SSLC ಎಕ್ಸಾಮ್‌: ಕೊರೋನಾ ಸೋಂಕಿತ ಸೇರಿ ನಾಲ್ವರಿಗಿಲ್ಲ ಪರೀಕ್ಷೆ ಬರೆಯಲು ಅವಕಾಶ

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಂಟೈನ್ಮೆಂಟ್‌ ಝೋನ್‌ನಿಂದ ಬಂದು ಪರೀಕ್ಷೆ ಬರೆಯಲಿರುವ 20 ವಿದ್ಯಾರ್ಥಿಗಳು| ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 44 ವಿದ್ಯಾರ್ಥಿಗಳು ಕಂಟೈನ್ಮೆಂಟ್‌ ಝೋನ್‌ನಿಂದ ಬಂದು ಪರೀಕ್ಷೆ ಬರೆಯಲಿದ್ದಾರೆ| ಕಂಟೈನ್ಮೆಂಟ್‌ ಝೋನ್‌ನಿಂದ ಬಂದು ಪರೀಕ್ಷೆ ಬರೆಯುವವರಿಗೆ ಆಯಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ|

Did Not Allowed Attend SSLC Exam Four Studentns in Belagavi District

ಬೆಳಗಾವಿ(ಜೂ.25): ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಓರ್ವ ವಿದ್ಯಾರ್ಥಿಗೆ ಕೊರೋನಾ ಸೋಂಕು ಇರುವುದರಿಂದ ಅವಕಾಶ ನೀಡಿಲ್ಲ. ಅಲ್ಲದೇ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಂತಹ ಮೂವರು ವಿದ್ಯಾರ್ಥಿಗಳಿಗೆ ಅವಕಾಶ ನೀಡಿಲ್ಲ. 

ಇನ್ನೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಂಟೈನ್ಮೆಂಟ್‌ ಝೋನ್‌ನಿಂದ ಬಂದು 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 44 ವಿದ್ಯಾರ್ಥಿಗಳು ಕಂಟೈನ್ಮೆಂಟ್‌ ಝೋನ್‌ನಿಂದ ಬಂದು ಪರೀಕ್ಷೆ ಬರೆಯಲಿದ್ದಾರೆ. 

SSLC ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಿಟ್‌ ನೀಡಿದ ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್

ಕಂಟೈನ್ಮೆಂಟ್‌ ಝೋನ್‌ನಿಂದ ಬಂದು ಪರೀಕ್ಷೆ ಬರೆಯುವವರಿಗೆ ಆಯಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮುಂಜಾಗ್ರತ ಕ್ರಮವಾಗಿ ಕಂಟೈನ್ಮೆಂಟ್‌ ಝೋನ್‌ನಿಂದ ಬರುವ ವಿದ್ಯಾರ್ಥಿಗಳಿಗೆ ಎನ್‌-95 ಮಾಸ್ಕ್‌ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.
 

Latest Videos
Follow Us:
Download App:
  • android
  • ios