Asianet Suvarna News Asianet Suvarna News

ಡ್ರಗ್ಸ್‌ ಕೇಸಲ್ಲಿ ವಾಟ್ಸಾಪ್‌ ಚಾಟ್‌ ಮಾತ್ರವೇ ಸಾಕ್ಷಿಯಲ್ಲ: ಕೋರ್ಟ್‌

  • ಕೇವಲ ವಾಟ್ಸಾಪ್‌ ಚಾಟ್‌ ಮಾತ್ರವೇ, ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವುದಿಲ್ಲ
  • ಸ್ಥಳೀಯ ಮಾದಕ ವಸ್ತು ನಿಯಂತ್ರಣ ಕೋರ್ಟ್‌ ಹೇಳಿಕೆ
whatsapp chat is not the major evidence for Drug case Says Court snr
Author
Bengaluru, First Published Nov 2, 2021, 12:25 PM IST
  • Facebook
  • Twitter
  • Whatsapp

ಮುಂಬೈ (ನ.02): ಕೇವಲ ವಾಟ್ಸಾಪ್‌ ಚಾಟ್‌ (whatsapp chat) ಮಾತ್ರವೇ, ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವುದಿಲ್ಲ ಎಂದು ಸ್ಥಳೀಯ ಮಾದಕ ವಸ್ತು ನಿಯಂತ್ರಣ ಕೋರ್ಟ್‌ (Court) ಹೇಳಿದೆ. ಅಲ್ಲದೆ, ಇದೇ ಕಾರಣ ನೀಡಿ ಶಾರುಖ್‌ (sharuk khan) ಪುತ್ರ ಆರ್ಯನ್‌ಗೆ (Aryan khan) ಮಾದಕ ವಸ್ತು ಪೂರೈಸಿದ ಆರೋಪದಲ್ಲಿ ಬಂಧಿತ ಅಚಿತ್‌ ಕುಮಾರ್‌ಗೆ (Achit kumar) ಜಾಮೀನು ನೀಡಿದೆ.

ಆರ್ಯನ್‌ ನೀಡಿದ ಹೇಳಿಕೆ ಆಧಾರದಲ್ಲಿ ಅಚಿತ್‌ನನ್ನು ಅ.6ರಂದು ಎನ್‌ಸಿಬಿ (NCB) ಅಧಿಕಾರಿಗಳು ಬಂಧಿಸಿದ್ದರು. ಜೊತೆಗೆ ಆರ್ಯನ್‌ಗೆ ಅಚಿತ್‌ ಡ್ರಗ್ಸ್‌ ಪೂರೈಸಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಇಬ್ಬರ ನಡುವೆ ನಡೆದ ವಾಟ್ಸಾಪ್‌ ಚಾಟ್‌ ಅನ್ನು ಸಾಕ್ಷ್ಯವನ್ನಾಗಿ ನೀಡಿದ್ದರು. ಜೊತೆಗೆ ಅಚಿತ್‌ ಮನೆಯಲ್ಲಿ 2.6 ಗ್ರಾಂ ನಷ್ಟು ಚರಸ್‌ ವಶಪಡಿಸಿಕೊಂಡಿದ್ದಾಗಿ ಹೇಳಿದ್ದರು.

Drugs Case: ಜೈಲಿಂದ ಬಂದ ಮಗನಿಗೆ ಶಾರೂಖ್-ಗೌರಿಯಿಂದ ಕೌನ್ಸೆಲಿಂಗ್, ಡಯೆಟ್

ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ (Court), ಕೇವಲ ವಾಟ್ಸಾಪ್‌ ಚಾಟ್‌ನಿಂದಾಗಿ ಅಚಿತ್‌ ಡ್ರಗ್‌ ಪೆಡ್ಲರ್‌ ಎಂದು ಸಾಬೀತಾಗುವುದಿಲ್ಲ. ಅಲ್ಲದೆ ಇದೇ ಪ್ರಕರಣದ ಆರೋಪಿಗಳಾದ ಆರ್ಯನ್‌ ಸೇರಿ ಒಟ್ಟು ಮೂವರಿಗೆ ಜಾಮೀನು (Bail) ಸಿಕ್ಕಿದೆ. ಹೀಗಾಗಿ ಅಚಿತ್‌ ಕೂಡಾ ಜಾಮೀನಿಗೆ ಅರ್ಹನಾಗಿದ್ದಾನೆ ಎಂದು ಹೇಳಿ ಜಾಮೀನು ಮುಂಜೂರ ಮಾಡಿತು. ಜೊತೆಗೆ ಅಚಿತ್‌ ಕುಮಾರ್‌ ಮೇಲಿನ ಆರೋಪ ಸಾಬೀತಿಗೆ ಇನ್ನಷ್ಟು ಖಚಿತ ಸಾಕ್ಷ್ಯಗಳನ್ನು ಸಂಗ್ರಹಿಸಿ, ಒದಗಿಸದ ಎನ್‌ಸಿಬಿ (NCB) ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಇದರೊಂದಿಗೆ ಐಷಾರಾಮಿ ಹಡಗಿನಲ್ಲಿ (cruise ship) ಮಾದಕ ವಸ್ತು (Drug) ಪ್ರಕರಣ ಸಂಬಂಧ ಬಂಧಿತ 20 ಜನರ ಪೈಕಿ ಇದುವರೆಗೆ 14 ಜನರಿಗೆ ಜಾಮೀನು ಸಿಕ್ಕಿದಂತೆ ಆಯಿತು.

