ತರಗತಿಗೆ ಬರುತ್ತಿಲ್ಲ, ಪಾಠ ಮಾಡುತ್ತಿಲ್ಲ..; ಶಾಲೆಗೆ ಬೀಗ ಜಡಿದು ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ
ಮುಖ್ಯೋಪಾಧ್ಯಾಯರು ತರಗತಿಗೆ ಬರುತ್ತಿಲ್ಲ, ಪಾಠ ಮಾಡುತ್ತಿಲ್ಲ ಎಂದು ಅರೋಪಿಸಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ರಾಮನಗರ ಹನುಮಾನ್ ಲೇನ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕಾರವಾರ, ಉತ್ತರಕನ್ನಡ (ಅ.21): ಮುಖ್ಯೋಪಾಧ್ಯಾಯರು ತರಗತಿಗೆ ಬರುತ್ತಿಲ್ಲ, ಪಾಠ ಮಾಡುತ್ತಿಲ್ಲ ಎಂದು ಅರೋಪಿಸಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ರಾಮನಗರ ಹನುಮಾನ್ ಲೇನ್ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ರಾಮಾ ಚವ್ಹಾಣ್. ದಿನನಿತ್ಯ ತರಗತಿಗೆ ಗೈರ ಹಾಜರಾಗುತ್ತಿರುವ ಆರೋಪ. ಅಲ್ಲದೆ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಬೈಗುಳ. ವಿನಾಕಾರಣ ವಿದ್ಯಾರ್ಥಿಗಳಿಗೆ ಬೈಯುತ್ತಿರುವುದರಿಂದ ರೋಸಿಹೋಗಿರುವ ವಿದ್ಯಾರ್ಥಿಗಳು. ಹೀಗಾಗಿ ಈ ವಿಚಾರ ಪೋಷಕರು ತಿಳಿಸಿರುವ ವಿದ್ಯಾರ್ಥಿಗಳು. ಮುಖ್ಯೋಪಾಧ್ಯಾಯನ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರವೂ ಇದೆ: ಸಂಸದ ಕಾಗೇರಿ ಆರೋಪ
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಂದ ಬಿಇಒ. ಪೋಷಕರೊಂದಿಗೆ ಮಾತನಾಡಿ ಬಳಿಕ ಮುಖ್ಯೋಪಾಧ್ಯಾಯ ರಾಮ ಚವ್ಹಾಣ್‌ಗೆ ಕ್ಯಾಸಲ್ರಾಕ್ ಶಾಲೆಗೆ ಡೆಪ್ಯೂಟೇಶನ್ ವರ್ಗಾವಣೆ ಕೊಟ್ಟ ಬಿಇಒ. ಸದ್ಯ ಹಳೇ ಮುಖ್ಯೋಪಾಧ್ಯಾಯರ ಬದಲು ಸಹ ಶಿಕ್ಷಕ ಬಿ.ಎಚ್. ಭಗವನ್ ಅವರಿಗೆ ಮುಖ್ಯೋಪಾಧ್ಯಾಯರ ಚಾರ್ಜ್ ನೀಡಲಾಗಿದೆ.