ಕೊಡಗು: ಆಂಧ್ರದ ಮಾವುತರಿಗೆ ತರಬೇತಿ ನೀಡಿದ ದುಬಾರೆ ಸಾಕಾನೆಗಳು!

ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು, ಕರ್ನಾಟಕ ಅರಣ್ಯ ಇಲಾಖೆ ಆಂಧ್ರದ ಅರಣ್ಯ ಸಿಬ್ಬಂದಿಗೆ ಕೊಡಗಿನ ದುಬಾರೆಯಲ್ಲಿ ಆನೆಗಳನ್ನು ನಿರ್ವಹಿಸುವ ಬಗ್ಗೆ ವಿಶೇಷ ತರಬೇತಿ ನೀಡುತ್ತಿದೆ. ಈ ತರಬೇತಿಯು ಆನೆಗಳನ್ನು ಪಳಗಿಸುವುದು, ಸ್ನಾನ ಮಾಡಿಸುವುದು, ಆಹಾರ ತಿನ್ನಿಸುವುದು ಮತ್ತು ಸೆರೆಹಿಡಿಯುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ.

Special training for forest staff of Andhra Pradesh at Dubare Elephant Camp, Karnataka rav

ಕೊಡಗು (ಡಿ.9): ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷ ಕರ್ನಾಟಕ ಮಾತ್ರವೇ ಅಲ್ಲ, ಪಕ್ಕದ ಆಂಧ್ರ ಪ್ರದೇಶದಲ್ಲೂ ಮಿತಿ ಮೀರಿದೆ. ಹೀಗಾಗಿಯೇ ಆಂಧ್ರ ಪದೇಶ ಸರ್ಕಾರವು ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ಕೊಡಿಸುತ್ತಿದೆ. ಅದರಲ್ಲೂ ಆಂದ್ರಪ್ರದೇಶದ ನಾಲ್ಕೈದು ಜಿಲ್ಲೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಅವುಗಳ ನಿಯಂತ್ರವೇ ತೀರಾ ದುಸ್ಥರವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಅಲ್ಲಿನ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರ ಮನವಿಯ ಮೇರೆಗೆ ಕರ್ನಾಟಕದ ಅರಣ್ಯ ಇಲಾಖೆಯೊಂದಿಗೆ ಕೊಡಗಿನ ದುಬಾರೆಯಲ್ಲಿ ತರಬೇತಿ ನೀಡಲಾಗುತ್ತಿದೆ. 

ಆಂಧ್ರಪ್ರದೇಶದಿಂದ ಬಂದಿರುವ 20 ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಆನೆಗಳ ಪಳಗಿಸುವುದು ಹೇಗೆ, ಆನೆಗಳ ಸ್ನಾನ ಮಾಡಿಸುವುದು ಹೇಗೆ, ಆನೆಗಳಿಂದ ಸೆಲ್ಯೂಟ್ ಮಾಡುವುದು, ಆನೆಗಳ ಮೇಲೆ ಇವರು ಏರಿ ಕುಳಿತುಕೊಳ್ಳುವುದು, ಆನೆಗಳಿಗೆ ಆಹಾರ ತಿನ್ನಿಸುವುದು ಮತ್ತು ಆನೆಗಳ ಸೆರೆ ಹಿಡಿಯುವ ಹಗ್ಗವನ್ನು ತಯಾರು ಮಾಡುವುದು ಹೇಗೆ ಎನ್ನುವ ಕುರಿತು ಎಲ್ಲವನ್ನು ಪ್ರಾಯೋಗಿಕವಾಗಿ ಕೊಡಗಿನ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿ ನೀಡುತ್ತಿದ್ದಾರೆ. ದುಬಾರೆ ಸಾಕಾನೆ ಶಿಬಿರದ ಸಾಧುವಾಗಿರುವ ಆನೆಗಳನ್ನು ಉಪಯೋಗಿಸಿಕೊಂಡು ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಮಾವುತರು ಮತ್ತು ಕವಾಡಿಗರು ಜೊತೆಯಲ್ಲಿಯೇ ಇದ್ದು ಅವರಿಗೆ ಆನೆಗಳನ್ನು ಪಳಗಿಸುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಆನೆಗಳ ಮೇಲೆ ಏರಿ ಕುಳಿತುಕೊಳ್ಳುವುದೇ ತರಬೇತಿಗೆ ಬಂದಿರುವ ಆಂಧ್ರಪ್ರದೇಶದ ಸಿಬ್ಬಂದಿಗೆ ಸವಾಲಾಗಿದೆ. ಆದರೆ ದುಬಾರೆಯ ಸಾಕಾನೆಗಳು ಮಾತ್ರ ಆಂಧ್ರದಿಂದ ಬಂದಿರುವವರಿಗೆ ಸಂಪೂರ್ಣ ಸಹಕಾರ ನೀಡುತ್ತಾ ಅವರ ತರಬೇತಿಗೆ ಸಾಥ್ ನೀಡುತ್ತಿವೆ. 

