ದ್ವಿಚಕ್ರ ವಾಹನ ಸವಾರರಿಗೆ ಕಮಿಷನರ್ ಎಚ್ಚರಿಕೆ, ಹೆಲ್ಮೆಟ್ ಹಾಕದಿದ್ರೆ ಗ್ರಹಚಾರ!
ಕೊರೋನಾ ಲಾಕ್ ಡೌನ್ ಸಡಿಲಿಕೆ ನಂತರ ದ್ವಿಚಕ್ರ ವಾಹನ ಸವಾರರ ಬೇಕಾಬಿಟ್ಟಿ ಓಡಾಡ/ ಹೆಲ್ಮೆಟ್ ಹಾಕದ ವಿಚಾರಕ್ಕೆ ಗರಂ ಆದ ಭಾಸ್ಕರ್ ರಾವ್/ ಮನೆಯಿಂದ ಹೊರಡುವಾಗಲೆ ಹೆಲ್ಮೆಟ್ ಹಾಕಿಕೊಳ್ಳಿ
ಬೆಂಗಳೂರು(ಜು. 29) ಕೊರೋನಾ ಲಾಕ್ ಡೌನ್ ನಿಯಮ ಸಡಿಲ ಮಾಡಿದ ನಂತರ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗಿದ್ದು ಸಾವು-ನೋವು ಸಂಭವಿಸುತ್ತಿದೆ. ಟ್ವಿಟ್ ಮಾಡಿರುವ ಭಾಸ್ಕರ ರಾವ್, ವಾಹನ ಸವಾರರಿಗೆ ಮನೆಯವರು ಹೆಲ್ಮೆಟ್ ಹಾಕೋದಕ್ಕೆ ಹೇಳಬೇಕು. ಇಲ್ಲ ಅಂದ್ರೆ ಕುಟುಂಬದವರು ನೋವು ಅನುಭವಿಸಬೇಕಾಗುತ್ತದೆ. ತಲೆಗೆ ಪೆಟ್ಟು ಬಿದ್ದು ಸಾವಾಗುತ್ತಿರುವುದನ್ನು ಮೇಲಿಂದ ಮೇಲೆ ನೋಡುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ನಿಂದ ಹೆಲ್ಮೆಟ್ ನಿಯಮದಲ್ಲಿ ಭಾರೀ ಬದಲಾವಣೆ
ಕೊರೋನಾ ಕಾರಣಕ್ಕೆ ಆಸ್ಪತ್ರೆಯಲ್ಲಿ ಉಳಿದ ರೋಗಗಳಿಗೆ, ಅಪಘಾತದಂತಹ ಸಂದರ್ಭ ಎದುರಾದರೆ ಸುಲಭವಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಕೊರೋನಾ ತಡೆಗೆ ಹೇಗೆ ಮಾಸ್ಕ್ ಅತಿ ಅಗತ್ಯವೋ ಹಾಗೆ ಆಕಸ್ಮಿಕ ಅಪಘಾತದಿಂದ ರಕ್ಷಣೆಗೆ ಹೆಲ್ಮೆಟ್ ಬೇಕಾಗುತ್ತದೆ. ದಯವಿಟ್ಟು ಸಂಚಾರಿ ನಿಯಮ ಪಾಲಿಸಿ..