ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಉಗ್ರ ಜುಕರ್‌ ಎಂಬಾತ ಜೈಲು ಸಿಬ್ಬಂದಿ, ಸಹ ಕೈದಿಗಳನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.  

ಕಲಬುರಗಿ (ಅ.18): ಬೆಂಗಳೂರಿನ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಉಗ್ರ ಜುಕರ್‌ ಎಂಬಾತಜೈಲು ಸಿಬ್ಬಂದಿ, ಸಹ ಕೈದಿಗಳನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣದಲ್ಲಿನ ಸಜಾ ಕೈದಿ ಸಾಗರ್ ಎಂಬಾತ ಜೈಲ್ ನಿಂದಲೇ ದೂರವಾಣಿ ಕರೆ ಮಾಡಿ ಜೈಲಿನಲ್ಲಿ ಉಗ್ರರ ಉಪಟಳದ ಬಗ್ಗೆ ತಮ್ಮ ಮನೆ ಮಂದಿಜೊತೆ ವಿಸೃತವಾಗಿ ಮಾತನಾಡಿದ್ದಾರೆ. 

ಇದೀಗ ಸಾಗರ್‌ ಮಾತನಾಡಿರುವ ಫೋನ್ ರೆಕಾರ್ಡ್ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ. ಅ.11ರಂದು ಜೈಲಿನಲ್ಲಿರೋ ಸಜಾ ಕೈದಿ ಸಾಗರ್ ಎಂಬಾತ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಿರುವ ಆಡಿಯೋದಲ್ಲಿ ಕಲಬುರಗಿ ಜೈಲಲ್ಲಿರುವ ಜುಕರ್, ಬಚ್ಚನ್ ಜೊತೆಗೂಡಿ ಏನೆಲ್ಲಾ ರಾದ್ಧಾಂತಗಳನ್ನು ಮಾಡುತ್ತ ಇಡೀ ಜೈಲನ್ನೇ ಹೇಗೆ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆಂಬುದರ ಇಂಚಿಂಚೂ ಮಾಹಿತಿ ಹೊರಹಾಕಿದ್ದಾನೆ. 

ತನ್ನ ಜೀವಕ್ಕೆ ಏನಾದರೂ ಕುತ್ತು ಬಂದಲ್ಲಿ ಅದಕ್ಕೆ ಜೈಲಲ್ಲಿರುವ ಉಗ್ರ ಜುಲೀಕರ್ ಹಾಗೂ ಬಚ್ಚನ್ ಇವರಿಬ್ಬರೇ ಕಾರಣ ಎಂದೂ ದೂರವಾಣಿ ಸಂಭಾಷಣೆಯಲ್ಲಿ ಸಾಗ‌ ಆತಂಕ ಹೊರಹಾಕಿದ್ದಾರೆ. ಉಗ್ರ ಜುಲೈಕರ್‌ ಜೈಲಿನಲ್ಲಿ ಆಡಿದ್ದೇ ಆಟವಾಗಿದೆ. ಜೈಲು ಸಿಬ್ಬಂದಿಗೆ ಲಂಚ ಕೊಟ್ಟು ಮೊದಲು ತನ್ನ ಬಳಿ ಅತ್ಯಾಧುನಿಕ ಸ್ಮಾರ್ಟ್‌ಪೋನ್‌ ಇಟ್ಟುಕೊಳ್ಳುತ್ತಾನೆ. ಹಣ ಕೊಡುವಾಗಲೇ ಗೊತ್ತಿಲ್ಲದಂತೆ ಉಪಾಯವಾಗಿ ಜೈಲು ಸಿಬ್ಬಂದಿ ಹಣ ಪಡೆಯುವ ವಿಡಿಯೋ ಮಾಡಿಕೊಂಡು ಅವರಿಗೆ ಹೆದರಿಸಲು ಶುರು ಮಾಡುತ್ತಾನೆ. 

ಚನ್ನಪಟ್ಟಣ ಉಪ ಸಮರ: ಒಬ್ಬರ ಕೈಯಲ್ಲಿ ಹಾರೆ, ಮತ್ತೊಬ್ಬರ ಕೈಯಲ್ಲಿ ಗುದ್ದಲಿ: ತನ್ವೀರ್ ಸೇಠ್ ವ್ಯಂಗ್ಯ

ಅವರು ಇವನ ಸಹವಾಸವೇ ಬೇಡಪ್ಪ ಎಂದು ದೂರಾಗುತ್ತಾರೆ, ಆಗ ಸಹ ಕೈದಿಗಳನ್ನು ತನ್ನ ಸಂಪರ್ಕಕ್ಕೆ ಕರೆಸಿಕೊಳ್ಳುತ್ತಾನೆ. ಮುಂಬೈನ ಬಾರ್ ಗರ್ಲ್‌ಗಳೊಂದಿಗೆ ಇಟ್ಟುಕೊಂಡಿರುವ ಜುಲ್ಪಿಕರ್,ಅವರೊಂದಿಗೆ ವಿಡಿಯೋ ಕಾಲ್ ಮಾಡಿಸಿ ಬೆತ್ತಲಾಗಿಸಿ ವಿಡಿಯೋದಲ್ಲೇ ಹನಿಟ್ರ್ಯಾಪ್ ಮಾಡುತ್ತಾನೆ. ಆ ವಿಡಿಯೋಗಳನ್ನು ರೆಕಾರ್ಡ್‌ ಮಾಡಿ ಹಣಕ್ಕಾಗಿ ಅವರಿಗೆ ಬಲೆ ಹಾಕುತ್ತಾನೆ. ತನ್ನನ್ನು ಇದೇ ರೀತಿ ಹತ್ತಿರಕ್ಕೆ ಸೆಳೆದು ಆಟ ಆಡಿಸುತ್ತಾ ಹಣಕ್ಕಾಗಿ ಸತಾಯಿಸುತ್ತಿದ್ದಾನೆಂದು ಖುದ್ದು ಸಾಗರ್ ಆಡಿರುವ ಮಾತುಗಳು ಬಹಿರಂಗಗೊಂಡಿದೆ.