Asianet Suvarna News Asianet Suvarna News

Shobha Karandlaje ಲವ್‌ ಜಿಹಾದ್‌ ನಿಷೇಧ ಕಾನೂನು ಬೇಕು, ಶೋಭಾ ಆಗ್ರಹ!

ಹಿಂದೂ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಲವ್ ಜಿಹಾದ್
 ಪ್ರೀತಿಯ ಹೆಸರಲ್ಲಿ ಮತಾಂತರ ನಡೆಸುವ ಹುನ್ನಾರ
ರೈತ ನಾಯಕ ಟಿಕಾಯತ್‌ಗೆ ಮಸಿ ಬಳಿದ ಘಟನೆ ಸರಿಯಲ್ಲ: ಸಂಸದೆ
 

Strict law necessary to curb love jihad in Karnataka says shobha karandlaje ckm
Author
Bengaluru, First Published Jun 1, 2022, 4:07 AM IST

ಉಡುಪಿ(ಜೂ.01): ಲವ್‌ ಜಿಹಾದ್‌ನ್ನು ನಿಷೇಧಿಸುವ ಕಾನೂನು ಜಾರಿಯಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್‌ ಜಿಹಾದ್‌ ಮೂಲಕ ಹಿಂದೂ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ, ಪ್ರೀತಿಯ ಹೆಸರಲ್ಲಿ ಮತಾಂತರ ನಡೆಸುವ ಅಥವಾ ಮದುವೆಯಾಗದೆ ಮೋಸ ಮಾಡುವ ಘಟನೆಗಳು ದೇಶಾದ್ಯಂತ ನಡೆಯುತ್ತಿವೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಹಿಂದೂ ಹುಡುಗಿ, ಮುಸ್ಲಿಂ ಹುಡುಗ, 6 ವರ್ಷಕ್ಕೆ ಮುಗಿದ ಪ್ರೇಮ ಕತೆ!

ಮಸಿ ಬಳಿಯುವುದು ಸರಿಯಲ್ಲ: ರೈತ ನಾಯಕ ಟಿಕಾಯತ್‌ ಅವರಿಗೆ ಮಸಿ ಬಳಿದ ಘಟನೆ ಸರಿಯಲ್ಲ. ಯಾವುದೇ ಹೋರಾಟಗಾರರ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಟಿಕಾಯತ್‌ ತನ್ನದೇ ಒಂದು ವಿಚಾರ ಇಟ್ಟು ಹೋರಾಟ ನಡೆಸುತ್ತಿದ್ದಾರೆ ಅದರಿಂದ ರೈತರಿಗೆ ಎಷ್ಟುಲಾಭ ಆಯ್ತು ನಷ್ಟಆಯ್ತು ಅನ್ನೋದನ್ನು ಅವರೇ ಅವಲೋಕನ ಮಾಡಲಿ, ಆದರೆ ಮಸಿ ಬಳಿಯುವ ಕೆಲಸ ಯಾರು ಕೂಡ ಮಾಡಬಾರದು, ಶೋಭೆ ತರುವಂತದ್ದಲ್ಲ ಎಂದವರು ಹೇಳಿದರು.

ಹಿಜಾಬ್‌ ಹೋರಾಟ ಸರಿಯಲ್ಲ: ಮಂಗಳೂರಿನಲ್ಲಿ ತಲೆ ಎತ್ತಿರುವ ಹಿಜಾಬ್‌ ಘಟನೆಗೆ ಸಂಬಂಧಿಸಿದಂತೆ, ಹೈಕೋರ್ಚ್‌ ಆದೇಶ ಸ್ಪಷ್ಟವಾಗಿದೆ. ತರಗತಿಯ ಒಳಗೆ ಹಿಜಾಬ್‌ಗೆ ಅವಕಾಶ ಇಲ್ಲ. ಈ ನೆಲದಲ್ಲಿ ಬದುಕುವಂತಹವರ ಕೋರ್ಚ್‌ ಆದೇಶ ಪಾಲಿಸಬೇಕು. ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಇದು ಮುಂದೆ ಸಮಾಜದ್ರೋಹಿ, ದೇಶದ್ರೋಹಿ ಚಟುವಟಿಕೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಉಡುಪಿ ಲವ್ ಜಿಹಾದ್ ಕೇಸ್, ಶಿಲ್ಪಾಳ ಪ್ರೀತಿ ಬಿಚ್ಚಿಟ್ಟ ನಂಬರ್ ಗೇಮ್ ರಹಸ್ಯ

