ಶಿರಸಿ [ಡಿ.11]:  ಶಿಕ್ಷಣದತ್ತ ಮಕ್ಕಳನ್ನು ಸೆಳೆಯುವ ಮಧ್ಯಾಹ್ನದ ಬಿಸಿಯೂಟವನ್ನು ಪುಟಾಣಿಗಳಿಗೆ ಬಡಿಸುವ ಮೂಲಕ ಶಿಕ್ಷಣ ಸಚಿವ ಸುರೇಶಕುಮಾರ ಗಮನ ಸೆಳೆದಿದ್ದಾರೆ! 

ತಾಲೂಕಿನ ನೆಗ್ಗು ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ ಭೇಟಿ ನೀಡಿದ ವೇಳೆ ಮಕ್ಕಳಿಗೆ ಊಟ ಬಡಿಸಿ ಅಧಿಕಾರಿಗಳ ಹಾಗೂ ಮಕ್ಕಳ ಗಮನ ಸೆಳೆದರು. ಗೋಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಸ್ಥಳೀಯ ಶಾಲೆಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ಸಾಂಬಾರ ಬಡಿಸಿ, ನಿತ್ಯ ಬಿಸಿಯೂಟದಲ್ಲಿ ಹೇಗಿರುತ್ತದೆ? ಏನಾದರೂ ಸಮಸ್ಯೆಯಿದೇಯಾ ಎಂದೂ ಕೇಳಿದರು.

ಶಾಲಾ ಮಕ್ಕಳಿಗೆ ಸಾಕ್ಸ್, ಶೂ, ಬ್ಯಾಗ್; ಸುವರ್ಣ ನ್ಯೂಸ್ ಕೆಲಸಕ್ಕೆ ಸುರೇಶ್ ಕುಮಾರ್ ಮೆಚ್ಚುಗೆ..

ಈ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಶಿಕ್ಷಣಾಭ್ಯಾಸಕ್ಕೆ ಯಾವುದಾದರೂ ತೊಂದರೆಯಿದೆಯಾ? ಎಂದು ಪ್ರಶ್ನಿಸಿದರು. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ ಅವರು ಜೀವನದಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಆಗುವ ದುಷ್ಪರಿಣಾಮ ಬಗ್ಗೆ ತಿಳಿಸಿದರು. ಸ್ವಚ್ಛತೆ, ಶಿಕ್ಷಣ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಸಹ ನಿರ್ದೇಶಕ ಪ್ರಸನ್ನಕುಮಾರ್, ಡಿಡಿಪಿಐ ದಿವಾಕರ್ ಶೆಟ್ಟಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಪ್ರಾಚಾರ್ಯ ಬಿ.ವಿ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.