'ಕೆರೆಗೆ ನೀರು ತುಂಬಿಸುವುದು ವ್ಯರ್ಥ', ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆಗೆ ರೈತ ಸಂಘ ಆಕ್ರೋಶ
ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಕೆರೆಗೆ ನೀರು ತುಂಬಿಸುವುದು ವ್ಯರ್ಥ ಎಂಬ ಹೇಳಿಕೆಗೆ ಖಂಡಿಸಿ, ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯಿಂದ ರಸ್ತೆ ತಡೆ ನಡೆಸಿ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಚಾಮರಾಜನಗರ (ಜು.15) : ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಕೆರೆಗೆ ನೀರು ತುಂಬಿಸುವುದು ವ್ಯರ್ಥ ಎಂಬ ಹೇಳಿಕೆಗೆ ಖಂಡಿಸಿ, ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯಿಂದ ರಸ್ತೆ ತಡೆ ನಡೆಸಿ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂತೇಮರಹಳ್ಳಿ ರಸ್ತೆಯ ಹಾಪ್ ಕಾಮ್ಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾಯಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಕ್ಷಮಾಪಣೆಗೆ ಆಗ್ರಹಿಸಿದರು, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಮೂಲಕ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೈತರ ಜೀವನಾಡಿಯಾಗಿದ್ದು, ವಲಸೆ ಹೋಗಿದ್ದ ಎಷ್ಟೋ ರೈತ ಕುಟುಂಬಗಳು ಪುನಃ ವ್ಯವಸಾಯಕ್ಕೆ ಮರಳಲು ಈ ಯೋಜನೆಯೇ ಕಾರಣ ಎಂದರು.
ಡಿ.ಕೆ. ಶಿವಕುಮಾರ್‌ಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್
ಇಂತಹ ಮಹತ್ವದ ಯೋಜನೆಯ ಬಗ್ಗೆ ಕೆರೆಗೆ ನೀರು ತುಂಬಿಸುವುದು ವ್ಯರ್ಥ, ಸಣ್ಣ ನೀರಾವರಿ ಇಲಾಖೆಯಿಂದ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಕೆರೆಗಳಿಗೆ ನೀರು ತುಂಬಿಸುತ್ತೇವೆ, ಅದರಿಂದ ಬೆಳೆ ಬೆಳೆದು ಸರ್ಕಾರಕ್ಕೆ ಮಾತ್ರ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಷ್ಟುಅಂತ ವೆಚ್ಚ ಮಾಡುವುದು ಎಂಬ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡನೀಯ. ಇದನ್ನು ರೈತ ಸಂಘ ತೀರ್ವವಾಗಿ ಖಂಡಿಸುತ್ತದೆ ಎಂದರು.
ಹನಿ ನೀರಾವರಿ ಯೋಜನೆ ಕೂಡ ನೀರಿನ ಸದ್ಬಳಕೆಯಲ್ಲಿ ಮಹತ್ವದ ಸ್ಥಾನ ಹೊಂದಿದ್ದು, ಈ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಉಪಯೋಗವಿಲ್ಲ ಎಂದಿರುವುದು ರೈತ ಸಮುದಾಯಕ್ಕೆ ಮಾಡಿರುವ ಅಪಮಾನವಾಗಿದೆ ಎಂದರು.
ಸಾರ್ವಜನಿಕರಿಗೆ ಉಪಯೋಗವಿಲ್ಲದ ಅನೇಕ ಯೋಜನೆಗಳನ್ನು ಸರ್ಕಾರ ಕೈಗೊಂಡು ಸಾಕಷ್ಟುಹಣವನ್ನು ವ್ಯರ್ಥ ಮಾಡಿದ್ದು ದೇಶಕ್ಕೆ ಅನ್ನ ನೀಡುವ ರೈತನ ಯೋಜನೆ ಉಪಯೋಗಕ್ಕೆ ಬಾರದು ಎಂದು ಸದನದಲ್ಲಿ ಹೇಳಿಕೆ ಕೊಟ್ಟಿರುವುದು ಖಂಡನೀಯ. ಆದ್ದರಿಂದ, ಇವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು,
ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕೈಬಿಟ್ಟರೆ ಗಣಿ ಮಾಲೀಕರಿಗೆ ಉಪಯೋಗವಾಗುತ್ತದೆ. ಆದ್ದರಿಂದ, ಡಿ.ಕೆ.ಶಿವಕುಮಾರ್ ಇಂತಹ ಹೇಳಿಕೆ ನೀಡಿದ್ದಾರೆ, ಡಿಕೆಶಿ ತಮ್ಮ ಹೇಳಿಕೆಯನ್ನು ಹಿಂಪಡೆದು ರೈತ ಸಮುದಾಯವನ್ನು ಕ್ಷಮೆ ಕೇಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವರ್ಗಾವಣೆ ದಂಧೆ: ಸದನದಲ್ಲಿ ಬೊಮ್ಮಾಯಿ-ಸಿಎಂ ಭರ್ಜರಿ ಜಟಾಪಟಿ
ಪ್ರತಿಭಟನೆಯಲ್ಲಿ ಪ್ರದಾನ ಕಾರ್ಯದರ್ಶಿ ಡಾ. ಗುರುಪ್ರಸಾದ್, ಕುಂದಕೆರೆ ಸಂಪತ್, ತಂಗವೇಲು, ಮಹೇಶ್, ಶ್ರೀನಿವಾಸ್, ಚಂದ್ರು, ಗುರು, ಚಿಕ್ಕಣ್ಣ, ಮಣಿ, ನಟರಾಜು, ಆನಂದ್, ಷಣ್ಮುಖಪ್ಪ