Asianet Suvarna News Asianet Suvarna News

ಲವ್ ಜಿಹಾದ್‌ಗೆ ಸಿಲುಕಿದ ಹಿಂದೂ ಹೆಣ್ಣುಮಕ್ಕಳ ರಕ್ಷಣೆಗೆ ಸಹಾಯವಾಣಿ ಆರಂಭಿಸಿದ ಶ್ರೀರಾಮ ಸೇನೆ

ರಾಜ್ಯದಲ್ಲಿ ಲವ್ ಜಿಹಾದ್‌ಗೆ ಸಿಲುಕಿದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ 9090443444 ಆರಂಭಿಸಲಾಗಿದೆ.

Sri Rama Sena helpline started for the protection of Hindu girls caught in love jihad sat
Author
First Published May 29, 2024, 5:49 PM IST

ಬೆಂಗಳೂರು/ಬಾಗಲಕೋಟೆ/ ಹುಬ್ಬಳ್ಳಿ (ಮೇ 29): ರಾಜ್ಯದಲ್ಲಿ ಲವ್ ಜಿಹಾದ್‌ಗೆ ಸಿಲುಕಿದ ಹಿಂದೂ ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ರಾಜ್ಯಾದ್ಯಂತ ಅನ್ವಯವಾಗುವಂತೆ ಶ್ರೀರಾಮ ಸೇನೆಯ ಸಹಾಯವಾಣಿ (Sri Rama Sena helpline ) ಸಂಖ್ಯೆಗೆ 90904 43444 ಚಾಲನೆ ನೀಡಿದರು.

ಬಾಗಲಕೋಟೆ ಮತ್ತು ಹುಬ್ಬಳ್ಳಿ ಜಿಲ್ಲಾ ಕೇಂದ್ರಗಳಲ್ಲಿ ಬುಧವಾರ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವತಿಯಿಂದ ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಸಹಾಯವಾಣಿಯು ದಿನದ 24x7 ಕಾರ್ಯ ನಿರ್ವಹಿಸಲಿದೆ. ಲವ್ ಜಿಹಾದ್ ನಲ್ಲಿ ಸಿಲುಕಿರುವ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದ್ದು, ಈ ಮೂಲಕ ಹಿಂದೂ ಧರ್ಮದ ಹಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ನೆತರವಾಗಲಿದೆ. ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸಹಾಯವಾಣಿಗೆ ಚಾಲನೆ ನೀಡಿದರು.

ವಿದೇಶದಿಂದ ಬರುವ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಕೆ; ತಿರಸ್ಕರಿಸಿದ ಕೋರ್ಟ್

