ಬೆಂಗಳೂರು(ಜು.13): ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಪ್ಲಾನಿಂಗ್ ಇಲ್ಲ, ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸರಿಯಾಗಿ ಆಡಳಿತ ನಡೆಸೋದಕ್ಕೆ ಆಗ್ತಿಲ್ಲ. ಜನರು ಆತಂಕದಿಂದ ಬೆಂಗಳೂರು ತೊರೆಯುತ್ತಿರುವುದಕ್ಕೆ ಸರ್ಕಾರವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಈ ಸರ್ಕಾರ ಜನರಿಗೆ ಸರಿಯಾದ ಭರವಸೆ ನೀಡುತ್ತಿಲ್ಲ. ಬೆಂಗಳೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ಇದರಿಂದ ತೊಂದ್ರೆಯಾಗ್ತಿದೆ. ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕಿದೆ ಎಂದು ಡಿಕೆಶಿ ಹೇಳಿದ್ದಾರೆ. ಪಕ್ಷಾತೀತವಾಗಿ ನಾವು ಕೊರೋನಾವನ್ನು ನಿಯಂತ್ರಣ ಮಾಡಬೇಕಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸೇವೆ ಮಾಡಲು ಬದ್ಧರಾಗಿದ್ದಾರೆ. ಆದ್ರೆ ಬಿಜೆಪಿಯವರು ಅವರ ಅಜೆಂಡಾ ಮಾಡಿಕೊಂಡಿದ್ದಾರೆ ಎಂದು ಶಿವಕುಮಾರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 

ಬೆಡ್ ಹಾಗು ಅಂಬುಲೆನ್ಸ್ ಕೊರತೆ ವಿಚಾರದಲ್ಲಿ ಮಾಧ್ಯಮಗಳು ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಮಾಡುತ್ತಿವೆ. ಅವ್ಯವಸ್ಥೆಯ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿ ತೋರಿಸುತ್ತಿದೆ. ಲಾಕ್ ಡೌನ್ ಜಾರಿಗೆ ಮಾಧ್ಯಮಗಳ ಪಾತ್ರವೂ ಕೂಡ ಬಹಳ ದೊಡ್ಡದಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೈಸೂರು: ಡಿಸಿ ಜೊತೆ ರ್ಚಿಸಿ ಲಾಕ್‌ಡೌನ್ ನಿರ್ಧಾರ, ಸಚಿವ ಎಸ್‌ಟಿಎಸ್‌

ಒಂದು ಕಡೆ ಆರೋಗ್ಯ ಮಂತ್ರಿ, ಬೆಂಗಳೂರಿಗೆ ಮತ್ತೊಬ್ಬರು, ಸಿಎಂ ರಾಜಕೀಯ ಕಾರ್ಯದರ್ಶಿ ಕೂಡ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬರಿಗೊಬ್ಬರು ನಂಬಿಕೆ ಇಲ್ಲ, ಅಧಿಕಾರಿಗಳ ಮೇಲೆಯೂ ನಂಬಿಕೆ ಇಲ್ಲ. ಹೀಗಾಗಿ ಜನರು ಆತಂಕಗೊಂಡು ಬೆಂಗಳೂರು ತೊರೆಯುತ್ತಿದ್ದಾರೆ. ಲಾಕ್ ಡೌನ್ ವಿಚಾರದಲ್ಲಿ ಸರ್ಕಾರದ ನಿರ್ಧಾರದಲ್ಲಿ ಕಾಂಗ್ರೆಸ್ ಮಧ್ಯಪ್ರವೇಶ ಮಾಡೋದಿಲ್ಲ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳನ್ನು ನಾವು ಪ್ರಶ್ನೆ ಮಾಡ್ತಾ ಹೋಗಲ್ಲ. ನಮ್ಮನ್ನು ಕರೆದು ಮಾತನಾಡಿಸಿದರೆ ಮಾತ್ರ ನಾವು ಸಲಹೆ ನೀಡ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"