Asianet Suvarna News Asianet Suvarna News

ಬೆಂಗಳೂರಲ್ಲಿ ಎನ್‌ಐಎ ದಾಳಿ ಶಂಕಿತ ಐಸಿಸ್ ಉಗ್ರ ವಶಕ್ಕೆ ; ವಾಟ್ಸಪ್, ಟೆಲಿಗ್ರಾಂ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಕ್ಕೆ ಸಂಚು!

ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆಯಿಂದ ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು 44 ಸ್ಥಳಗಳ ಪೈಕಿ, ಕರ್ನಾಟಕದ 1 ಸ್ಥಳ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.

Suspected terrorist Ali Abbas arrested by NIA officials in Bengaluru rav
Author
First Published Dec 9, 2023, 11:29 AM IST

ಬೆಂಗಳೂರು (ಡಿ.9): ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಇಂದು ಬೆಳಗ್ಗೆಯಿಂದ ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು 44 ಸ್ಥಳಗಳ ಪೈಕಿ, ಕರ್ನಾಟಕದ 1 ಸ್ಥಳ, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಉಗ್ರ!

ಟ್ಯಾನರಿ ರಸ್ತೆಯ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಶಂಕಿತ ಉಗ್ರನ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈ ಮೂಲದವನಾಗಿರುವ ಅಲಿ ಅಬ್ಬಾಸ್. ನಗರದಲ್ಲಿ ಉರ್ದು ಶಾಲೆ ನಡೆಸುವ ಮೂಲಕ ಮಕ್ಕಳಲ್ಲಿ ಐಸಿಸ್ ಉಗ್ರರ ಚಿಂತನೆ ಬಿತ್ತುತ್ತಿದ್ದ ಅಬ್ಬಾಸ್. ಆಸ್ಪತ್ರೆ ಕೆಲಸ ನೋಡಿಕೊಳ್ಳುತ್ತಿದ್ದ ಅಲಿ ಅಬ್ಬಾಸ್ ಪತ್ನಿ. ಎನ್‌ಐಎ ಅಧಿಕಾರಿಗಳು ದಾಳಿ ಲಕ್ಷಾಂತರ ರೂಪಾಯಿ ನಗದ ಹಣ ಪತ್ತೆಯಾಗಿದೆ. ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿರುವ ಎನ್‌ಐಎ ಅಧಿಕಾರಿಗಳು.

ನಾಲ್ಕು ವರ್ಷದ ಹಿಂದೆ ಬೆಂಗಳೂರಿಗೆ ಬಂದ ಶಂಕಿತ ಉಗ್ರ!

ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಮುಂಬೈ ಮೂಲದ ಅಲಿ ಅಬ್ಬಾಸ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿಗೆ ಬರುವ ಮೊದಲು ಪುಣೆಯಲ್ಲಿ ನೆಲೆಸಿದ್ದ ಶಂಕಿತ ಉಗ್ರ ಅನಂತರ ಪುಣೆಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ. ಬೆಂಗಳೂರಿನಲ್ಲಿದ್ದುಕೊಂಡು ದೇಶದ ನಾನಾ ಭಾಗಗಳಿಗೆ ಸಂಚರಿಸುತ್ತಿದ್ದ ಅಲಿ ಅಬ್ಬಾಸ್.

ಅಲಿ ಅಬ್ಬಾಸ್ ಹಾಗೂ ಅಲಿ ಪತ್ನಿ ಮೂವರು ಮಕ್ಕಳು ಹೊಂದಿದ್ದಾರೆ. ಒಂದು ವರ್ಷದ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊವಿಡ್ ಸಂದರ್ಭದಲ್ಲಿ ಕೆಲಸ ಬಿಟ್ಟಿದ್ದ ಅಲಿ ಅಬ್ಬಾಸ್. ಪತ್ನಿ ನ್ಯೂಟ್ರಿಕೇರ್ ಆಸ್ಪತ್ರೆ ನಡೆಸುತ್ತಿದ್ದಾಳೆ. ಇತ್ತ ಕೆಲಸ ಬಿಟ್ಟು ಸ್ಥಳೀಯವಾಗಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಇತರರನ್ನು ಆಡ್ ಮಾಡಿದ್ದಾನೆ. ಗ್ರುಪ್‌ನಲ್ಲಿ ತನ್ನ ವಿಚಾರ ಒಪ್ಪುವ, ತನ್ನ ಪರವಾಗಿ ಮಾತನಾಡುವವರನ್ನು ಬೇರೊಂದು ಗ್ರುಪ್‌ಗೆ ಆಡ್ ಮಾಡುತ್ತಿದ್ದ ಶಂಕಿತ ಉಗ್ರ. ಹೀಗೆ ಸ್ಥಳೀಯವಾಗಿ ವಾಟ್ಸಪ್ ಟೆಲಿಗ್ರಾಂ ಹಲವು ಗ್ರುಪ್ ಗಳನ್ನು ಮಾಡಿರುವ ಶಂಕಿತ ಉಗ್ರ.

 ಪಾರ್ಟ್‌ ಟೈಂ ಜಾಬ್ ಹೆಸರಿನಲ್ಲಿ ಮಹಿಳೆಗೆ 1.47 ಲಕ್ಷ ರೂ. ಉಂಡೇನಾಮ !

ತನ್ನ ವಿಚಾರ ಒಪ್ಪುವವರಿಗೆಲ್ಲ ಬೇರೊಂದು ಗ್ರುಪ್ ಮಾಡಿ ಅದರಲ್ಲಿ ಪ್ರಚೋದನೆ ನೀಡುವ ಹೇಳಿಕೆ ಕಳುಹಿಸುತ್ತಿದ್ದ. ಸ್ಥಳೀಯವಾಗಿ ತೀರಾ ಹತ್ತಿರದವರಿಗೆ ವಾಟ್ಸಪ್ ಯೂಸ್ ಮಾಡದಂತೆ ಹೇಳುತ್ತಿದ್ದ ಅಲಿ. ಟೆಲಿಗ್ರಾಂ ಬಳಸುವಂತೆ ವಾಟ್ಸಪ್‌ಗಿಂತ ಸುರಕ್ಷಿತ ಎಂದು ಸೂಚನೆ ನೀಡುತ್ತಿದ್ದ ಅಲಿ ಸದ್ಯ ಅಲಿ ಮನೆಯಲ್ಲಿ ತಲಾಶ್ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳು ಇನ್ನಷ್ಟು ಮಾಹಿತಿ ಹೊರಬರಲಿದೆ.

Follow Us:
Download App:
  • android
  • ios