ಮಾಜಿ ಸಚಿವ ಕೈ ನಾಯಕ ಪ್ರಿಯಾಂಕ ಖರ್ಗೆ ಹೊಸ ಬಾಂಬ್
- ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕಿ (ಶ್ರೀಕೃಷ್ಣ)ಯನ್ನು ಪೊಲೀಸರು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದರು.
- ಆ ವೇಳೆ ಆತನಿಗೆ ಪೊಲೀಸರು ಡ್ರಗ್ಸ್ ನೀಡಿದ್ದಾರೆ ಎಂದು ಶ್ರೀಕಿ ತಂದೆ ಕೋರ್ಟಿಗೆ ರಿರ್ಟ್ ಅರ್ಜಿ ಸಲ್ಲಿಸಿದ್ದಾರೆ.
- ಪೊಲೀಸ್ ವಶದಲ್ಲಿ ಡ್ರಗ್ಸ್ ಸೇವಿಸಿದ್ದಾಗಿ ಶ್ರೀಕಿ ಜಡ್ಜ್ ಮುಂದೆಯೇ ಹೇಳಿದ್ದಾರೆ
ಬೆಂಗಳೂರು (ನ.13): ಬಿಟ್‌ಕಾಯಿನ್ (Bitcoin) ಹಗರಣದ ಆರೋಪಿ ಶ್ರೀಕಿ (ಶ್ರೀಕೃಷ್ಣ)ಯನ್ನು ಪೊಲೀಸರು (Police) ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದರು. ಆ ವೇಳೆ ಆತನಿಗೆ ಪೊಲೀಸರು ಡ್ರಗ್ಸ್ (Drugs) ನೀಡಿದ್ದಾರೆ ಎಂದು ಶ್ರೀಕಿ ತಂದೆ ಕೋರ್ಟಿಗೆ (Court) ರಿರ್ಟ್ ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ವಶದಲ್ಲಿ ಡ್ರಗ್ಸ್ ಸೇವಿಸಿದ್ದಾಗಿ ಶ್ರೀಕಿ ಜಡ್ಜ್ (Judge) ಮುಂದೆಯೇ ಹೇಳಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಹೊಸ ಬಾಂಬ್ ಸಿಡಿಸಿದ್ದಾರೆ.
ಮಾದಕ ವಸ್ತು ಸೇವನೆ ಖಚಿತಪಡಿಸಿಕೊಳ್ಳಲು ಮೂತ್ರ ಮತ್ತು ರಕ್ಷ ಪರೀಕ್ಷೆ ನಡೆಸುವಂತೆ ನ್ಯಾಯಾಲಯ ಸೂಚಿಸಿದ್ದರೂ ಪೊಲೀಸರು (Police) ಶ್ರೀಕಿ ಹೊಟ್ಟೆ ತೊಳೆಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಪೊಲೀಸರೇ ಆರೋಪಿಗೆ ಡ್ರಗ್ಸ್ ನೀಡಿ ಬಿಟ್ ಕಾಯಿನ್ ಲಪಟಾಯಿಸಿದರಾ ಎಂಬ ಅನುಮಾನ ಮೂಡುತ್ತದೆ ಎಂದು ಆರೋಪಿಸಿದ್ದಾರೆ.
"
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ಜ.11ರಂದು ಶ್ರೀಕಿ ಅವರ ತಂದೆ ಗೋಪಾಲಕೃಷ್ಣ ಅವರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿ ತಮ್ಮ ಪುತ್ರ ಪೊಲೀಸರ ವಶದಲ್ಲಿದ್ದಾಗ ಡ್ರಗ್ಸ್ ಸೇವಿಸಿರುವುದಾಗಿ ಹೇಳಿದ್ದಾರೆ. ನ್ಯಾಯಾಧೀಶರ ವಿಚಾರಣೆ ವೇಳೆ ಶ್ರೀಕಿಯೂ ಪೊಲೀಸರ ವಶದಲ್ಲಿದ್ದಾಗ ಡ್ರಗ್ಸ್ ಸೇವಿಸಿರುವುದಾಗಿ ಹೇಳಿದ್ದಾರೆ ಎಂದರು.
ವಿಚಾರಣೆ ವೇಳೆ ನ್ಯಾಯಾಧೀಶರು ಪೊಲೀಸ್ ವಶದಲ್ಲಿದ್ದಾಗ ಡ್ರಗ್ಸ್ ಹೇಗೆ ಸಿಕ್ಕಿತು ಎಂಬ ಕಾರಣಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Hospital) ಆರೋಪಿಯ ಮೂತ್ರ ಹಾಗೂ ರಕ್ತ ಪರೀಕ್ಷೆ ನಡೆಸುವಂತೆ ಆದೇಶ ಮಾಡುತ್ತಾರೆ. ಆದರೆ ಅದರ ಬದಲಿಗೆ ಬೆಂಗಳೂರು (Bengaluru) ವೈದ್ಯ ಕಾಲೇಜಿಗೆ ಕರೆದೊಯ್ಯುವ ಪೊಲೀಸರು(Police) ರಕ್ತ, ಮೂತ್ರ ಪರೀಕ್ಷೆ ನಡೆಸುವ ಬದಲು ಹೊಟ್ಟೆ ತೊಳೆಸಲು ಶಿಫಾರಸು ಮಾಡುತ್ತಾರೆ.