ಮಸೀದಿ - ಮಂದಿರ ನಿಷ್ಕರ್ಷೆ: ಇತಿಹಾಸದಲ್ಲಾಗಿರುವ ತಪ್ಪುಗಳನ್ನು ಸರಿ ಮಾಡಬೇಕು, ಅದಕ್ಕೆ ಮಸೀದಿ- ಮಂದಿರ ನಿಷ್ಕರ್ಷೆಯಾಗಲಿ, ಇತಿಹಾಸಜ್ಞರು ಉತ್ಖನನ ಮಾಡಿ ಯಾವುದು ಸರಿ ಯಾವುದು ತಪ್ಪು ತಿಳಿಸಲಿ, ಎಲ್ಲರೂ ಈ ರೀತಿ ಯೋಚನೆ ಮಾಡಿದರೆ ಸಮಸ್ಯೆ ಬಗೆಹರಿಸಬಹುದು. ಮಳಲಿ ಮಸೀದಿಯ ಬಗ್ಗೆ ಎರಡು ಧರ್ಮದವರು ಒಟ್ಟಿಗೆ ಕುಳಿತು ಇತಿಹಾಸದಲ್ಲಿ ಅದು ಯಾರಿಗೆ ಸೇರಿತ್ತು ಅನ್ನುವುದನ್ನು ನಿರ್ಧರಿಸಲಿ ಎಂದು ಶೋಭಾ ಸಲಹೆ ಮಾಡಿದರು.

ವಿವಾದ ಇಲ್ಲದವರು ಪಠ್ಯಪುಸ್ತಕ ಸಮಿತಿಯಲ್ಲಿರಬೇಕು
ಈಗ ರಾಜ್ಯ ಸರ್ಕಾರ ನೇಮಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಥವಾ ವ್ಯಕ್ತಿಗಳ ಬಗ್ಗೆ ನಾನು ಮಾತನಾಡಲಿಚ್ಚಿಸುವುದಿಲ್ಲ. ಆದರೆ ಯಾವುದೇ ವಿವಾದಕ್ಕೊಳಗಾಗದ ವ್ಯಕ್ತಿಗಳು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿರುವುದು ಉತ್ತಮ ಎಂದು ಕೇಂದ್ರ ರೈತ- ಕೃಷಿ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ರಾಜ್ಯ ನಮ್ಮದು, ನಮ್ಮ ಕನ್ನಡ ಸಾಹಿತ್ಯ ಅಷ್ಟುಸತ್ವಯುತವಾಗಿದೆ, ನಮ್ಮ ಕವಿಗಳಲ್ಲಿ ಅಷ್ಟೊಂದು ತಾಕತ್ತು ಇದೆ. ನಮ್ಮ ರಾಜ್ಯದ ಏಕೀಕರಣದಂತಹ ವಿಚಾರಗಳು ಕೂಡ ಮಕ್ಕಳಿಗೆ ಪಠ್ಯಪುಸ್ತಕಗಳಿಂದ ತಿಳಿಯುವಂತಾಗಬೇಕು. ಎಲ್ಲರಿಗೂ ಪ್ರಿಯವಾದ ವಿಚಾರಗಳನ್ನು ಹೇಳಬೇಕು. ಎಲ್ಲರೂ ಸಮಾನ ಎನ್ನುವ ರೀತಿಯಲ್ಲಿ ಪರಿಷ್ಕರಣೆಯಾಗಬೇಕು. ಮಕ್ಕಳ ಮನಸ್ಸನ್ನು ಪುಳಕಗೊಳಿಸುವ, ವಿಕಸಿತಗೊಳಿಸುವ ಪಠ್ಯಗಳು ಪುಸ್ತಕದಲ್ಲಿರಬೇಕು ಎಂದವರು ಅಭಿಪ್ರಾಯಪಟ್ಟರು.

Follow Us:
Download App:
  • android
  • ios