ದುಪ್ಪಟ್ಟು ನೀರು ಹರಿಸಿದರೂ ಮತ್ತೆ ನೀರಿಗಾಗಿ ತಮಿಳುನಾಡು ಬೇಡಿಕೆ
ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರನ್ನಷ್ಟೇ ಹರಿಸಲಾಗಿದೆ. ಈ ಬಾರಿಯೂ ಕರ್ನಾಟಕ ರಾಜ್ಯ ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರು ಹರಿಸಿದೆ. ಆದ್ದರಿಂದ ಮುಂಬರುವ ತಿಂಗಳುಗಳಲ್ಲೂ ಕಾವೇರಿ ನ್ಯಾಯಾಧಿಕರಣದ ಅಂತಿಮ ನಿರ್ಧಾರ ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನಂತೆ ನಿಗದಿತ ಪ್ರಮಾಣದ ನೀರು ಹರಿಸಲು ಸೂಚಿಸುವಂತೆ ಸಮಿತಿ ಮುಂದೆ ಕೋರಿದ ತಮಿಳುನಾಡು ಅಧಿಕಾರಿಗಳು
ನವದೆಹಲಿ(ಸೆ.13): ಸೆ.11ರ ವರೆಗೆ ನಿಗದಿಪಡಿಸಿದ್ದಕ್ಕಿಂತ 92 ಟಿಸಿಎಂ ಹೆಚ್ಚುವರಿ ನೀರು ಹರಿಸಲಾಗಿದ್ದರೂ ಮುಂದಿನ ತಿಂಗಳೂ ಮತ್ತೆ ನೀರು ಹರಿಸುವಂತೆ ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ)ಯನ್ನು ಆಗ್ರಹಿಸಿತು.
ಸಿಡಬ್ಲ್ಯುಆರ್‌ಸಿ ಸಭೆ ಗುರುವಾರ ನಡೆದಿದ್ದು, ಈ ವೇಳೆ ಕರ್ನಾಟಕವು ಸೆ.11ರವರೆಗೆ ನಿಗದಿಪಡಿಸಲಾದ ನೀರಿನ ಹರಿವಾದ 99.86 ಟಿಎಂಸಿಗೆ ಬದಲಾಗಿ ತಮಿಳುನಾಡಿಗೆ 192.371 ಟಿಎಂಸಿ ನೀರು ಹರಿದು ಹೋಗಿದೆ. ಈ ಹೆಚ್ಚುವರಿ ನೀರನ್ನು ಮುಂಬರುವ ತಿಂಗಳಲ್ಲಿ ಕರ್ನಾಟಕವು ಹರಿಸಬೇಕಾದ ನೀರಿನ ಪ್ರಮಾಣಕ್ಕೆ ಜಮೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿತು.
ತಮಿಳುನಾಡಲ್ಲಿ ಕರ್ನಾಟಕ ಐಪಿಎಸ್ ಆತ್ಮಾಹುತಿ ಯತ್ನ: ಹೈಡ್ರಾಮಾ ಬಳಿಕ ಅರುಣ್ ರಂಗರಾಜನ್ ಬಂಧನ
ಈ ಮಧ್ಯೆ ತಮಿಳುನಾಡು ಅಧಿಕಾರಿಗಳು, ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ ನೀರನ್ನಷ್ಟೇ ಹರಿಸಲಾಗಿದೆ. ಈ ಬಾರಿಯೂ ಕರ್ನಾಟಕ ರಾಜ್ಯ ತನ್ನ ಜಲಾಶಯಗಳು ತುಂಬಿದ ನಂತರವಷ್ಟೇ ನೀರು ಹರಿಸಿದೆ. ಆದ್ದರಿಂದ ಮುಂಬರುವ ತಿಂಗಳುಗಳಲ್ಲೂ ಕಾವೇರಿ ನ್ಯಾಯಾಧಿಕರಣದ ಅಂತಿಮ ನಿರ್ಧಾರ ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನಂತೆ ನಿಗದಿತ ಪ್ರಮಾಣದ ನೀರು ಹರಿಸಲು ಸೂಚಿಸುವಂತೆ ಸಮಿತಿ ಮುಂದೆ ಕೋರಿದರು.
ಆಗ ಸಿಡಬ್ಲ್ಯುಆರ್‌ಸಿ, ಎರಡೂ ರಾಜ್ಯಗಳು ನೀರನ್ನು ವಿವೇಚನೆಯಿಂದ ಬಳಸಿ, ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಬೇಕು ಎಂದು ಸಲಹೆ ನೀಡಿ ಸಭೆಯನ್ನು ಮುಕ್ತಾಯಗೊಳಿಸಿತು.