Asianet Suvarna News Asianet Suvarna News

24 ಕಾರ್ಖಾನೆಗಳಿಂದ ರೈತರಿಗೆ 381 ಕೋಟಿ ಬಾಕಿ: ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 622.26 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆದು, ರೈತರಿಗೆ 19,427 ಕೋಟಿ ರು.ನಷ್ಟು ಕಬ್ಬಿನ ಬಿಲ್ಲನ್ನು ಪಾವತಿಸಿವೆ.

Sugarcane Factories Paid Outstanding Amount To Farmers Says Shankar Patil Munenakoppa gvd
Author
Bangalore, First Published Jun 10, 2022, 3:00 AM IST | Last Updated Jun 10, 2022, 3:00 AM IST

ಬೆಂಗಳೂರು (ಜೂ.10): ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 622.26 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆದು, ರೈತರಿಗೆ 19,427 ಕೋಟಿ ರು.ನಷ್ಟು ಕಬ್ಬಿನ ಬಿಲ್ಲನ್ನು ಪಾವತಿಸಿವೆ. 381.72 ಕೋಟಿ ರು. ಬಾಕಿ ಇದ್ದು, ಶೀಘ್ರದಲ್ಲಿಯೇ ಆ ಮೊತ್ತವನ್ನು ರೈತರಿಗೆ ಕೊಡಿಸಲಾಗುವುದು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಹೇಳಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ರೈತ ಮುಖಂಡರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22ನೇ ಸಾಲಿನ ಹಂಗಾಮಿನಲ್ಲಿ ಏಪ್ರಿಲ್‌ ಅಂತ್ಯಕ್ಕೆ ಕಾರ್ಖಾನೆಗಳು ರೈತರಿಗೆ 2389.94 ಕೋಟಿ ರು. ಪಾವತಿಸದೆ ಉಳಿಸಿಕೊಂಡಿದ್ದವು. ಮೇ 31ರೊಳಗೆ ಪಾವತಿಸುವಂತೆ ಸಮಯ ನೀಡಲಾಗಿತ್ತು. ಸರ್ಕಾರದ ಸೂಚನೆಯಂತೆ 48 ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಬಿಲ್‌ ಪಾವತಿಸಿವೆ. ಇನ್ನು 24 ಕಾರ್ಖಾನೆಗಳಿಂದ ಒಟ್ಟು 381.72 ಕೋಟಿ ರು. ರೈತರಿಗೆ ಪಾವತಿಯಾಗಬೇಕಿದೆ. ಪಾವತಿ ಪ್ರಮಾಣ ಶೇ.99ರಷ್ಟುಆಗಿದೆ. ಒಂದು ವೇಳೆ ಕಾರ್ಖಾನೆಗಳು ಬಾಕಿ ಪಾವತಿಸಲು ವಿಫಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Udupi: ಯಶ್ಪಾಲ್ ಸುವರ್ಣಗೆ ಮತ್ತೆ ಬೆದರಿಕೆ: ಇಲಾಖೆಯಿಂದ ಪೊಲೀಸ್ ಭದ್ರತೆ