ಇನ್ನು ಶ್ರೀರಾಮ ಸೇನೆಯಿಂದ ಬಿಡುಗಡೆ ಮಾಡಲಾದ ಸಹಾಯವಾಣಿಗೆ ಚಾಲನೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕ ಫಯಾಜ್‌ನ ಲವ್ ಜಿಹಾದ್‌ಗೆ ಬಲಿಯಾದಳೆಂದು ಹೇಳಲಾಗುತ್ತಿರುವ ನೇಹಾ ಹಿರೇಮಠ ಕುಟುಂಬಸ್ಥರು ಭಾಗವಹಿಸಿದ್ದರು. ಇನ್ನು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಶ್ರೀರಾಮಸೇನೆ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ್ ಸೇನೆ ಬೆಂಗಳೂರು ಘಟಕದ ಅಧ್ಯಕ್ಷ ಭಾಸ್ಕರನ್ ಮಾತನಾಡಿ, ರಾಜ್ಯದಲ್ಲಿ ನಿರಂತರವಾಗಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗ್ತಿದೆ. ತಪ್ಪು ಐಡೆಂಟಿಟಿ ಬಳಸಿ ಹಿಂದೂ ಮಹಿಳೆಯರಿಗೆ ಮೋಸ ಮಾಡ್ತಿದ್ದಾರೆ. ಮತಾಂದತೆಯ ಮೂಲಕ ಹಿಂದೂ ಮಹಿಳೆಯರಿಗೆ ಮೋಸ ಮಾಡುವ ಕೆಲಸ ಆಗ್ತಿದೆ. ಈ ಹಿನ್ನೆಲೆ ಶ್ರೀರಾಮ್ ಸೇನೆ ವತಿಯಿಂದ ಹೆಲ್ಪಲೈನ್ ಬಿಡುಗಡೆ ಮಾಡಿದ್ದೇವೆ. ಇನ್ಮುಂದೆ ಯಾರಿಗಾದರೂ ಸಮಸ್ಯೆ ಎದುರಾದಲ್ಲಿ ಈ ನಂಬರ್ ಗೆ ಕಾಲ್ ಮಾಡ್ಬಹುದು. ತಮ್ಮ ಸಮಸ್ಯೆ ಹೇಳಿಕೊಂಡಲ್ಲಿ, ತಕ್ಷಣ ನಾವು ಸಂರಕ್ಷಣೆ ಮಾಡ್ತೇವೆ. ಮುಸ್ಲಿಂ ಯುವಕರು ಬೇರೆ ಬೇರೆ ಹೆಸರನ್ನ ಹೇಳಿ ಯುವತಿಯರಿಗೆ ಮೋಸ ಮಾಡ್ತಾರೆ. ನಾವು ಯಾವುದೇ ರೀತಿಯ ಪ್ರಚಾರಕ್ಕಾಗಿ ಇದನ್ನ ಮಾಡ್ತಿಲ್ಲ. ಸಮಾಜದ ರಕ್ಷಣೆ, ಸುಧಾರಣೆಗೆ ಹೆಲ್ಪ್ ಲೈನ್ ನಂಬರ್ ಬಿಡುಗಡೆ ಮಾಡಿದ್ದೇವೆ. ಸಹಾಯವಾಣಿಗೆ ಕರೆ ಬಂದಿದ್ದೆ  ಆದಲ್ಲಿ ತಕ್ಷಣ ಪೋಲಿಸರ ಗಮನಕ್ಕೂ ತರ್ತೇವೆ. ಆಯಾ ಜಿಲ್ಲೆ ತಾಲ್ಲೂಕಿನಲ್ಲಿ ಪೋಲಿಸರಿಗೆ ತಿಳಿಸುವ ಕೆಲಸ ಶ್ರೀರಾಮ್ ಸೇನೆ ಮಾಡುತ್ತದೆ ಎಂದು ತಿಳಿಸಿದರು.

ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು? ಮುಸ್ಲಿಂ ಲೀಗ್ ನೇತಾರನ ಷಡ್ಯಂತ್ರ ಎನ್ನುತ್ತಿದೆ ವಿಎಚ್‌ಪಿ!

ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಮುಖಂಡರು ಹಿಂದು ಹೆಣ್ಣು ಮಕ್ಕಳ ರಕ್ಷಣೆಗಾಗಿ ಸಹಾಯವಾಣಿಗೆ ಚಾಲನೆ ನೀಡಿದರು. ಈ ಸಹಾಯವಾಣಿಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದು. ಹೀಗೆ ಕರೆ ಮಾಡಿ ಮಾಹಿತಿ ಕೊಟ್ಟ ಹೆಣ್ಣು ಮಕ್ಕಳ ಮಾಹಿತಿ ಗುಪ್ತವಾಗಿಡಲಾಗುವುದು. ಸಹಾಯವಾಣಿಯಲ್ಲಿ ಲವ್ ಜಿಹಾದ್ ಕರೆಗಳನ್ನು ಮಾತ್ರ ಸ್ವೀಕರಿಸಲಾಗುವುದು. ಶ್ರೀರಾಮ ಸೇನೆಯ ಸಹಾಯವಾಣಿಯಲ್ಲಿ ಲವ್ ಜಿಹಾದ್ ಕರೆಗಳನ್ನು ಮಾತ್ರ ಸ್ವೀಕರಿಸಲಾಗುವುದು. ಇಲ್ಲಿಗೆ ಕರೆ ಮಾಡಿದ ಹೆಣ್ಣು ಮಕ್ಕಳಿಗೆ ಕಾನೂನು ಸಲಹೆಗಳ ಬಗ್ಗೆಯೂ ಸೂಚನೆ ನೀಡುವುದು. ಈ ವೇಳೆ ಸಂತ್ರಸ್ತ ಮಹಿಳೆಯರ ನೆರವಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ನೆರವಾಗಿ ನಿಲ್ಲಲಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದ್ದು, ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್‌ಗೆ ಸಂಬಂಧಿಸಿದಂತೆ ಕರೆ ಮಾಡಿ ನೆರವು ಪಡೆಯಬಹುದು ಎಂದು ತಿಳಿಸಿದರು.

Latest Videos
Follow Us:
Download App:
  • android
  • ios