ತಮಿಳುನಾಡು ರೋಡ್ ಸೂಪರ್ ಆದ್ರೆ ಕರ್ನಾಟಕ ರಸ್ತೆಯಲ್ಲಿ ಗುಂಡಿಯದ್ದೆ ದರ್ಬಾರ್, ಅಣಕಿಸ್ತಾರಂತೆ ತಮಿಳಿಗರು!
ಅದು ಕರ್ನಾಟಕ ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ರಸ್ತೆ. ಆದ್ರೆ ಇಲ್ಲಿ ಕರ್ನಾಟಕ ಭಾಗದ ರಸ್ತೆ ದುಸ್ಥಿತಿ ನೋಡಿ ಪಕ್ಕದ ರಾಜ್ಯದವರು ಆಡಿಕೊಳ್ಳುವಂತಾಗಿದೆ. ಗುಂಡಿಗಳೇ ತುಂಬಿರುವ ಇಲ್ಲಿ ರಸ್ತೆಯನ್ನು ದುರ್ಬೀನು ಹಾಕಿ ಹುಡಕಬೇಕಿದೆ.
ವರದಿ: ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಫೆ.24): ಅದು ಕರ್ನಾಟಕ ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ರಸ್ತೆ. ಆದ್ರೆ ಇಲ್ಲಿ ಕರ್ನಾಟಕ ಭಾಗದ ರಸ್ತೆ ದುಸ್ಥಿತಿ ನೋಡಿ ಪಕ್ಕದ ರಾಜ್ಯದವರು ಆಡಿಕೊಳ್ಳುವಂತಾಗಿದೆ. ಗುಂಡಿಗಳೇ ತುಂಬಿರುವ ಈ ರಸ್ತೆಯಲ್ಲಿ ರಸ್ತೆಯನ್ನು ದುರ್ಬೀನು ಹಾಕಿ ಹುಡಕಬೇಕಿದೆ. ಅಷ್ಟರ ಮಟ್ಟಿಗೆ ಕರ್ನಾಟಕ ಭಾಗದ ರಸ್ತೆ ಹದಗೆಟ್ಟು ಹೋಗಿದೆ. ಇದರಿಂದಾಗಿ ಗಡಿಯಲ್ಲಿ ರಾಜ್ಯ ಮಾನ ಹರಾಜಾಗ್ತಿದೆ. ಇದು ಕರ್ನಾಟಕದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಗಡಿಭಾಗದಲ್ಲಿ ನಿಂತು ನೋಡಿದರೆ. ಒಂದು ಕಡೆ ತಮಿಳುನಾಡಿನ ಚಂದದ ರಸ್ತೆ, ಇನ್ನೊಂದು ಕಡೆ ಕರ್ನಾಟಕದ ಹದಗೆಟ್ಟ ರಸ್ತೆ. ಚಾಮರಾಜನಗರ ಜಿಲ್ಲೆ ಚಿಕ್ಕಹೊಳೆ ಚೆಕ್ ಪೋಸ್ಟ್ ನಿಂದ ತಮಿಳುನಾಡಿನ ತಾಳವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಕರ್ನಾಟಕ ಭಾಗದಲ್ಲಿ ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗದಷ್ಟು ಹದಗೆಟ್ಟು ಹೋಗಿದೆ.ಈ ರಸ್ತೆ ಅಭಿವೃದ್ಧಿ ಮಾಡಿ ಹಲವು ವರ್ಷ ಕಳೆದಿದೆ. ಮಕ್ಕಳು ಶಾಲೆಗೆ ಹೋಗಲೂ, ಆರೋಗ್ಯ ಹದಗೆಟ್ರೆ ಈ ದುಸ್ತರ ರಸ್ತೆಯಲ್ಲಿ ಸಂಚರಿಸಬೇಕಿದೆ.
