ಬೆಂಗಳೂರು(ಜೂ.25): ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗುರುವಾರದಿಂದ ಆರಂಭವಾಗುತ್ತಿದೆ. ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಸೋಂಕಿನ ನಡುವೆ ಪರೀಕ್ಷೆ ಬರೆಯಲೇ ಬೇಕಾಗಿದೆ. ವೈಯಕ್ತಿಕ ಸುರಕ್ಷತೆಗಳಾದ ಮಾಸ್ಕ್‌ ಧರಿಸುವಿಕೆ, ಸ್ಯಾನಿಟೈಜರ್‌ ಬಳಕೆ, ದೈಹಿಕ ಅಂತರ ಕಾಪಾಡಿಕೊಂಡರೆ ಯಾವ ಕೊರೋನಾ ವೈರಸ್‌ ನಿಮ್ಮ ಹತ್ತಿರ ಬರಲಾರದು.

"

ಹೀಗಾಗಿ, ಮನೆಯಲ್ಲಿ ತಂದೆ-ತಾಯಿ ನೀಡಿದ ಸಲಹೆ, ಸರ್ಕಾರ ತಿಳಿಸಿದ ಮಾರ್ಗಸೂಚಿಗಳನ್ನು ಪಾಲಿಸಿ ಸಾಕು. ಪರೀಕ್ಷಾ ಕೇಂದ್ರದಲ್ಲಿ ಸಾಕಷ್ಟುಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಬೇಕಾಗಿರುವುದು ಆತ್ಮವಿಶ್ವಾಸ, ಧೈರ್ಯ ಹಾಗೂ ಮೈತುಂಬಾ ಎಚ್ಚರ. ಇವುಗಳೊಂದಿಗೆ ಪರೀಕ್ಷೆಯನ್ನು ಎದುರಿಸಿ, ಗುಡ್‌ ಲಕ್‌ ವಿದ್ಯಾರ್ಥಿಗಳೇ..

ಕೊರೋನಾ ಭೀತಿ ನಡುವೆ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ

ನೀವೇನು ಮಾಡಬೇಕು?:

- ಮನೆಯಿಂದ ಹೊರಡುವಾಗ ಸಾಧ್ಯವಾದಷ್ಟು ವೈಯಕ್ತಿಕ ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಬರಲು ಯತ್ನಿಸಿ

- ಬಸ್‌, ಆಟೋ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬರುವಂತಿದ್ದರೆ, ಮಾಸ್ಕ್‌ ಜೊತೆಗೆ ಕೈಗವಸು ಬಳಸಿ, ಸ್ಯಾನಿಟೈಜರ್‌ ತನ್ನಿ

- ಪರೀಕ್ಷಾ ಕೇಂದ್ರದಲ್ಲಿ ಸಹಪಾಠಿಗಳ ಜೊತೆ ಕೈಕುಲುಕುವ, ಅಪ್ಪಿಕೊಳ್ಳುವ, ಮುಟ್ಟುವ ಮತ್ತು ಎಲ್ಲೆಂದರಲ್ಲಿ ಉಗುಳುವುದು ಬೇಡ

- ಕೆಮ್ಮವಾಗ/ಸೀನುವಾಗ ಮೂಗು ಮತ್ತು ಬಾಯಿಗೆ ಕರವಸ್ತ್ರವನ್ನು ಉಪಯೋಗಿಸಿ ಅಥವಾ ತಮ್ಮ ಕೈಯನ್ನು ಉಪಯೋಗಿಸಿ.

- ಬಾಗಿಲು,ಕಿಟಕಿಗಳು ಸೇರಿದಂತೆ ಇತರೆ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬೇಡಿ.

- ಸಹ ವಿದ್ಯಾರ್ಥಿಗಳಿಂದ ಯಾವುದೇ ವಸ್ತುಗಳನ್ನು ಪಡೆಯಬೇಡಿ, ನೀವೂ ಕೊಡದಿದ್ದರೆ ಉತ್ತಮ.

SSLC ಎಕ್ಸಾಮ್‌: ಕೊರೋನಾ ಸೋಂಕಿತ ಸೇರಿ ನಾಲ್ವರಿಗಿಲ್ಲ ಪರೀಕ್ಷೆ ಬರೆಯಲು ಅವಕಾಶ

- ಪರೀಕ್ಷೆ ವೇಳೆ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೇಲ್ವಿಚಾರಕರಿಗೆ ತಿಳಿಸಿ.

- ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲ್‌, ಆಹಾರದ ಡಬ್ಬಿ ತರುವುದು ಒಳ್ಳೆಯದು

- ಪ್ರವೇಶಪತ್ರ ಹಾಗೂ ಇತರೆ ಸಲಕರಣೆಗಳನ್ನು ತಪ್ಪದೇ ತನ್ನಿ

- ಪರೀಕ್ಷಾ ಕೇಂದ್ರ ಪ್ರವೇಶದ ಹಂತದಿಂದ ನಿರ್ಗಮಿಸುವವರೆಗೂ ದೈಹಿಕ ಅಂತರ ಕಡ್ಡಾಯ ಪಾಲಿಸಿ

- ಆರೋಗ್ಯ ತಪಾಸಣೆಗೆ ಒಳಪಡಬೇಕಿರುವುದರಿಂದ ಪರೀಕ್ಷೆ ಆರಂಭಗೊಳ್ಳುವ ಒಂದೂವರೆ ಗಂಟೆ ಮುಂಚಿತ ಆಗಮಿಸಿ

- ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಲಿರುವುದರಿಂದ ಬೆಳಗ್ಗೆ 9 ಗಂಟೆಗೆ ಹಾಜರಾಗಿ.ಬೆಳಗ್ಗೆ 7.30ಕ್ಕೆ ಪರೀಕ್ಷಾ ಕೇಂದ್ರ ತೆರೆದಿರುತ್ತದೆ

- ಆರೋಗ್ಯ ತಪಾಸಣೆಗೂ ಮುನ್ನ ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛ ಮಾಡಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್‌ ಧರಿಸಿ

- ತಪಾಸಣೆ ಬಳಿಕವೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ತೆರಳಿ.

- ವಿದ್ಯಾರ್ಥಿಗಳು ಪರಸ್ಪರ ಒಂದು ಮೀಟರ್‌ ಅಂತರ ಕಾಪಾಡಿಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು

- ಮಾಸ್ಕ್‌ ಧರಿಸಲು ಮರೆತಿದ್ದಲ್ಲಿ ಆರೋಗ್ಯ ತಪಾಸಣಾ ಕೌಂಟರ್‌ನಲ್ಲಿ ಮಾಸ್ಕ್‌ ಪಡೆಯಬಹುದು.