Asianet Suvarna News Asianet Suvarna News

'ಮೋದಿ ಗೆಲ್ಲಿಸಿ ಭಾರತ ಉಳಿಸಿ' ; ಶ್ರೀರಾಮ ಸೇನೆಯಿಂದ ಅಭಿಯಾನ ಶುರು: ಪ್ರಮೋದ್ ಮುತಾಲಿಕ್

ಕೆಇಎ ಪರೀಕ್ಷೆಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಹಿಜಾಬ್ ಧರಿಸಲು ಅವಕಾಶ ಕೊಟ್ಟಿದ್ದು ಕೋರ್ಟಿನ ಆದೇಶದ ಉಲ್ಲಂಘನೆಯಾಗಿದೆ. ಹಿಜಾಬ್ ಕಾಲೇಜು ಕಂಪೌಂಡ ಅವರಿಗೆ ಮಾತ್ರ ಧರಿಸಿ ಬರಬೇಕು ಎಂದು ಕೋರ್ಟ ಸ್ಪಷ್ಟನೆ ನೀಡಿದೆ. ಇದು ಆರೆಸ್ಸೆಸ್ , ಶ್ರೀ ರಾಮಸೇನೆ, ಬಿಜೆಪಿ ಆದೇಶವಲ್ಲ, ನ್ಯಾಯಾಲಯದ ಆದೇಶವಿದ್ದರೂ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ಹಿಂದೂ ಹೆಣ್ಣು ಮಕ್ಕಳ ತಾಳಿ ಬಿಚ್ಚಿಸಿದ್ದಾರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಆಕ್ರೋಶ.

Sriramsene president pramod muthalik outraged agains antihindu congress government at belagavi rav
Author
First Published Nov 18, 2023, 1:26 PM IST

ಚಿಕ್ಕೋಡಿ (ನ.19): ಗೋರಕ್ಷಣೆ ಮಾಡುವ ಹಿಂದೂ ಕಾರ್ಯಕರ್ತರ ವಿರುದ್ದ ಕಾಂಗ್ರೆಸ್ ಸರಕಾರ ಕ್ರಿಮಿನಲ್ ಕೇಸ್ ದಾಖಲಿಸುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಶ್ರೀ ರಾಮ ಸೇನಾ ಕಾರ್ಯಕರ್ತರು 30 ಟನ್ ಗೋಮಾಂಸ ಸಾಗಾಟ ಹಿಡಿದಿದ್ದಕ್ಕೆ ಕಾಂಗ್ರೆಸ್ ನೀಚ ಸರಕಾರ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ಬಿಜೆಪಿ ಸರಕಾರದಲ್ಲಿ ಇದ್ದಂತ ಕಾನೂನುಗಳನ್ನ ವಾಪಸ್ ಪಡೆಯುವದಾಗಿ ಕಾಂಗ್ರೆಸ್ ಸರಕಾರ ಹೇಳಿದೆ. ಗೋ ಹತ್ಯೆ ನಿಷೇದ, ಮತಾಂತರ ನಿಷೇಧ ಕಾನೂನು ರದ್ದು ಮಾಡುವದಾಗಿ ಹೇಳಿದೆ. ಗಾಂಧೀಜಿಯವರ ಪೋಟೋ ಹಾಕಲು ಕಾಂಗ್ರೆಸ್ ಪಕ್ಷ ನಾಲಾಯಕ್. ಹಿಂದೂ ವಿರೋಧಿ ಕಾಂಗ್ರೆಸ್ ನೀತಿ ಬಹಳ ದಿನ ನಡೆಯುವುದಿಲ್ಲ. ಸರಕಾರದ ವಿರುದ್ದ ಶ್ರೀ ರಾಮಸೇನೆ ರಾಜ್ಯಾದ್ಯಂತ ಆಂದೋಲನ ನಡೆಸಲಿದೆ ಎಂದು ಎಚ್ಚರಿಸಿದರು.