ಪ್ರತಿದಿನ ನೂರಾರು ವಾಹನಗಳು ಕರ್ನಾಟಕದಿಂದ ತಮಿಳುನಾಡಿನ ತಾಳವಾಡಿಗೆ ಸಂಚರಿಸುತ್ತವೆ ಹಾಗೆ ಅಲ್ಲಿಂದ ಕೂಡ ಬರುತ್ತವೆ ತಾಳವಾಡಿಯಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆ ಇಲ್ಲದಿರುವುದರಿಂದ ಯಾರಿಗಾದ್ರು ಆರೋಗ್ಯದಲ್ಲಿ ವ್ಯತ್ಯಾಸವಾದರೆ ಅವರು ಈ ರಸ್ತೆಯಲ್ಲೆ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ಬರಬೇಕಾಗಿದೆ. ಈಗಾಗ್ಲೇ ಅನೇಕ ಅಪಘಾತಗಳು ಸಂಭವಿಸಿವೆ. ಈ ಹದಗೆಟ್ಟ ರಸ್ತೆಯಿಂದಾಗಿ ಖಾಸಗಿ ಬಸ್ ಗಳು ಸಂಚಾರವನ್ನೆ ಬದಲಿಸಿಬಿಟ್ಟಿದೆ. ಸರ್ಕಾರಿ ಬಸ್ ನಲ್ಲೂ ಸಂಚಾರ ಮಾಡಬೇಕಾದ್ರೆ ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕಿದೆ.
Uttara Kannada: ಶಾಲೆಯಲ್ಲಿ ಕುಡಿಯುವ ನೀರು ಒದಗಿಸಲು ರಾಜ್ಯ ಹೆದ್ದಾರಿ ತಡೆದು
ಇನ್ನೂ ಹೇಳಿ ಕೇಳಿ ತಮಿಳುನಾಡಿನ ತಾಳವಾಡಿ ಸುತ್ತಮುತ್ತ 48 ಹಳ್ಳಿಗಳಲ್ಲಿ ಬಹುತೇಕ ಕನ್ನಡಿಗರೇ ವಾಸಿಸುತ್ತಿದ್ದು ಬಹುತೇಕ ಜನರು ತಮ್ಮ ವ್ಯಾಪಾರ, ವ್ಯವಹಾರ, ಉದ್ಯೋಗ, ವೈವಾಹಿಕ ಸಂಬಂಧ ಎಲ್ಲದ್ದಕ್ಕು ಚಾಮರಾಜನಗರ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಅಲ್ಲಿನ ಜನ ಇದೇ ರಸ್ತೆ ಮೂಲಕವೇ ಬರಬೇಕು. ಇಲ್ಲಿಯವರೂ ಇದೇ ರಸ್ತೆಯಲ್ಲಿ ಹೋಗಬೇಕು. ಆದರೆ ತಮಿಳು ನಾಡಿನ ಉತ್ತಮ ರಸ್ತೆ ಮೂಲಕ ಬಂದು ಕರ್ನಾಟಕ ಪ್ರವೇಶ ಮಾಡ್ತಾ ಇದ್ದಂತೆ ಜನರಿಗೆ ಕೆಟ್ಟ ಅನುಭವವಾಗ್ತಾ ಇದ್ದು ಕರ್ನಾಟಕ ಸರ್ಕಾರವನ್ನು ಶಪಿಸತೊಡಗಿದ್ದಾರೆ.
Chikkamagaluru: ಅಸ್ಸಾಂ ಕಾರ್ಮಿಕರಿಂದ ಸ್ಥಳೀಯ ಕಾರ್ಮಿಕರ ಮೇಲೆ ಹಲ್ಲೆ
ಒಟ್ಟಾರೆ ಗಡಿ ಭಾಗದಲ್ಲಿ ಈ ಎರಡೂ ರಸ್ತೆಗಳನ್ನು ಹೋಲಿಕೆ ಮಾಡಿ ಪಕ್ಕದ ರಾಜ್ಯದವರು ಆಡಿಕೊಳ್ಳುವಂತಾಗಿದೆ. ಎರಡೂ ರಾಜ್ಯದ ಜನರು ಕರ್ನಾಟಕ ಸರ್ಕಾರವನ್ನು ಶಪಿಸುತ್ತಾ ಬೇರೆ ದಾರಿ ಇಲ್ಲದೆ ಹದಗಟ್ಟ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಗಡಿಯಲ್ಲಿ ರಾಜ್ಯದ ಮಾನ ಮರ್ಯಾದೆ ಹೋಗ್ತಾ ಇದ್ರು ಜನಪ್ರತಿನಿಧಿಗಳು ಆಧಿಕಾರಿಗಳು ಯಾರ ಮಾನ ಹೋದ್ರೇನು? ಯಾರ ಮರ್ಯಾದೆ ಹೋದ್ರೇನು? ತಮಗು ಇದಕ್ಕು ಸಂಬಂಧವೇ ಇಲ್ಲ ಎಂಬಂತಿದ್ದಾರೆ.