ಬೆಂಗಳೂರು(ಫೆ.15): ಒತ್ತರಿಸಿ ಬರುವ ದು:ಖವನ್ನು ತಡೆಯಬೇಕಿದೆ. ಕಣ್ಣೀರು ಸುರಿಸಲು ಇದು ಸಮಯವಲ್ಲ. ಕಣಿವೆಯ ಆ ರಸ್ತೆಯ ಮೇಲೆ ಬಿದ್ದಿರುವ ಹುತಾತ್ಮ ಯೋಧರ ನೆತ್ತರು ಆರುವುದರೊಳಗಾಗಿ ಪಾಪಿ ಉಗ್ರರನ್ನು 'ಜಹನ್ನುಮ್'(ನರಕಕ್ಕೆ) ಕಳುಹಿಸಬೇಕಿದೆ. ಇದಕ್ಕಾಗಿ ಇಡೀ ದೇಶ ಒಂದಾಗಬೇಕಿದೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಲ್ಲಿ CRPFಯೋಧರ ಮೇಲೆ ನಿನ್ನೆ ನಡೆದ ಆತ್ಮಾಹುತಿ ದಾಳಿ, ಇಡೀ ದೇಶದಲ್ಲಿ ಆಕ್ರೋಶದ ಅಲೆಯೊಂದನ್ನು ಸೃಷ್ಟಿಸಿದೆ. ಹೇಡಿಗಳಂತೆ ಕದ್ದು ಮುಚ್ಚಿ ದಾಳಿ ಮಾಡುವ ಪಾಪಿ ಉಗ್ರರಿಗೆ ತಕ್ಕ ಪಾಠ ಕಲಿಸುವ ದೃಢ ಸಂಕಲ್ಪ ತೋರಬೇಕಿದೆ. ಅದರಂತೆ ನಿನ್ನೆಯ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ CRPF ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿಮ್ಮ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಮುಂದಾಗಿದೆ.

"

ಇಂದು ಸಂಜೆ 5 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವಂತೆ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ರಾಜ್ಯದ ಜನರಲ್ಲಿ ಮನವಿ ಮಾಡುತ್ತದೆ. ಜಿಲ್ಲಾವಾರು ಶ್ರದ್ಧಾಂಜಲಿ ಸಭೆಯ ಸ್ಥಳದ ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.

 

ಹುಬ್ಬಳ್ಳಿ - ಚನ್ನಮ್ಮ ವೃತ್ತ

ಚಿಕ್ಕಮಗಳರು - ಆಜಾದ್ ಪಾರ್ಕ್

ಉಡುಪಿ - ಹುತಾತ್ಮ ಸ್ಮಾರಕ

ಹಾವೇರಿ - ಹುಕ್ಕೇರಿ ಮಠ

ಮೈಸೂರು - ಕೋಟೆ ಆಂಜನೇಯ ದೇವಸ್ಥಾನ

ಉತ್ತರಕನ್ನಡ ಕುಮಟಾ - ಕಿತ್ತೂರು ಚನ್ನಮ್ಮ ಪಾರ್ಕ್

ತುಮಕೂರು - ಟೌನಹಾಲ್ ವೃತ್ತ

ಮಂಗಳೂರು - ಕದ್ರಿ ಸೈನಿಕ ಸ್ಮಾರಕ

ಚಾಮರಾಜನಗರ - ಚಾಮರಾಜೇಶ್ವರ ದೇವಸ್ಥಾನ ಆವರಣ

ಬೆಳಗಾವಿ - ಚನ್ನಮ್ಮ ಸರ್ಕಲ್

ಧಾರವಾಡ - ಕಾರ್ಗಿಲ್ ಸ್ತೂಪ, ಡಿಸಿ ಕಚೇರಿ

ಬಳ್ಳಾರಿ - ರಾಯಲ್ ವೃತ್ತ

ಚಿಕ್ಕಬಳ್ಳಾಪುರ - ನಂದಿರಂಗ ಮಂದಿರ ಆವರಣ

ಹಾಸನ - ಹೇಮಾವತಿ ಪ್ರತಿಮೆ

ಚಿತ್ರದುರ್ಗ - ರೋಟರಿ ಕ್ಲಬ್

ಕಲಬುರಗಿ - ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್

ವಿಜಯಪುರ - ಅಂಬೇಡ್ಕರ್ ಮೈದಾನ

ಗದಗ - ಗಾಂಧಿ ವೃತ್ತ

ಮಡಿಕೇರಿ - ಯುದ್ಧ ಸ್ಮಾರಕ

ಕೊಪ್ಪಳ - ವರ್ಣೇಕರ್ ಕಾಂಪ್ಲೆಕ್ಸ್ ಆವರಣ

ಬಾಗಲಕೋಟೆ - ವಲ್ಲಭಾಯ್ ವೃತ್ತ

ಕೋಲಾರ - ಗಾಂಧಿಚೌಕ

ದಾವಣಗೆರೆ - ಜಯದೇವ ಸರ್ಕಲ್

ಆನೆಕಲ್ - ಚೌಡರೆಡ್ಡಿ ಸರ್ಕಲ್

ರಾಮನಗರ - ವಿವೇಕಾನಂದ ಸರ್ಕಲ್

ಶಿವಮೊಗ್ಗ - ಗೋಪಿ ಸರ್ಕಲ್

ಮಂಡ್ಯ - ಸಂಜಯ ಸರ್ಕಲ್​​

ರಾಯಚೂರು - ಪತ್ರಿಕಾ ಭವನ

ಯಾದಗಿರಿ - ಲುಂಬಿನಿ ವನ

ಚಿಕ್ಕೋಡಿ - ಆರ್​​​.ಡಿ ಕಾಲೇಜ್

ಬೀದರ್-ಅಂಬೇಡ್ಕರ್ ವೃತ್ತ

 

ಬನ್ನಿ ನಮಗಾಗಿ ಪ್ರಾಣತೆತ್ತ ಆ ವೀರರನ್ನು ಸ್ಮರಿಸೋಣ. ಹುತಾತ್ಮ ಯೋಧರ ಕುಟುಂಬದೊಂದಿಗೆ ಬಲವಾಗಿ ನಿಲ್ಲೋಣ. ಜೈ ಹಿಂದ್, ವಂದೇ ಮಾತರಂ!