ಭಾರತದ ಹವಾಮಾನ ಮುನ್ಸೂಚನೆ ಸಾಮರ್ಥ್ಯವನ್ನು ವೃದ್ಧಿಸುವ ಮಿಷನ್ ಮೌಸಮ್ ಅಡಿಯಲ್ಲಿ ಮಂಗಳೂರಿನಲ್ಲಿ ಹಾಗೂ ಛತ್ತೀಸಗಢದ ರಾಯ್ಪುರದಲ್ಲಿ ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ಉದ್ಘಾಟಿಸಿದ್ದಾರೆ.
ನವದೆಹಲಿ (ನ.28): ಮಂಗಳೂರಿನಲ್ಲಿ ಅಳವಡಿಸಲಾಗಿರುವ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಡಾಪ್ಲರ್ ರಡಾರ್ ಅನ್ನು ಲೋಕಾರ್ಪಣೆ ಮಾಡಲಾಗಿದೆ. ಭಾರತದ ಹವಾಮಾನ ಮುನ್ಸೂಚನೆ ಸಾಮರ್ಥ್ಯವನ್ನು ವೃದ್ಧಿಸುವ ಮಿಷನ್ ಮೌಸಮ್ ಅಡಿಯಲ್ಲಿ ಮಂಗಳೂರಿನಲ್ಲಿ ಹಾಗೂ ಛತ್ತೀಸಗಢದ ರಾಯ್ಪುರದಲ್ಲಿ ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಗುರುವಾರ ಉದ್ಘಾಟಿಸಿದ್ದಾರೆ. ಇದು ರಾಜ್ಯದಲ್ಲಿ ಅಳವಡಿಸಲಾಗಿರುವ ಮೊದಲ ಡಾಪ್ಲರ್ ರಡಾರ್ ಆಗಿದೆ. ಮಂಗಳೂರಿನ ಶಕ್ತಿನಗರದಲ್ಲಿರುವ ಭಾರತೀಯ ಭಾರತ ಹವಾಮಾನ ಇಲಾಖೆಯ ಕಚೇರಿಯಲ್ಲಿ ಈ ರಡಾರ್‌ಅನ್ನು ಅಳವಡಿಸಲಾಗಿದೆ.
ಉಪಯೋಗವೇನು?: ಡಾಪ್ಲರ್ ಎಫೆಕ್ಟ್(ಬೆಳಕು ಅಥವಾ ಶಬ್ದದಂತಹ ತರಂಗದದಲ್ಲಿನ ಬದಲಾವಣೆ) ಬಳಸಿಕೊಂಡು ಈ ರಾಡಾರ್, ಮಳೆಯನ್ನು ಪತ್ತೆಹಚ್ಚುವುದು, ಗಾಳಿಯ ವೇಗ ಮತ್ತು ದಿಕ್ಕಿನ ಆಧಾರದಲ್ಲಿ ಅದರ ಚಲನೆಯನ್ನು ಅಳೆಯುವುದು ಸೇರಿದಂತೆ ಹವಾಮಾನ ಮುನ್ಸೂಚನೆಗೆ ಅಗತ್ಯವಾದ ಕೆಲಸಗಳನ್ನು ಮಾಡುತ್ತದೆ. ತರಂಗಗಳನ್ನು ಅಡ್ಡ ಮತ್ತು ಲಂಬ ದಿಕ್ಕಿನಲ್ಲಿ ರವಾನಿಸುವ ಈ ಸಿ-ಬ್ಯಾಂಡ್ ರಡಾರ್ 250 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಕರ್ನಾಟಕ, ಕೇರಳ, ಗೋವಾ, ದಕ್ಷಿಣ ಕೊಂಕಣ, ಉತ್ತರ ಲಕ್ಷದ್ವೀಪ ಮತ್ತು ದಕ್ಷಿಣ ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆ, ಮಿಂಚು, ಆಲಿಕಲ್ಲು ಮಳೆ, ಬಿರುಗಾಳಿ, ಪ್ರಕ್ಷುಬ್ಧತೆ ಮತ್ತು ಇತರ ತೀವ್ರ ಹವಾಮಾನದ ಮುನ್ಸೂಚನೆ ನೀಡಲಿದೆ. ಆಲಿಕಲ್ಲು ಮಳೆಯನ್ನೂ ಇದು ಪತ್ತೆ ಮಾಡಬಲ್ಲದು.
ಮೆಕ್ಕೆಜೋಳ ದರ ನಿಗದಿ ಸಮಸ್ಯೆ ಕುರಿತು ಇಂದು ಸಿಎಂ ಸಭೆ
ಮೆಕ್ಕೆಜೋಳ ಬೆಲೆ ನಿಗದಿ ಸಂಬಂಧ ರೈತರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಎಥನಾಲ್ ಮತ್ತು ಮೊಲಾಸೆಸ್ ಉತ್ಪಾದಕರ ಸಭೆ ಕರೆದಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಮೊಲಾಸೆಸ್ ಮತ್ತು ಎಥನಾಲ್ ಉತ್ಪಾದನೆಗೆ ಪರವಾನಗಿ ಪಡೆದಿರುವ ಕಾರ್ಖಾನೆಗಳು, ತಮ್ಮಲ್ಲಿನ ಉತ್ಪಾದನಾ ಪ್ರಮಾಣಕ್ಕೆ ಹೋಲಿಸಿದರೆ ಶೇ.20ರಷ್ಟು ಮೆಕ್ಕೆಜೋಳ ಖರೀದಿ ಕಡಿಮೆ ಮಾಡಿದ್ದಾರೆ. ಇದನ್ನು ಸಚಿವ ಸಂಪುಟ ಸಭೆ ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ, ಮೆಕ್ಕೆಜೋಳ ಬೆಳೆದಿರುವ ರೈತರ ಹಿತ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.


