ಸಿಎಂ ಸಿದ್ದರಾಮಯ್ಯಗೆ ಅವರ ಕುರ್ಚಿ ಗ್ಯಾರಂಟಿ ಇಲ್ಲ: ಮಾಜಿ ಸಿಎಂ ಬೊಮ್ಮಾಯಿ ವ್ಯಂಗ್ಯ

ಪ್ರತಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಕೃಷ್ಣೆ ಮೇಲೆ ಆಣೆ ಮಾಡುತ್ತಾರೆ. ಆದರೆ, ಅಧಿಕಾರದಲ್ಲಿದ್ದಾಗ ಏನನ್ನೂ ಮಾಡುವುದಿಲ್ಲ. ಈ ಬಾರಿಯೂ ಯುಕೆಪಿಯನ್ನು ನಿರ್ಲಕ್ಷಿಸಿದರೆ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

Struggle if UKP ignores by congress govt  Former CM Basavaraja Bommai warns siddaramaiaCM at bagalkot rav

ಬಾಗಲಕೋಟೆ (ಜೂ.26) ಪ್ರತಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಕೃಷ್ಣೆ ಮೇಲೆ ಆಣೆ ಮಾಡುತ್ತಾರೆ. ಆದರೆ, ಅಧಿಕಾರದಲ್ಲಿದ್ದಾಗ ಏನನ್ನೂ ಮಾಡುವುದಿಲ್ಲ. ಈ ಬಾರಿಯೂ ಯುಕೆಪಿಯನ್ನು ನಿರ್ಲಕ್ಷಿಸಿದರೆ ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ, ಬೆಳಗಾವಿ, ಮೈಸೂರಿನ ಕೆಲ ಸಚಿವರು ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಪದೇ, ಪದೇ ಹೇಳುತ್ತಿರುವುದನ್ನು ಗಮನಿಸಿದರೆ ಅವರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ಅವರ ಕುರ್ಚಿ ಗ್ಯಾರಂಟಿ ಇಲ್ಲ. ಅವರು ಜನರಿಗೆ ಗ್ಯಾರಂಟಿ ನೀಡಲು ಹೊರಟಿರುವುದು ನಗೆ ತರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಇನ್ನೆರೆಡು ತಿಂಗಳಲ್ಲಿ ಡಿಸೇಲ್‌ ಇಲ್ಲದೆ ಬಸ್‌ಗಳು ಸಂಚಾರ ನಿಲ್ಲಿಸಲಿವೆ: ಬೊಮ್ಮಾಯಿ

ಬಾಗಲಕೋಟೆ ಜಿಲ್ಲೆಯ ಜನರ ತ್ಯಾಗವನ್ನು ಮರೆಯುವಂತಿಲ್ಲ. ಮುಳುಗಡೆಯಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಈವರೆಗೆ ಬೆಲೆ ನಿಗದಿ ಮಾಡಲು ಸಾಧ್ಯವಾಗಿರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಅದು ಸಾಧ್ಯವಾಗಿತ್ತು. ನಾವು ಜಿಲ್ಲೆಯ ಏತ ನೀರಾವರಿ ಯೋಜನೆಗಳಿಗಾಗಿಯೇ .10 ಸಾವಿರ ಕೋಟಿಗಳನ್ನು ನೀಡಿದ್ದೆವು. ಈಗಿನ ಸರ್ಕಾರ ಕೇವಲ ಭರವಸೆ ನೀಡುತ್ತದೆ ಹೊರತು ಕೆಲಸ ಮಾಡುವುದಿಲ್ಲ. ಆದರೆ, ಯುಕೆಪಿ ವಿಚಾರದಲ್ಲಿ ಮಾತು ತಪ್ಪಿದರೆ ಉತ್ತರ ಕರ್ನಾಟಕದ ಜನ ಸುಮ್ಮನಿರುವುದಿಲ್ಲ ಎಂದು ಹೇಳಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಕಷ್ಟುಕೆಲಸಗಳನ್ನು ಮಾಡಿದೆ. ದೇಶ ಭದ್ರತೆ ವಿಚಾರದಲ್ಲಿ ಸಾಕಷ್ಟುಗಟ್ಟಿಕ್ರಮ ಕೈಗೊಂಡಿದೆ. ಮುಂದಿನ ಲೋಕಸಭೆಯಲ್ಲಿ ರಾಜ್ಯ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು.

