆಲ್ಲ ಒಗ್ಗಟ್ಟಾಗಿ ಇರ್ಬೇಕು. ಜನರನ್ನ ಫಲಾನುಭವಿಯನ್ನಾಗಿಸದೆ, ಪಾಲುದಾರರನ್ನಾಗಿ ಮಾಡ್ಬೇಕು ಎಂದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ 2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಿದರು.

ಸಂಕೀರ್ಣ ಕ್ಷೇತ್ರ : 

  • ಸುಬ್ಬರಾಮ ಶೆಟ್ಡಿ - ಬೆಂಗಳೂರು
  • ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ - ಬೆಂಗಳೂರು
  • ಶ್ರೀಮತಿ ಸೋಲಿಗರ ಮಾದಮ್ಮ - ಚಾಮರಾಜನಗರ

 ಸೈನಿಕ ಕ್ಷೇತ್ರ :

  • ಸು‌ಬೇದಾರ್ ಬಿಕೆ ಕುಮಾರಸ್ವಾಮಿ - ಬೆಂಗಳೂರು

 ಪತ್ರಿಕೋದ್ಯಮ :

  • ಎಚ್ ಆರ್ ಶ್ರೀಶಾ - ಬೆಂಗಳೂರು
  • ಜಿ.ಎಂ.ಶಿರಹಟ್ಟಿ ‌- ಗದಗ
  •  ವಿಜ್ಞಾನ ತಂತ್ರಜ್ಞಾನ 
  • ಕೆ.ಶಿವನ್ - ಬೆಂಗಳೂರು
  • ಡಾ.ಡಿ.ಆರ್.ಬಳೂರಗಿ - ರಾಯಚೂರು

 ಕೃಷಿ‌ ಕ್ಷೇತ್ರ 

  • ಗಣೇಶ್ ತಿಮ್ಮಯ್ಯ - ಕೊಡಗು
  • ಚಂದ್ರಶೇಖರ್ ನಾರಯಣಪುರ - ಚಿಕ್ಕಮಗಳೂರು
  •  ಪೌರಕಾರ್ಮಿಕ 
  • ಮಲ್ಲಮ್ಮ‌ ಹೂವಿನಹಡಗಲಿ - ವಿಜಯನಗರ

 ಪರಿಸರ ಕ್ಷೇತ್ರ 

  • ಸಾಲುಮರದ ನಿಂಗಣ್ಣ -  ರಾಮನಗರ

 ಆಡಳಿತ 

  • ಎಲ್ ಎಚ್ ಮಂಜುನಾಥ್ -ಶಿವಮೊಗ್ಗ
  • ಮದನ್ ಗೋಪಾಲ - ಬೆಂಗಳೂರು

 ಹೊರನಾಡು 

ದೇವಿದಾಸ್ ಶೆಟ್ಟಿ - ಮುಂಬೈ

  • ಅರವಿಂದ್ ಪಾಟೀಲ್ - ಹೊರನಾಡು
  • ಕೃಷ್ಣಮೂರ್ತಿ‌ ಮಾಂಜಾ - ತೆಲಂಗಾಣ

 ಹೊರದೇಶ 

  • ರಾಜ್ ಕುಮಾರ್ - ಗಲ್ಫ್ ರಾಷ್ಟ
  •  ವೈದ್ಯಕೀಯ ಕ್ಷೇತ್ರ 
  • ಎಚ್ ಎಚ್ ಮೋಹನ್ - ಶಿವಮೊಗ್ಗ
  • ಬಸವಂತಪ್ಪ - ದಾವಣಗೆರೆ

 ಚಲನಚಿತ್ರ 

  • ದತ್ತಣ್ಣ - ಚಿತ್ರದುರ್ಗ
  • ಅವಿನಾಶ್ - ಬೆಂಗಳೂರು

 ಕಿರುತೆರೆ 

  • ಸಿಹಿಕಹಿ ಚಂದ್ರು

 ಸಾಹಿತ್ಯ 

  • ಶಂಕರ್ ಚಚಡಿ - ಬೆಳಗಾವಿ
  • ಪ್ರೊಫೆಸರ್ ಕೃಷ್ಣೇಗೌಡ - ಮೈಸೂರು
  • ಅಶೋಕ್ ಬಾಬು ನೀಲಗಾರ್ - ಬೆಳಗಾವಿ
  • ಅ.ರಾ.ಮಿತ್ರ - ಹಾಸನ
  • ರಾಮಕೃಷ್ಣ ಮರಾಠೆ - ಕಲಬುರಗಿ

 ಯಕ್ಷಗಾನ 

  • ಎಂ ಎ ನಾಯಕ್ - ಉಡುಪಿ
  • ಸುಬ್ರಹ್ಮಣ್ಯ ಧಾರೇಶ್ವರ - ಉತ್ತರ ಕನ್ನಡ
  • ಸರಪಾಡಿ ಅಶೋಕ್ ಶೆಟ್ಡಿ - ದಕ್ಷಿಣ ಕನ್ನಡ

 ಕ್ರೀಡೆ 

  • ದತ್ತಾತ್ರೇಯ ಗೋವಿಂದ ಕುಲಕರ್ಣಿ - ಧಾರವಾಡ
  • ರಾಘವೇಂದ್ರ ಅಣ್ಣೇಕರ್ - ಬೆಳಗಾವಿ
Follow Us:
Download App:
  • android
  • ios