ಮುದ್ದಿನ ತಂಗಿ ಜೊತೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್, ಹಳೆ ಫೋಟೋ ವೈರಲ್!
ಬಿಗ್ ಬಾಸ್ ಕನ್ನಡ ಸೀಸನ್ 10 ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ ತಮ್ಮ ಸಹೋದರಿ ಜೊತೆ ತೆಗೆಸಿಕೊಂಡಿರುವ ಹಳೆಯ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಹಳಷ್ಟು ಕಾಂಟ್ರವರ್ಸಿಗಳ ಮೂಲಕವೇ ಸದ್ದು ಮಾಡಿದ್ದ ಶೊ ಅಂದರೆ ಈ ವರ್ಷದ ಬಿಗ್ ಬಾಸ್ ಸೀಸನ್ 10 (Bigg Boss season 10) . ಈ ಸೀಸನ್ ನಲ್ಲಿ ಮೊದಲ ದಿನದಿಂದಲೇ ಆಟ, ನೇರ ಮಾತಿನ ಮೂಲಕ ಜನಮನ ಗೆದ್ದವರು ಕಾರ್ತಿಕ್ ಮಹೇಶ್.
ಬಿಗ್ ಬಾಸ್ ನ ಮೊದಲ ದಿನದಿಂದ ಕೊನೆಯವರೆಗೂ ಎಲ್ಲಾ ಅಡೆತಡೆಗಳನ್ನು ದಾಟಿ ಬಂದು, ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿ, ಇದೀಗ ವಿನ್ನರ್ ಆಗಿ ಮೆರೆಯುತ್ತಿದ್ದಾರೆ ಕಾರ್ತಿಕ್ (Karthik Mahesh).
ಕಿರುತೆರೆಯಲ್ಲಿ ಹಲವು ಸೀರಿಯಲ್ ಗಳಲ್ಲಿ ನಟಿಸಿ, ಡೊಳ್ಳು ಎನ್ನುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾತ್ಮಕ ಚಿತ್ರದಲ್ಲಿ ನಟಿಸಿದ್ದರು. ಇದೀಗ ಬಿಗ್ ಬಾಸ್ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ ಕಾರ್ತಿಕ್.
ಬಿಗ್ ಬಾಸ್ ನಲ್ಲಿ ಇದ್ದಾಗ ಕಾರ್ತಿಕ್ ಹೆಚ್ಚಾಗಿ ಮನೆಯನ್ನು ನೆನಪಿಸಿಕೊಂಡು, ತಾಯಿ ಮತ್ತು ತಂಗಿಯ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದರು. ಇದೀಗ ಕಾರ್ತಿಕ್ ತಂಗಿಯ ಜೊತೆಗಿನ ಹಳೆಯ ಫೋಟೋ ವೈರಲ್ ಆಗುತ್ತಿದೆ.
ಕಾರ್ತಿಕ್ ಗೆ ತಂಗಿ ತೇಜಸ್ವಿನಿ ಅಂದ್ರೆ ಪ್ರಾಣ ಅನ್ನೋದು ಎಲ್ಲರಿಗೂ ತಿಳಿದಿದೆ, ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಆಕೆಯ ಸೀಮಂತ ನಡೆದಿತ್ತು. ಪ್ರೀತಿಯ ತಂಗಿಯ ಸೀಮಂತ ಕಾರ್ಯದಲ್ಲಿ ಕಾರ್ತಿಕ್ ಭಾಗವಹಿಸದ್ದು ಬೇಸರ ತಂದಿತ್ತು.
ಇದಾದ ಬಳಿಕ ತಂಗಿ ತೇಜಸ್ವಿನಿಗೆ ಮಗು ಆಗಿದ್ದು ಕೂಡ ಕಾರ್ತಿಕ್ ಬಿಗ್ ಬಾಸ್ ನಲ್ಲಿದ್ದಾಗಲೇ, ಮಾವನಾದ ಖುಷಿಯನ್ನು ಬಿಗ್ ಬಾಸ್ ಮನೆಯೊಳಗೆ ಸಂಭ್ರಮಿಸಿದ್ದರು ಕಾರ್ತಿಕ್.
ಕಾರ್ತಿಕ್ ಅವರತಂಗಿ ತೇಜಸ್ವಿನಿಯನ್ನು ಅವರು ಪ್ರೀತಿಯಿಂದ ಪುಟ್ಟಮ್ಮ ಎಂದು ಕರೆಯುತ್ತಿದ್ದರು. ಈ ಹಿಂದೆ ತಂಗಿಯ ಜೊತೆಗಿನ ಹಲವಾರು ಫೋಟೋಗಳನ್ನು ಕಾರ್ತಿಕ್ ಶೇರ್ ಮಾಡಿದ್ದರು. ಇದೀಗ ಹಳೆಯ ಫೋಟೊ ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.