ಹಿಂದುತ್ವ ವಿರೋಧಿಸೋರು ಹಿಜಡಾಗಳು:

ಕಾರ್ಯಕ್ರಮದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಸ್ತೆಯಲ್ಲಿ ಭಿಕ್ಷೆ ಬೇಡುವವರು ಹಿಜಡಾಗಳಲ್ಲ ಅವರನ್ನು ಟೀಕಿಸುವುದಿಲ್ಲ. ಆದರೆ ಹಿಂದೂಗಳಾಗಿ ಹಿಂದುತ್ವವನ್ನು ಟೀಕಿಸುವವರು ಹಿಜಡಾಗಳು ಎಂದು ಬಾಳಾ ಠಾಕ್ರೆಯವರು ಹೇಳಿದ್ದರು. ಛತ್ರಪತಿ ಶಿವಾಜಿ ಮಹಾರಾಜರು, ಕಿತ್ತೂರು ರಾಣಿ ಚೆನ್ನಮ್ಮ, ರಾಣಾ ಪ್ರತಾಪ ಸಿಂಗ್‌, ಅಹಿಲ್ಯಾಬಾಯಿ ಹೋಳ್ಕರ್‌ರಂಥವರು ಆದರ್ಶವಾಗಬೇಕಿದೆ. ಶಿವಾಜಿ ಮೂರ್ತಿ, ಬಸವಣ್ಣನವರ ಮೂರ್ತಿಗೆ ವಿರೋಧಿಸುತ್ತಾರೆ ಎಂದರೆ ಏನನ್ನಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಮಕೃಷ್ಣ ಹೆಗಡೆ ಅವರ ಜತೆಗೆ ಹೆಜ್ಜೆ ಹಾಕಿದ್ದೆವು. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಆಗ ಸಂಸದನಾಗಿ ಬೆಂಬಲಿಸಿದ್ದೆ, 2004ರಲ್ಲಿ ಬಿಜೆಪಿ ಸೇರುವ ನಿರ್ಧಾರವನ್ನು ನಾನು ಹಾಗೂ ಗೋವಿಂದ ಕಾರಜೋಳ ಮಾಡಿದಾಗ ಅನೇಕರು ಬಿಜೆಪಿಗೆ ದಲಿತರು ಹೊಂದಾಣಿಕೆ ಆಗುವುದಿಲ್ಲ ಎಂದರು. ಆದರೆ ಕಾಂಗ್ರೆಸ್‌ ದಲಿತ ನಾಯಕರನ್ನು ತುಳಿದಷ್ಟುಇನ್ಯಾವ ಪಕ್ಷವೂ ತುಳಿದಿಲ್ಲ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿಗೆ ತೀವ್ರ ತೊಂದರೆಯನ್ನು ಕಾಂಗ್ರೆಸ್‌ ಕೊಟ್ಟಿದೆ ಎಂದರು. ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಜಿಲ್ಲೆಗೆ ತಂದಿರುವ ಅನುದಾನ, ವಿವಿಧ ಯೋಜನೆಗಳ ಅಂಕಿ ಅಂಶ ವಿವರಿಸಿದರು.

ಡಿ.ಕೆ.ಶಿವಕುಮಾರ್‌ ಭೇಟಿ ಬಗ್ಗೆ ಯತ್ನಾಳ್‌, ಬೊಮ್ಮಾಯಿ ಮಧ್ಯೆ ಘರ್ಷಣೆ

ಈ ವೇಳೆ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಭೈರತಿ ಬಸವರಾಜು, ಶಶಿಕಲಾ ಜಿಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios