ಧಾರವಾಡ, [ಡಿ.23]: ಪ್ರಾಥಮಿ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೋಗುತ್ತಿದ್ದ ದಾರಿ ಮಧ್ಯೆ ಕಣ್ಣಿಗೆ ಬಿದ್ದ ಅನ್ನದಾತನಿಗೆ ಜಮೀನಿನಲ್ಲೇ ಸನ್ಮಾನಿಸಿ ರೈತ ದಿನಾಚರಣೆ ಆಚರಿಸಿದ್ದಾರೆ.

ಧಾರವಾಡಕ್ಕೆ ಹೋಗುವ ಮಾರ್ಗ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್  ಅವರು ಅನ್ನದಾತರೊಬ್ಬರನ್ನ ಭೇಟಿ ಮಾಡಿ ರೈತ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಮಕ್ಕಳಿಗೆ ಊಟ ಬಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಸುರೇಶ್ ಕುಮಾರ್ ಅವರು ಕೆಲಸ  ನಿಮಿತ್ತ ಇಂದು [ಸೋಮವಾರ] ಧಾರವಾಡಕ್ಕೆ ತೆರಳುತ್ತಿದ್ದರು. ಹೋಗುವ ಮಾರ್ಗ ಮಧ್ಯೆ ನೆಲೋಗಲ್ ಗ್ರಾಮದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅವರ ಬಳಿ ಹೋಗಿ ಸನ್ಮಾನಿಸಿ ರೈತ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ನೆಲೋಗಲ್ ಗ್ರಾಮದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಚನ್ನಬಸವಣಗೌಡ ಹೊಂಬರಡಿಗೆ ನಮಸ್ಕರಿಸಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

 "ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಈ 'ಅನ್ನದಾತ' ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಅವರಿಗೆ 'ರೈತರ ದಿನ' ದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ" ಎಂದು ಬರೆದುಕೊಂಡಿದ್ದಾರೆ. ಸಚಿವ ಸುರೇಶ್ ಕುಮಾರ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.