28 ದಿನಗಳ ಬಳಿಕ ಮನೆಗೆ ಬಂದ ಶಾರುಖ್ ಪುತ್ರ

 

ಬಾಲಿವುಡ್ (Bollywood) ಕಿಂಗ್ ಶಾರುಖ್‌ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್‌ ವಿಲಾಸಿ ಹಡಗಿನಲ್ಲಿ ಮಾದಕ ವಸ್ತುವಿನೊಂದಿಗೆ (Drugs) ಪತ್ತೆ ಪ್ರಕರಣದಲ್ಲಿ ಆರೋಪಿಯಾಗಿ, ಜೈಲು (jail) ಸೇರಿ ಮೂರು ವಾರಗಳು ಕಳೆದ ನಂತರ ಬಾಮೀನು (bail) ಪಡೆದುಕೊಂಡು ಹೊರ ಬಂದಿದ್ದಾರೆ. ಗುರುವಾರವೇ ಆರ್ಯನ್‌ ಖಾನ್‌ಗೆ (Aryan Khan) ಜಾಮೀನು ಸಿಕಿತ್ತು. ಆದರೆ ಇಂದು ಬಿಡುಗಡೆ ಮಾಡಲಾಗಿತ್ತು. ರಸ್ತೆಯಲ್ಲೂ ಲಕ್ಷಾಂತರ ಜನರು, ಪೊಲೀಸ್ ಭದ್ರತೆ (Police protection) ಎಲ್ಲವೂ ಸೇರಿಕೊಂಡು ಮನ್ನತ್‌ಗೆ ಆರ್ಯನ್‌ನ ಬರ ಮಾಡಿಕೊಂಡರು. 

Aryan Khanಗೆ ಬೇಲ್: ವಕೀಲರ ತಂಡದ ಜೊತೆ ಪೋಸ್ ಕೊಟ್ಟ ಶಾರೂಖ್ ಮುಖದಲ್ಲಿ ಬಿಗ್ ಸ್ಮೈಲ್

ಶುಕ್ರವಾರ (Friday) ವಕೀಲರು ಪೇಪರ್‌ಗಳನ್ನು ಕೋರ್ಟ್‌ಗೆ ನೀಡಲು ತಡ ಮಾಡಿದ ಕಾರಣ ಆರ್ಯನ್‌ ಖಾನ್‌‌ನನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಶಾರುಖ್ ಖಾನ್ ಬಾಡಿಗಾರ್ಡ್‌ ಆರ್ಯನ್‌ನ ಜೈಲ್‌ ಗೇಟಿನಿಂದ ಕಾರಿನವರೆಗೂ ಸಂಪೂರ್ಣ ರಕ್ಷಣೆಯಿಂದ ಕರೆದುಕೊಂಡು ಹೊರ ಬಂದರು.  ಮೂರು ವಾರಗಳ ನಂತರ ಮನೆಗೆ ಮಗ ಬರುತ್ತಿರುವ ಕಾರಣ ಮನ್ನತ್‌ನಲ್ಲಿ (Mannat house) ಸಹಿ ತಿಂಡಿ ಮಾಡಲಾಗಿದೆ. ಆರ್ಯನ್ ಜೈಲು ಸೇರಿದ ಬಳಿಕ ತಾಯಿ ಗೌರಿ ಖಾನ್‌ (Gauri Khan) ಮನೆಯಲ್ಲಿ ಯಾವುದೇ ರೀತಿ ಸಿಹಿ ತಿಂಡಿ ಮತ್ತು ಸಂಭ್ರಮ ಆಚರಣೆ ಮಾಡಬಾರದು ಎಂದು ಆರ್ಡರ್ ಮಾಡಿದ್ದರು. ಹೀಗಾಗಿ ಇಂದು ಸ್ವೀಟ್ಸ್ ಮಾಡಲಾಗಿದೆ. 

ಅಪರ ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿಕೊಂಡಿರುವ ಕಾರಣ ಶಾರುಖ್ ಮನೆಗೂ ಹೆಚ್ಚಿನ ಭದ್ರತೆ ನೀಡಲಾಗಿದೆ. ಆರ್ಯನ್ ಖಾನ್‌ ಬಂಗಲೆ ಮನ್ನತ್‌ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬಾಲಿವುಡ್ ನಟಿ ಜೂಹಿ ಜಾವ್ಲಾ (Juhi Chawla) ಜಾಮೀನಿಗೆ ಶೂರಿಟಿ ಹಾಕಿದ್ದಾರೆ. 'ಜಾಮೀನು ಔಪಚಾರಿಕತೆಗಳನ್ನು ಪೂರ್ಣಗೊಳಿಸಕಾಗಿದೆ. ಜೂಹಿ ಚಾವ್ಲಾ ಅವರು ನೀಡಿರುವ ಭದ್ರತೆಯನ್ನು ನ್ಯಾಯಾಲಯವು ಒಪ್ಪಿಕೊಂಡಿದೆ. ಆರ್ಯನ್ ಖಾನ್‌ರನ್ನು ಚಾವ್ಲಾ ಬಾಲ್ಯದಿಂದಲೂ ನೋಡಿದ್ದಾರೆ,' ಎಂದು ಆರ್ಯನ್ ಜಾಮೀನಿಗಾಗಿ ಕೋರ್ಟಿನಲ್ಲಿ ವಾದಿಸಿದೆ ಕನ್ನಡ ಸತೀಶ್ ಮಾನೆಶಿಂಧೆ ಹೇಳಿದ್ದಾರೆ. 

 

Follow Us:
Download App:
  • android
  • ios