48 ದಿನಗಳ ಬಳಿಕ ಇಂದು ಶ್ರೀರಾಮ ಸೇನೆ ಕಾರ್ಯಕರ್ತರ ಬಿಡುಗಡೆ; ಪರಪ್ಪನ ಆಗ್ರಹಾರಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್

ಕೆಇಎ ಪರೀಕ್ಷೆಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ಹಿಜಾಬ್ ಧರಿಸಲು ಅವಕಾಶ ಕೊಟ್ಟಿದ್ದು ಕೋರ್ಟಿನ ಆದೇಶದ ಉಲ್ಲಂಘನೆಯಾಗಿದೆ. ಹಿಜಾಬ್ ಕಾಲೇಜು ಕಂಪೌಂಡ ಅವರಿಗೆ ಮಾತ್ರ ಧರಿಸಿ ಬರಬೇಕು ಎಂದು ಕೋರ್ಟ ಸ್ಪಷ್ಟನೆ ನೀಡಿದೆ. ಇದು ಆರೆಸ್ಸೆಸ್ , ಶ್ರೀ ರಾಮಸೇನೆ, ಬಿಜೆಪಿ ಆದೇಶವಲ್ಲ, ನ್ಯಾಯಾಲಯದ ಆದೇಶವಿದ್ದರೂ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ಹಿಂದೂ ಹೆಣ್ಣು ಮಕ್ಕಳ ತಾಳಿ ಬಿಚ್ಚಿಸಿದ್ದಾರೆ, ಉಂಗುರು, ಚೈನ್,ಕಾಲುಂಗರ ಬಿಚ್ಚಿಸಿದ್ದಾರೆ. ಹಿಜಾಬ್ ಧರಿಸಿ ಒಳಗಡೆ ನಕಲು ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಸರಕಾರದ ಅತಿಯಾದ ಮುಸ್ಲಿಂ ತುಷ್ಟಿಕರಣವನ್ನ ನಾವು ಖಂಡಿಸುತ್ತೇವೆ. ಸರಕಾರದ ನಿರ್ದಾರದ ವಿರುದ್ದ ಹೈ ಕೋರ್ಟದಲ್ಲಿ ಚಾಲೆಂಜ್ ಮಾಡುತ್ತೇವೆ. ತಾಳಿಯನ್ನ ಹಿಂದೂಗಳಲ್ಲಿ ಯಾವುದೇ ಸಂದರ್ಭದಲ್ಲೂ ತೆಗೆಯುವದಿಲ್ಲ. ಗಂಡ ಸತ್ತ ನಂತರ ಮಾತ್ರ ತಾಳಿ ತೆಗೆಯುತ್ತಾರೆ. ಹಿಂದೂ ಸಂಪ್ರದಾಕ್ಕೂ ಕಾಂಗ್ರೆಸ್ ಧಕ್ಕೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ:

ಶ್ರೀ ರಾಮಸೇನಾ ಸಂಘಟನೆಯಿಂದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಿಂದ ಇಡೀ ರಾಜ್ಯಾದ್ಯಂತ 224 ಕ್ಷೇತ್ರಗಳಲ್ಲಿ ರ್ಯಾಲಿ ಸಮಾವೇಶಗಳು ಆಯೋಜನೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸಾಧನೆ ಹಾಗೂ ಮುಂದಿನ‌ ಯೋಜನೆಗಳನ್ನ ಅಭಿಯಾನದ ಮೂಲಕ ತಿಳಿಸಲಾಗುತ್ತದೆ. ಡಿಸೆಂಬರ 31ರಂದು ಚಿಕ್ಕೋಡಿಯಿಂದಲೇ ಅಭಿಯಾನ ಉದ್ಘಾಟನೆ ಮತ್ತು ಆರಂಭವಾಗಲಿದೆ. ತೇಜಸ್ವಿ ಸೂರ್ಯ, ಪ್ರತಾಪ ಸಿಂಹ್, ಶೋಭಾ ಕರಂದ್ಲಾಜೆ ಅವರನ್ನ ಆಹ್ವಾನಿಸಲಾಗಿದೆ. 

ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನ ಶಾಂತಿಯುತ ತೆರೆ; ಪೊಲೀಸ್ ಬಿಗಿಭದ್ರತೆ, ಮಳೆ ನಡುವೆ ಭಕ್ತರಿಂದ ದತ್ತಪಾದುಕೆ ದರ್ಶನ

ಸಭಾಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ನೇಮಕ ಮಾಡಿದ್ದಕ್ಕೆ ಬಿಜೆಪಿ ಶಾಸಕರು ಕೈ ಮುಗಿಯುತ್ತಾರೆ ಎಂಬ ಶಾಸಕ ಜಮೀರ ಅಹಮ್ಮದ ಹೇಳಿಕೆಗೆ ಆಕ್ರೋಶ ಹೊರಹಾಕಿದ  ಪ್ರಮೋದ ಮುತಾಲಿಕ್, ಶಾಸಕ ಜಮೀರ ಅಹಮ್ಮದ್ ಒಬ್ಬ ಮತಾಂಧ. ಜಮೀರ ಅಹಮ್ಮದ ವಿರುದ್ಧ ಪ್ರಕರಣ ದಾಖಲಿಸಬೇಕು. ಜಮೀರ ಅಹಮ್ಮದ ಅವರ ಹೇಳಿಕೆ ನಾನು ವಿರೋಧಿಸುತ್ತೇನೆ. ಸಭಾಧ್ಯಕ್ಷ ಸ್ಥಾನ ಅತ್ಯಂತ ಪವಿತ್ರವಾದದ್ದು. ಆ ಸ್ಥಾನದಲ್ಲಿ ಕೂತವರು ವ್ಯಕ್ತಿಯಲ್ಲ ಅದೊಂದು ಶಕ್ತಿ. ಜಾತಿ, ಪಕ್ಷಧರ್ಮ ಭಾಷೆ ಬೇಧವಿಲ್ಲದೇ ಕುಳಿತಿರುವ ವ್ಯಕ್ತಿಯನ್ನ ಮುಸ್ಲಿಂ ಎಂದು ಗುರುತಿಸಿದ್ದು ಸಂವಿಧಾನ ವಿರೋಧಿ. ಜಮೀರ್ ಹೇಳಿಕೆ ಮೇಲೆ ಕ್ರಮ ಕೈಗೊಂಡು ಅವರನ್ನ ಜೈಲಿಗೆ ಹಾಕಬೇಕು. ಮತಾಂಧತೆಯ ಪ್ರವೃತ್ತಿ ಅತಿಯಾಗಿ ಜಮೀರ ಅಹಮ್ಮದ ಗೆ ಮುಸ್ಲಿಂ ಭೂತ ಹಿಡಿದಿದೆ. ಈ ಭೂತ ಸರಿಯಲ್ಲ, ಭಾರತದಲ್ಲಿ ಈ ರೀತಿ ಹೇಳುವುದು ಸರಿಯಲ್ಲ ಪಾಕಿಸ್ಥಾನದ, ಅಪಘಾನಿಸ್ತಾನದಲ್ಲಿ ಹೇಳಲಿ. ಸಂವಿದಾನಬದ್ಧ ಸಭಾಧ್ಯಕ್ಷ ಪವಿತ್ರ ಸ್ಥಾನಕ್ಕೆ ಅಪಚಾರ ಮಾಡಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಬಿಜೆಪಿ ಅವರು ಸ್ವಲ್ಪ ಬಾಯಿ ತೆಗೆದು ಅಂತಹ ವ್ಯಕ್ತಿ ವಿರುದ್ದ ಹೋರಾಟ ನಡೆಸಲಿ. ಜಮೀರ ಅಹ್ಮದ್ ಅವರ ಶಾಸಕ ಸ್ಥಾನ ರದ್ದಾಗುವ ವರೆಗೂ ಬಿಜೆಪಿ ಅವರು ಹೋರಾಟ ಮಾಡಲಿ ಎಂದು ಆಗ್ರಹಿಸಿದರು.

Follow Us:
Download App:
  • android
  • ios