ಎಥೆನಾಲ್‌ ಲಾಭ ರೈತರಿಗೆ ಸಿಗಬೇಕು: ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‌ ಲಾಭ ರೈತರಿಗೆ ಹಂಚಿಕೆಯಾಗಬೇಕು. ಈ ಬಗ್ಗೆ ಕಾನೂನು ರೂಪಿಸಬೇಕಾದ ಅಗತ್ಯ ಇದೆ. ರಾಜ್ಯದಲ್ಲಿ 40 ಸಕ್ಕರೆ ಕಾರ್ಖಾನೆಗಳು ಎಥೆನಾಲ್‌ ಉತ್ಪಾದಿಸುತ್ತಿದ್ದು, ಎಥೆನಾಲ್‌ ಹಣ ರೈತರಿಗೆ ನೀಡುವ ಬಗ್ಗೆ ಒತ್ತಾಯಿಸಲಾಗಿದೆ ಎಂದ ಅವರು, ಯಾವುದೇ ಸಕ್ಕರೆ ಕಾರ್ಖಾನೆ 14 ದಿನಕ್ಕಿಂತ ಹೆಚ್ಚು ವಿಳಂಬವಾಗಿ ಹಣ ಪಾವತಿ ಮಾಡುವಾಗ ಕನಿಷ್ಠ ಶೇ.15ರಷ್ಟುಬಡ್ಡಿ ಸೇರಿಸಿ ನೀಡುವಂತೆ ಒತ್ತಾಯಿಸಲಾಗಿದೆ. ನಿಯಮ ಉಲ್ಲಂಘಿಸುವ ಕಾರ್ಖಾನೆಗಳಿಗೆ ಕಬ್ಬು ಅರೆಯುವ ರಹದಾರಿ ನವೀಕರಣ ಮಾಡಬಾರದು. ಅಲ್ಲದೇ, ಕಬ್ಬು ಬೆಳೆಗೆ ಬೆಳೆ ವಿಮೆ ಜಾರಿ ತರಲು ಕೃಷಿ ಇಲಾಖೆ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಆಕಸ್ಮಿಕ ಬೆಂಕಿ, ಕಾಡು ಪ್ರಾಣಿಗಳ ಹಾವಳಿ, ಅತಿವೃಷ್ಟಿಹಾನಿ, ಬೆಳೆನಷ್ಟಪರಿಹಾರ ವೈಜ್ಞಾನಿಕವಾಗಿ ನಿಗದಿಯಾಗಬೇಕು ಎಂದರು.

ದೇಶದ ಜನರಿಗೆ ಶ್ರಮಿಸುತ್ತಿರುವ ಮೋದಿ: ದೇಶದ ಬೆನ್ನೆಲುಬಾದ ರೈತನಿಗೆ ಮೋದಿ ಸರ್ಕಾರ 21 ಸಾವಿರ ಕೋಟಿ ರು. ಹಣವನ್ನು ಡಿಜಿಟಲ್‌ ವರ್ಗಾವಣೆ ಮುಖಾಂತರ ನೇರವಾಗಿ ಅವರವರ ಖಾತೆಗೆ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವ ಅಂಗವಾಗಿ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಗರೀಬ್‌ ಕಲ್ಯಾಣ ಸಮ್ಮೇಳನದ ನಿಮಿತ್ತ ಆಯೋಜಿಸಿದ್ದ ಫಲಾನುಭವಿಗಳೊಂದಿಗಿನ ಪ್ರಧಾನಿ ವಿಡಿಯೋ ಸಂವಾದದ ನಂತರ ಮಾತನಾಡಿದರು.

Karwar: ಕೋಟಿಗಟ್ಟಲೆ ಅಕ್ರಮ ಹಣ ಸಾಗಾಟ: ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ

ಹೆಚ್ಚು ಹೆಚ್ಚು ಫಲಾವಿನುಭಗಳು ನಮ್ಮ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು. ಮೋದಿ ಸರ್ಕಾರದ ಯೋಜನೆಗಳನ್ನು ಪಡೆದವರು ಅವರ ಜೊತೆ ಮಾತನಾಡಬೇಕೆಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಈ ಭಾವನೆ ನೋಡಿದಾಗ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಅವರು ದೇಶದ ಜನರಿಗಾಗಿ ಹಗಲಿರುಳು ಶ್ರಮಿಸುತ್ತಾರೆ ಎಂದರು. ವಿಡಿಯೋ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಈ ದೇಶದ ಪ್ರಧಾನಿಯಾಗಿ ಅಲ್ಲ 130 ಕೋಟಿ ಭಾರತೀಯರ ಪ್ರಧಾನ ಸೇವಕನಾಗಿ ಕೆಲಸ ಮಾಡುತ್ತೇನೆ. ಪ್ರತಿ ಭಾರತೀಯರ ಸುಖ, ಸಮೃದ್ಧಿಗಾಗಿ ಹಾಗೂ ಬಡವರು, ದಲಿತರು ಮತ್ತು ಆದಿವಾಸಿ ಸೇವೆಯನ್ನು ಮಾಡುವುದು ನನ್ನ ಜವಾಬ್ದಾರಿ ಆಗಿದೆ ಎಂದರು.

Latest Videos
Follow Us:
Download App:
  • android
  • ios