Asianet Suvarna News Asianet Suvarna News

ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದ ಸಂಸದ ತೇಜಸ್ವಿ ಸೂರ್ಯ

ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದ ಸಂಸದ | 2021 ಜನರಿಗೆ ಲಸಿಕೆ ತಲುಪಿಸುವ ಸವಾಲು

Tejasvi Surya visits primary health center overview covid19 vaccine dry run dpl
Author
Bangalore, First Published Jan 2, 2021, 11:59 AM IST

ಬೆಂಗಳೂರು(ಜ.02): 2020 ಕೊರೋನಾದ ಸವಾಲು ಆಗಿತ್ತು. 2021 ಜನರಿಗೆ ಲಸಿಕೆ ತಲುಪಿಸುವುದು ಸವಾಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ವಿದ್ಯಾಪೀಠ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಸಂಸದ ತೇಜಸ್ವಿ ಸೂರ್ಯ, ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಲಸಿಕೆ ತಾಲೀಮಿನ ಬಗ್ಗೆ ಆರೋಗ್ಯಾಧಿಕಾರಿಗಳಿಂದ ತೇಜಸ್ವಿ ಸೂರ್ಯ ಅವರು ವಿವರಣೆ ಪಡೆದಿದ್ದಾರೆ. ಕೋವಿಡ್ ವ್ಯಾಕ್ಸಿನ್ ಗೆ ಅನುಮತಿ ನೀಡಲಾಗಿದೆ. ದೇಶದ ಎಲ್ಲಾ ಕಡೆಗಳಲ್ಲಿ ಹೆಲ್ತ್ ಕೇರ್ ವರ್ಕರ್ಸ್ ಗೆ ವ್ಯಾಕ್ಸಿನ್ ಕೊಡಲು ನಿರ್ಧಾರ ಆಗಿದೆ ಎಂದಿದ್ದಾರೆ.

ಹೇಗೆ ನಡೀತಿದೆ ಕೊರೋನಾ ಲಸಿಕೆ ಡ್ರೈ ರನ್..? ಬಿಬಿಎಂಪಿ ವಿಶೇಷ ಆಯುಕ್ತರು ಹೇಳಿದ್ದಿಷ್ಟು

ಬಹಳ ಸುಲಲಿತವಾಗಿ ವ್ಯಾಕ್ಸಿನ್ ತಲುಪುವ ರೀತಿಯಲ್ಲಿ ಡ್ರೈ ರನ್ ಆಗ್ತಿದೆ ಎಂದು ಹೇಳಿದ್ದಾರೆ. ಇಂದು ಬೆಂಗಳೂರಿನಲ್ಲಿ 1.65 ಲಕ್ಷ ಹೆಲ್ತ್ ಕೇರ್ ವರ್ಕರ್ಸ್ ನೋಂದಣಿ ಮಾಡಿಕೊಂಡಿದ್ದಾರೆ. ಇಂದು ವಿದ್ಯಾಪೀಠದಲ್ಲಿ ಡ್ರೈ ರನ್ ಶುರುವಾಗಿದೆ ಎಂದಿದ್ದಾರೆ.

ಅವ್ರಿಗೆ ವ್ಯಾಕ್ಸಿನೇಟರ್ಸ್‌ಗಳ ಐಡೆಂಟಿಫಿಕೇಷನ್ ಆಗಿದೆ. ಪ್ರೈಮರಿ ಹೆಲ್ತ್ ಸೆಂಟರ್‌ಗಳ ಮೂಲಕ ವ್ಯಾಕ್ಸಿನ್ ತಲುಪಲಿದೆ. ಬಿಬಿಎಂಪಿ ಅಧಿಕಾರಿಗಳು ಯಶಸ್ವಿಯಾಗಿ ಡ್ರೈ ರನ್ ಮಾಡಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios