boy drowns while swimming: ಬೇಸಿಗೆ ರಜೆಯಲ್ಲಿ ಈಜಲು ಕೃಷ್ಣಾ ನದಿಗೆ ತೆರಳಿದ್ದ 14 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ನಡೆದ ಈ ಘಟನೆಯು, ರಜಾ ದಿನಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬೇಸಿಗೆ ರಜೆಯಾಯ್ತು ಪೋಷಕರಿಗೆ ಸಜೆ: 

ಬೆಳಗಾವಿ: ಬಿಸಿಲದಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಬರುವ ಬೇಸಿಗೆ ರಜೆ ಮಕ್ಕಳ ಪಾಲಿಗೆ ಸಜೆಯಾಗಿದೆ. ಹೌದು ಸೆಖೆ ತಾಳಲಾರದೇ ಹಾಗೂ ಬೇಸಿಗೆ ರಜೆಯಲ್ಲಿ ನೀರಿನಲ್ಲಿ ಮಜಾ ಮಾಡುವ ಉದ್ದೇಶದಿಂದ ಶಾಲಾ ಮಕ್ಕಳು ತಂಡ ತಂಡವಾಗಿ ಹಳ್ಳಿಗಳಲ್ಲಿ ಸಮೀಪದ ಕೆರೆ ಹೊಳೆ, ತೊರೆಗಳಿಗೆ ಈಜಾಟಕ್ಕೆ ಹೋಗುತ್ತಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದು, ಪೋಷಕರಿಗೆ ಮಕ್ಕಳನ್ನು ತಡೆಯುವುದೇ ಈಗ ದೊಡ್ಡ ಸಾಹಸವಾಗುತ್ತಿದೆ. ಇದು ಏಪ್ರಿಲ್ ತಿಂಗಳ ಆರಂಭವಷ್ಟೇ ಆಗಲೇ ರಾಜ್ಯದಲ್ಲಿ ಇದುವರೆಗೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದ ಮಕ್ಕಳ ಸಂಖ್ಯೆ ಎರಡಂಕಿ ದಾಟಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಜಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

ಅದೇ ರೀತಿ ಈಗ ನೀರಲ್ಲಿ ಮುಳುಗಿ ಬಾಲಕ ಸಾವನ್ನಪ್ಪಿದ ಮತ್ತೊಂದು ಪ್ರಕರಣ ನಡೆದಿದೆ. ಗೆಳೆಯರೊಂದಿಗೆ ಕೃಷ್ಣಾ ನದಿಗೆ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 14 ವರ್ಷದ ನೌಮನ್ ಡೌವ್ ಮೃತಪಟ್ಟ ಬಾಲಕ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಈ ಘಟನೆ ನಡೆದಿದೆ. ಕುಡಚಿ ಪಟ್ಟಣದ ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದ್ದು, ನಿನ್ನೆ ಮಧ್ಯಾಹ್ನ ಈಜಲು ಹೋಗಿದ್ದ ಬಾಲಕ ಕಣ್ಮರೆಯಾಗಿದ್ದಾನೆ.

ಬಾಲಕನಿಗಾಗಿ ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದವರು ಕಾರ್ಯಾಚರಣೆ ನಡೆಸಿದ ಬಳಿಕ ಮೃತ ಬಾಲಕನ ಶವ ಸಿಕ್ಕಿದೆ. ಡಚಿ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಬೇಸಿಗೆ ರಜೆ ಪೋಷಕರ ಪಾಲಿಗೆ ಸಜೆಯಾಗಿ ಬದಲಾಗಿದ್ದು, ಮಕ್ಕಳನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ.

ಇದನ್ನೂ ಓದಿ: ಸಚಿವ ಈಶ್ವರ್ ಖಂಡ್ರೆ ಮುಂದೆಯೇ ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ನೀಡಿದ ಭರವಸೆಗೆ ಕರ್ನಾಟಕದಲ್ಲಿ ತೀವ್ರ ಆಕ್ರೋಶ