ಯಾದಗಿರಿ ಜಿಲ್ಲೆಯ ಶಾಲೆಯೊಂದರಲ್ಲಿ ದಲಿತ ಮಕ್ಕಳು ಊಟ ಮಾಡಿದ ತಟ್ಟೆ ತೊಳೆಯಲು ಸಿಬ್ಬಂದಿ ನಿರಾಕರಿಸಿದ್ದರಿಂದ ಬಿಸಿಯೂಟ ಸ್ಥಗಿತಗೊಂಡಿದೆ. ಇದರಿಂದ ಮಕ್ಕಳಿಗೆ ಉಪ್ಪಿಟ್ಟು, ರಾಗಿ ಗಂಜಿ ನೀಡಲಾಗುತ್ತಿದೆ.

ಯಾದಗಿರಿ (ಫೆ.24) : ಸರ್ಕಾರಿ ಶಾಲೆಯ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಹಾಯಕ ಸಿಬ್ಬಂದಿ ನಿರಾಕರಿಸಿದ ಕಾರಣ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಂಡ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಸಮೀಪದ ಕರಕಳ್ಳಿ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಯೊಬ್ಬರು 200 ಸ್ಟೀಲ್‌ ತಟ್ಟೆ ನೀಡಿದ್ದಾರೆ. ಆದರೆ ದಲಿತ ಮಕ್ಕಳು ಊಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಹಾಯಕಿಯರು ನಿರಾಕರಿಸುತ್ತಿದ್ದಾರೆ. 

ಜೊತೆಗೆ ಕೆಲ ಸಿಬ್ಬಂದಿ ದಿಢೀರ್‌ ಕೆಲಸಕ್ಕೆ ರಜೆ ಹಾಕಿ ತೆರಳಿದ್ದಾರೆ. ಹೀಗಾಗಿ ನಾಲ್ಕೈದು ದಿನಗಳಿಂದ ಮಕ್ಕಳಿಗೆ ಬಿಸಿಯೂಟವೇ ಸ್ಥಗಿತಗೊಂಡಿದೆ. ಮಕ್ಕಳು ಹಸಿದ ಹೊಟ್ಟೆಯಲ್ಲಿ ಹೋಗಬಾರದೆಂದು ದಿನಗೂಲಿ ಆಧಾರದ ಮೇಲೆ ಬೇರೆ ಅಡುಗೆ ಸಿಬ್ಬಂದಿಯನ್ನು ಕರೆಸಿ ಮಕ್ಕಳಿಗೆ ಉಪ್ಪಿಟ್ಟು, ರಾಗಿ ಗಂಜಿ ನೀಡಲಾಗುತ್ತಿದೆ ಎಂದು ಗ್ರಾಮದ ಗುರುಲಿಂಗಪ್ಪ ದೊಡ್ಡಮನಿ ‘ಕನ್ನಡಪ್ರಭ’ದೆದುರು ನೋವು ವ್ಯಕ್ತಪಡಿಸಿದ್ದಾರೆ

ಇದನ್ನೂ ಓದಿ: ದಲಿತ ಯುವತಿ ಮನೆ ಸೊಸೆಯಾದಳೆಂದು, ಹಂದಿಗೂಡಿನಲ್ಲಿಟ್ಟು ವಿಷವಿಕ್ಕಿ ಕೊಂದರಾ ಪಾಪಿಗಳು