ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ ಕ್ಲಬ್ ನಲ್ಲಿ ಅಕ್ರಮ; ಹಿರಿಯ ಕಿರುತರೆ ನಟ ರವಿಕಿರಣ್ ವಿರುದ್ಧ ಗಂಭೀರ ಆರೋಪ!
ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಆರೋಪ ಕೇಳಿಬಂದಿರುವ ಹಿನ್ನೆಲೆ ಹಿರಿಯ ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ರಮಕ್ಕೆ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಬೆಂಗಳೂರು (ಫೆ.12): ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಆರೋಪ ಕೇಳಿಬಂದಿರುವ ಹಿನ್ನೆಲೆ ಹಿರಿಯ ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ರಮಕ್ಕೆ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ಕಾರ್ಯದರ್ಶಿ ರವಿಕಿರಣ್ ಹಾಗೂ ಜಂಟಿ ಕಾರ್ಯದರ್ಶಿ ಉಮಾಶಂಕರ್ ರಿಂದ ಅಕ್ರಮವಾಗಿದೆ ಎಂದು ಆರೋಪಿಸಿರುವ ಕಿರುತೆರೆ ಕಲಾವಿದರು. ಕಳೆದ ೨೦ ವರ್ಷದಿಂದ ಕಿರುತೆರೆ ಕಲಾವಿದರಿಗಾಗಿ ಇರುವ ಕ್ಲಬ್ (Television Cultural and Sport Club). ಕ್ಲಬ್‌ನಲ್ಲಿ ಸಾವಿರಾರು ಕಿರುತೆರೆ ಕಲಾವಿದರಿದ್ದಾರೆ. ಆದರೆ ಕ್ಲಬ್ ಆರಂಭದಿಂದಲೇ ಈವರೆಗೂ ರವಿಕಿರಣ್ ಕಾರ್ಯದರ್ಶಿಯಾಗಿದ್ದರು. ಈ ಹಿಂದೆ ಕಿರುತೆರೆ ನಟ ನಟಿಯರಿಗಾಗಿ ಸರ್ಕಾರದಿಂದ ಅನುದಾನ ನೀಡಲಾಗಿತ್ತು. ಸರ್ಕಾರದಿಂದ ಕ್ಲಬ್ ಅಭಿವೃದ್ದಿಗೆ 3 ಕೋಟಿಗೂ ಅಧಿಕ ಹಣ ಹಾಗೂ ಒಂದು ಎಕರೆ ಜಮೀನು ನೀಡಲಾಗಿತ್ತು. ಸರ್ಕಾರ ನೀಡಿದ್ದ ಜಾಗದಲ್ಲಿ ರವಿಕಿರಣ್ ಸ್ವಯಂ ನಿರ್ಣಯದಿಂದ ಕಟ್ಟಡ ಕಟ್ಟಿಸಿದ್ದಾರೆ. ಕ್ಲಬ್ ನಿರ್ಮಾಣವನ್ನು ಯಾವುದೇ ಕಾಂಟ್ರಾಕ್ಟ್ ನೀಡದೆ ಸಹೋದರನಿಗೆ ನೀಡಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿರುವ ಕಿರುತೆರೆ ಕಲಾವಿದರು.
ಮುದ್ದಿನ ತಂಗಿ ಜೊತೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್, ಹಳೆ ಫೋಟೋ ವೈರಲ್!
ಜೊತೆಗೆ ಕ್ಲಬ್ ಗೆ ಸಂಬಂಧಿಸಿದ ಜಿಎಸ್ ಟಿ,ಬಿಬಿಎಂಪಿ ಟ್ಯಾಕ್ಸ್ ಸೇರಿದಂತೆ ಹಲವು ತೆರಿಗೆಗಳ ಪಾವತಿ ಮಾಡಿಲ್ಲ. ಹಣವನ್ನು ಪಾವತಿ ಮಾಡದೇ ಅದರ ಸದಸ್ಯರಿಂದ ಹಣ ವಸೂಲಿ ಮಾಡಿದ್ದಾರೆ. ಈ ಅಕ್ರಮದ ಬಗ್ಗೆ ಚರ್ಚೆ ನಡೆಸಿ ಕ್ಲಬ್‌ಗೆ ಬರದಂತೆ ರವಿಕಿರಣ್ ರನ್ನ ಸಸ್ಪೆಂಡ್ ಮಾಡಲಾಗಿತ್ತು. ಸಸ್ಪೆಂಡ್ ಮಾಡಿದ್ರೂ ಸಹ ಕ್ಲಬ್‌ಗೆ ಬಂದು ಕ್ಲಬ್ ನಲ್ಲಿದ್ದ 6 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಹೋಗಿದ್ದಾರೆ ಇದನ್ನು ಪ್ರಶ್ನೆ ಮಾಡಿದಾಗ ಕಲಾವಿದರು ಹಾಗೂ ರವಿ ಕಿರಣ್ ನಡುವೆ ಗಲಾಟೆಯಾಗಿದೆ. ಹೀಗಾಗಿ ರವಿಕಿರಣ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣೆ ಮೆಟ್ಟಿಲೇರಿದ್ದಾರೆ. ಜೊತೆಗೆ ರವಿಕಿರಣ್ ವಿರುದ್ಧ ಮುಂದೆ ತೀವ್ರವಾದ ಹೋರಾಟ ಮಾಡೊದಾಗಿ ಕಲಾವಿದರ ಎಚ್ಚರಿಕೆ ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ಕ್ಲಬ್ ಸದಸ್ಯರು.