ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸೇರಿ 7 ಮಂದಿಯ ಜಾಮೀನು ಅರ್ಜಿ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂದು ಮುಂದಿನ ವಿಚಾರಣೆಯಲ್ಲಿ ತೀರ್ಮಾನವಾಗಲಿದೆ. ಲಿಖಿತ ವಾದ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿಕೆ.

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ (actor darshan bail plea) ಸೇರಿ 7 ಮಂದಿಯ ಜಾಮೀನು ಅರ್ಜಿ ಆದೇಶವನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ . ಹೈಕೋರ್ಟ್ ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ಮುಂದಿನ ವಿಚಾರಣೆಯಲ್ಲಿ ತೀರ್ಮಾನವಾಗಲಿದೆ. ಮೂರು ಪೇಜು ಮೀರದಂತೆ ನಿಮ್ಮ ಲಿಖಿತ ವಾದ ಸಲ್ಲಿಸಿ ಎಂದು ಇತರೆ ಆರೋಪಿಗಳ ಎಲ್ಲಾ ವಕೀಲರಿಗೆ ಸೂಚನೆ ನೀಡಿ ಒಂದು ವಾರದೊಳಗೆ ಸಲ್ಲಿಸಲು ಹೇಳಿದೆ. ಮತ್ತು ಮುಂದಿನ ವಿಚಾರಣೆಯನ್ನು ಒಂದು ವಾರಗಳ ಕಾಲ ಮುಂದೂಡಿದೆ. 

ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಬೇಸರ

ಸಂಪೂರ್ಣ ವಾದ ಆಲಿಸಿದ ನ್ಯಾ. ಪರ್ದೀವಾಲಾ ನೇತೃತ್ವದ ಸುಪ್ರೀಂ ಪೀಠ, ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಸಿದೆ. ಹೈಕೋರ್ಟ್ 7 ಆರೋಪಿಗಳನ್ನು ನಿರ್ದೋಷಿ ಎಂದು ನಿರ್ಧರಿಸಿದೆಯೇ ?. ಎಲ್ಲಾ ಜಾಮೀನು ಆದೇಶಗಳಲ್ಲಿ ಹೈಕೋರ್ಟ್ ಹೀಗೆ ಹೇಳುತ್ತಾ? ಹೈಕೋರ್ಟ್ ನ್ಯಾಯಮೂರ್ತಿ ಹೀಗೆ ತಪ್ಪು ಮಾಡಬಹುದೇ ಎಂದು ಪ್ರಶ್ನಿಸಿದೆ. ಹೀಗಾಗಿ ದರ್ಶನ್ ಗ್ಯಾಂಗ್ ಬೇಲ್ ಕ್ಯಾನ್ಸಲ್ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ವಾರಗಳ ಬಳಿಕ ದರ್ಶನ್ ಬೇಲ್‌ ಭವಿಷ್ಯ ತಿಳಿಯಲಿದೆ.

ಪ್ರಕರಣದ ಹಿನ್ನೆಲೆ:

ಜು. 17ರಂದು ದರ್ಶನ್ ಬೇಲ್ ಅರ್ಜಿ ವಿಚಾರಣೆ ನಡೆದಿತ್ತು. ಬೇಲ್​ ನೀಡಲು ಹೈಕೋರ್ಟ್ ಕಾರಣಗಳು ಸಮಂಜಸವಾಗಿಲ್ಲ ಎಂದು ಮುಂದಿನ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿಕೆ ಮಾಡಿತ್ತು. ಜು.22ರಂದು ದರ್ಶನ್ ಪರ ಕಪಿಲ್ ಸಿಬಲ್ ವಾದಿಸಬೇಕಿತ್ತು. ಆದರೆ ಕಪಿಲ್ ಸಿಬಲ್ ಬಾರದೇ ಎರಡು ದಿನ ಕಾಲಾವಕಾಶ ಕೇಳಲಾಗಿತ್ತು. ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ವಾದ ಮಂಡನೆ ಮಾಡದೇ ಇರೋದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜು. 17ರಂದು ಸರ್ಕಾರದ ವಾದ ಮುಗಿದಿದ್ದು, ದರ್ಶನ್‌ ಪರ ವಕೀಲರು ಇಂದು ಪ್ರತಿವಾದ ಮಂಡಿಸಿದ್ದರು. ಬೇಲ್ ರದ್ದಾಗುವ ಭೀತಿ ಆವರಿಸಿ ಕೊನೆ ಗಳಿಗೆಯಲ್ಲಿ ದರ್ಶನ್‌ ವಕೀಲರ ಬದಲಾವಣೆಯಾಗಿದ್ದು ಸಿದ್ದಾರ್ಥ್ ದಾವೆ ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ಗೆ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ರಾಜ್ಯ ಸರ್ಕಾರ ಪರ ವಕೀಲರ ವಾದವನ್ನ ಸುಪ್ರೀಂಕೋರ್ಟ್ ಆಲಿಸಿ. ಎಲ್ಲ ದಾಖಲೆಗಳನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಪೀಠ, ಇವತ್ತು ಡೆವಿಲ್ ಪರ ವಕೀಲರ ವಾದವನ್ನ ಆಲಿಸಿದೆ. ಬಳಿಕ ಅಂತಿಮ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ. ರಾಜ್ಯ ಪೊಲೀಸರ ಪರ ವಕೀಲ ಪ್ರಸನ್ನ ಕುಮಾರ್ ಕೂಡ ಸುಪ್ರೀಂಕೋರ್ಟ್ ನಲ್ಲಿ ಉಪಸ್ಥಿತಿ ಇದ್ದರು.