ಬೆಂಗಳೂರು(ಜು.31):  ಒಂದು ವರ್ಷದ ಸೇವೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ ರಾವ್‌ ಅವರನ್ನು ವರ್ಗಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 

ಭಾಸ್ಕರ್‌ರಾವ್‌ ಅವರು ನಗರ ಪೊಲೀಸ್‌ ಆಯುಕ್ತರಾಗಿ ಆ.3ಕ್ಕೆ ಒಂದು ವರ್ಷ ತುಂಬಲಿದೆ. ಯಾವುದೇ ಗುರುತರ ಆರೋಪಗಳು ಹಾಗೂ ವಿವಾದಗಳ ಇಲ್ಲದೆ ಹೋದರೂ ವರ್ಷದ ಅವಧಿ ಮುಗಿಸಿದ ಕಾರಣ ನೀಡಿ ಆಯುಕ್ತರ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. 

ದ್ವಿಚಕ್ರ ವಾಹನ ಸವಾರರಿಗೆ ಕಮಿಷನರ್ ಎಚ್ಚರಿಕೆ, ಹೆಲ್ಮೆಟ್ ಹಾಕದಿದ್ರೆ ಗ್ರಹಚಾರ!

ಭಾಸ್ಕರ್‌ರಾವ್‌ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಗುಪ್ತದಳ ಮುಖ್ಯಸ್ಥ ಕಮಲ್‌ ಪಂತ್‌ ಅವರ ನೇಮಕವಾಗಲಿದೆ ಎಂದು ತಿಳಿದು ಬಂದಿದೆ.