ಬೆಂಗಳೂರಿಗೆ ಹೊಸ ಹೆಸರು ಕೊಟ್ಟ ಮಹೀಂದ್ರಾ, ನಿಲೇಕಣಿ: 'ವ್ಯಾಲಿ'ಯಿಂದ 'ಹಳ್ಳಿ' ಕಡೆ!
* ಸಿಲಿಕಾನ್ ವ್ಯಾಲಿಯಲ್ಲ, ಬೆಂಗಳೂರಿಗೆ ಸಿಕ್ತು ಹೊಸ ಹೆಸರು
* ಟೆಕ್ ಹಳ್ಳಿ ಹೆಸರಿಗೆ ಮಾರುಹೋದ ಉದ್ಯಮಿಗಳ
* ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಥವಾಗಲ್ಲ ಎಂದಾತನಿಗೂ ಸಿಕ್ತು ಮಾತಿನೇಟು
ಬೆಂಗಳೂರು(ಜೂ.06): ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದೇ ಕರೆಯಲಾಗುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ, ಬೇರೇನು ಹೆಸರು ಕೊಡಬಹುದೆಂಬ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಸದ್ಯ ಈ ಸ್ಪರ್ಧೆಯ ಫಲಿತಾಂಶ ಹೊರ ಬಿದ್ದಿದ್ದು, ಸ್ಪರ್ಧಿಯೊಬ್ಬರು ಸೂಚಿಸಿದ 'ಟೆಕ್ ಹಳ್ಳಿ' ಹೆಸರು ತೀರ್ಪುಗಾರರಾದ ಆನಂದ್ ಮಹೀಂದ್ರಾ ಹಾಗೂ ನಂದನ್ ನಿಲೇಕಣಿಯವರ ಮನ ಗೆದ್ದಿದೆ. ಇನ್ನು ಈ ಹೆಸರು ತಮಗೆ ಇಷ್ಟೊಂದು ಯಾಕೆ ಇಷ್ಟ ಆಯಿತು ಎಂದೂ ಅವರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ 'ಸಹ ತೀರ್ಪುಗಾರರಾಗಿದ್ದ ನಂದನ್ ನಿಲೇಕಣಿ ನಾಲ್ಕು ಸ್ಪರ್ಧಿಗಳ ಹೆಸರನ್ನು ಅಂತಿಮಗೊಳಿಸಿದರು. ಬಳಿಕ ಇದರಲ್ಲಿ ಅತ್ಯುತ್ತಮವಾದ ಹಾಗೂ ಸೂಕ್ತ ಎನಿಸಿದ ಹೆಸರನ್ನು ಆಯ್ಕೆ ಮಾಡಿದೆವು. ಈ ಸ್ಪರ್ಧೆಯ ವಿನ್ನರ್ 'ಟೆಕ್ ಹಳ್ಳಿ' ಎಂದು ಸೂಚಿಸಿದ ಶ್ರೀನಿವಾಸ್ ರೆಡ್ಡಿ ಎಂದು ಬರೆದಿದ್ದಾರೆ.
ಕೊರೋನಾ ಹುಟ್ಟಿನ ಸತ್ಯ ಗೊತ್ತಿಲ್ಲ, ಆದರೆ ನ್ಯೂಕ್ಲೀಯರ್ ದಾಳಿಗಿಂತ ಭೀಕರ; ಆನಂದ್ ಮಹೀಂದ್ರ!
ಇನ್ನು ತಮ್ಮ ಮುಂದಿನ ಟ್ವೀಟ್‌ನಲ್ಲಿ ಈ ಹೆಸರು ಯಾಕೆ ಸೂಕ್ತವಾಗಿದೆ? ಕೈಗಾರಿಕೋದ್ಯಮಗಳು ಬೆಂಗಳೂರಿಗೆ ಟೆಕ್ ಹಳ್ಳಿ ಎಂಬ ಹೆಸರೇ ಪರ್ಫೆಕ್ಟ್ ಎಂದು ಯಾಕೆ ಹೇಳುತ್ತಾರೆ ಎಂಬ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. Tech Halli, ಎಂಬುವುದನ್ನು ಅತ್ಯಂತ ಬುದ್ಧಿವಂತಿಕೆಯಿಂದ TecHalli ಎಂದು ಹೇಳಲಾಗಿದೆ. ಇಲ್ಲಿ ಎರಡು ಬಾರಿ H ಬಳಕೆ ತಪ್ಪಿಸಲಾಗಿದೆ. ಇನ್ನು H ಅಕ್ಷರವನ್ನು ಕ್ಯಾಪಿಟಲ್ ಲೆಟರ್‌ನಲ್ಲಿ ನೀಡಿ ಹಳ್ಳಿ ಎಂಬ ಪದದ ಮೇಲೆ ಮತ್ತಷ್ಟು ಗಮನ ಹರಿಸುವಂತೆ ಮಾಡಲಾಗಿದೆ. ಹೀಗಾಗಿ ನಾವಿನ್ನು ಸಿಲಿಕಾನ್ ವ್ಯಾಲಿಯಿಂದ ಟೆಕ್‌ಹಳ್ಳಿಗೆ ಪ್ರಯಾಣ ಬೆಳೆಸುತ್ತಿದ್ದೇವೆ. ವಿಜೇತರಾಗಿ Pininfarina H2 Speed ಸ್ವೀಕರಿಸಲು ನಿಮ್ಮ ಮಾಹಿತಿ ಕಳುಹಿಸಿಕೊಡಿ ಎಂದೂ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವತ್ತೂ ಆಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಹೀಗೆ ಒಂದಿಲ್ಲೊಂದು ರೀತಿ ಜನರೊಂದಿಗೆ ಬೆರೆಯುತ್ತಿರುತ್ತಾರೆ. ಇನ್ನು ಈ ವಿಜೇತರ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾರವರಿಗೆ ನೆಟ್ಟಿನೊಬ್ಬ ರಿಪ್ಲೈ ನೀಡುತ್ತಾ, ಒಳ್ಳೆದು ವಿಜೇತರಿಗೆ ಅಭಿನಂದನೆಗಳು. ಸಿಲಿಕಾನ್ ವ್ಯಾಲಿ ಎಂಬುವುದು ರೂಪಕ ಎಲ್ಲರಿಗೂ ತಿಳಿದಿರುವಂತಹುದ್ದು, ಅರ್ಥೈಸಿಕೊಳ್ಳಬಹುದು. ಆದರೆ ಬೆಂಗಳೂರನ್ನು ಭಾರತದ ಟೆಕ್ ಹಳ್ಳಿ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅರ್ಥವಾಗಲಾರದು. ಕನ್ನಡ ಬಾರದವರಿಗೆ ಇದು ಅರ್ಥವಾಗಲಾರದು ಎಂದಿದ್ದಾರೆ.
ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ
ಈ ಪ್ರಶ್ನೆಗೆ ಉತ್ತರಿಸಿರುವ ಆನಂದ್ ಮಹೀಂದ್ರಾ ಈಗ ಇದನ್ನು ಅರ್ಥೈಸಿಕೊಳ್ಳುವ ಸರದಿ ಅವರದ್ದು. ವಿಶ್ವದ ಬಹುತೇಕರಿಗೆ ಇಂಗ್ಲೀಷ್ ಭಾಷೆ ಬರುವುದಿಲ್ಲ, ಹೀಗಾಗಿ ಸಿಲಿಕಾನ್ ವ್ಯಾಲಿ ಎಂದರೆ ಏನು ಎಂಬುವುದೂ ತಿಳಿದಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.