ಆರೋಪಿಯ ಹೊಟ್ಟೆ ತೊಳೆಸಿದ್ದು ಏಕೆ? ಎಂದು ಪ್ರಶ್ನಿಸಿದರು. ಪೊಲೀಸರು (Police) ಅಂತಿಮವಾಗಿ ರಕ್ತ ಹಾಗೂ ಮೂತ್ರ ಪರೀಕ್ಷೆ ಮಾಡಿಸುವುದೇ ಇಲ್ಲ. ಇದೆಲ್ಲವನ್ನೂ ನೋಡಿದರೆ ಪೊಲೀಸರು ತಮ್ಮ ವಶದಲ್ಲಿದ್ದಾಗ ಡ್ರಗ್‌ಸ್ ನೀಡಿ ಬಿಟ್‌ಕಾಯಿನ್ ಹ್ಯಾಕ್ ಮಾಡಿಸಿದರಾ? ಎಂಬ ಅನುಮಾನ ಮೂಡುತ್ತದೆ.
ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸರ್ಕಾರವೇ ಒದಗಿಸಬೇಕು ಎಂದು ಆಗ್ರಹಿಸಿದರು. ಇನ್ನು ಫೆ.12ರಂದು ಶ್ರೀಕಿ ತಂದೆ ಮತ್ತೊಂದು ರಿಟ್ ಸಲ್ಲಿಸಿ, ರಾಜ್ಯ ಸರ್ಕಾರದ (karnataka Govt) ಸಂಸ್ಥೆಗಳ ಬಗ್ಗೆ ನಂಬಿಕೆ ಇಲ್ಲ ಎಂದಿದ್ದರು ಎಂದರು.
ಅಧಿಕಾರಿಗಳಿಂದಲೇ ನಮಗೆ ದಾಖಲೆ ಸಿಗುತ್ತವೆ : ಬಿಟ್ ಕಾಯಿನ್ ಪ್ರಕರಣ (Bitcoin Scam) ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದ್ದು ಅನುಕೂಲ ಆಗುವ ಅಂಶಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದೆ. ಇದು ಹೆಚ್ಚು ಕಾಲ ನಡೆಯುವುದಿಲ್ಲ. ನಾವು 100 ಪರ್ಸೆಂಟ್ ದಾಖಲೆ ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ನಾವೇ ಹೋಗಿ ಯಾವುದೇ ದಾಖಲೆ ಹುಡುಕುತ್ತಿಲ್ಲ. ಸರಕಾರದ ಮಂತ್ರಿಗಳು, ಅಧಿಕಾರಿಗಳೇ ಒದಗಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣ ಗಂಭೀರ ವಿಚಾರ ಅಲ್ಲದಿದ್ದರೆ ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆ ಚರ್ಚೆ ಮಾಡುವ ಅಗತ್ಯವೇನಿತ್ತು? ಇದು ಪ್ರಮುಖ ವಿಚಾರವಲ್ಲ ಎಂದು ಪ್ರಧಾನಿಗಳು (Prime Minister) ಹೇಳಿರಬಹುದು. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಆದ್ದರಿಂದ ಪಕ್ಷ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಟ್ ಕಾಯಿನ್ ಎಲ್ಲಿವೆ?: ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ (Congress) ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿಕೆ ನೀಡಿದ್ದಾರೆ. ಹಾಗಾದರೆ ಎಲ್ಲರ ಹೆಸರನ್ನೂ ಬಯಲು ಮಾಡಲಿ, ಅವರನ್ನೂ ಬಂಧಿಸಲಿ. ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಹೇಳುತ್ತಾರೆ. 31 ಬಿಟ್ ಕಾಯಿನ್ ವಶಪಡಿಸಿಕೊಂಡಿರುವುದಾಗಿ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಹಾಗಾದರೆ ಆ ಬಿಟ್ ಕಾಯಿನ್ ಈಗ ಯಾರ ಬಳಿ ಇದೆ, ಯಾರು ಸೀಜ್ ಮಾಡಿದ್ದಾರೆ, ಅದರ ಪಂಚನಾಮ ಆಗಿದೆಯೇ ಎಂಬುದನ್ನು ಸರ್ಕಾರ ಜನರ ಮುಂದೆ ಇಡಬೇಕು ಎಂದು ಆಗ್ರಹಿಸಿದರು.
ಜೋರಾಯ್ತು ಬಿಟ್ ಕಾಯಿನ್ ಬಡಿದಾಟ: ಅಶ್ವತ್ಥ್ ನಾರಾಯಣರಿಂದ ಒಂದು ಸವಾಲು
ಪೊಲೀಸ್ ಅಧಿಕಾರಿಗಳ (Police officers) ಸಂಭಾಷಣೆ ಆಡಿಯೋ ಬಿಡುಗಡೆಯಾಗಿದ್ದು, ‘ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು, ಸಚಿವರೂ ಭಾಗಿಯಾಗಿದ್ದಾರೆ’ ಎಂಬ ಮಾತುಗಳಿವೆ. ಆದ್ದರಿಂದ ಸಮಯ ಬಂದಾಗ ಎಲ್ಲ ವಿಚಾರಗಳೂ ಹೊರಬರುತ್ತವೆ ಎಂದು ಪ್ರತಿಕ್ರಿಯಿಸಿದರು.