Special training for forest staff of Andhra Pradesh at Dubare Elephant Camp, Karnataka rav

ಹೆಣ್ಣಾನೆ ಕೊರತೆ: ದಸರಾ ಅರಮನೆ ಬಳಿ ಕಾದಾಡಿದ್ದ ದಸರಾ ಆನೆಗಳ ಮಧ್ಯೆ ಭೀಕರ ಕಾದಾಟ!

ತಮ್ಮ ಮುಂಭಾಗದ ಎಡ ಅಥವಾ ಬಲಭಾಗದ ಕಾಲನ್ನು ಮೇಲೆತ್ತಿ ಕಾಲಿನ ಮೇಲೆ ಅವರನ್ನು ನಿಲ್ಲಿಸಿಕೊಂಡು ತಮ್ಮ ಮೇಲೆ ಕುಳಿತುಕೊಳ್ಳಲು ನೆರವಾಗುತ್ತಿವೆ. ಅದಿ, ಹಲಾ ದಲೈ ಸಲಾಮ್ ಎಂದು ಹೇಳಿದಂತೆ ಅವರ ಮಾತನ್ನು ಪಾಲಿಸಿ ಅವರ ತರಬೇತಿಗೆ ಸಂಪೂರ್ಣ ಸ್ಪಂದಿಸುತ್ತಿವೆ. ಸ್ವತಃ ಆಂಧ್ರಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಯೇ ಆನೆಗಳನ್ನು ನದಿಗೆ ಒಡೆದುಕೊಂಡು ಹೋಗುವುದು, ಅವುಗಳಿಗೆ ಸ್ನಾನ ಮಾಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಆಂಧ್ರಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಡಗಿನ ದುಬಾರೆಯ ಸಾಕಾನೆ ಶಿಬಿರದ ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು ಮತ್ತು ಆನೆಗಳು ತರಬೇತಿ ನೀಡುತ್ತಾ ಅಲ್ಲಿನ ಆನೆ ಮಾನವ ಸಂಘರ್ಷಕ್ಕೆ ಬ್ರೇಕ್ ಹಾಕವುದಕ್ಕೆ ಸಿದ್ಧತೆ ನಡೆಸಿದ್ದಾರೆ.

Special training for forest staff of Andhra Pradesh at Dubare Elephant Camp, Karnataka rav

ಜೀವನದಲ್ಲಿ ಒಮ್ಮೆ ನೋಡಿ ಕೊಡಗು, ಅಂಥದ್ದೇನಿದೆ ಅಲ್ಲಿ? 

ಈ ಕುರಿತು ಮಾತನಾಡಿರುವ ಎಸಿಎಫ್ ಗೋಪಾಲ್ ಅವರು ಆಂಧ್ರದ ಅರಣ್ಯ ಸಚಿವರಾದ ಪವನ್ ಕಲ್ಯಾಣ್ ಹಾಗೂ ಇಲ್ಲಿನ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರ ಒಪ್ಪಂದಂತೆ ನಾವು ತರಬೇತಿ ನೀಡುತ್ತಿದ್ದೇವೆ. ಈಗಾಗಲೇ ಹಲವು ದಿನಗಳಿಂದ ಸಾಕಷ್ಟು ತರಬೇತಿ ನೀಡಲಾಗಿದೆ. ಇಲ್ಲಿಂದ ತರಬೇತಿ ಪಡೆದು ಹೋಗುವ ಅವರು ಅಲ್ಲಿನ ಆನೆ ಮತ್ತು ಮಾನವ ಸಂಘರ್ಷದ ನಿಯಂತ್ರಣಕ್ಕೆ ಕೆಲಸ ಮಾಡಲಿದ್ದಾರೆ. ಜೊತೆಗೆ ಅಲ್ಲಿಯೂ ಆನೆ ಕ್ಯಾಂಪ್ ತೆರೆಯಲು ಸಿದ್ಧತೆ ನಡೆದಿದೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ದುಬಾರೆ ಸಾಕಾನೆ ಶಿಬಿರದ ಡಿಆರ್ಎಫ್ಓ ಕೆ.ಪಿ. ರಂಜನ್ ಆಂಧ್ರದಲ್ಲೂ ದುಬಾರೆಯಂತಹ ಒಂದು ಕ್ಯಾಂಪ್ ಮಾಡುವುದಕ್ಕಾಗಿ ಅವರು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿನ ಮಾವುತರು ಕವಾಡಿಗರು ಆನೆಯ ವಿಚಾರದಲ್ಲಿ ಕಲಿತಿರುವ ಪ್ರತಿಯೊಂದನ್ನು ಕಲಿತು ಅಲ್ಲಿ ಅದನ್ನು ಇಂಪ್ಲಿಮೆಂಟ್ ಮಾಡಬೇಕು. ಒಂದು ತಿಂಗಳಲ್ಲಿ ಎಲ್ಲವನ್ನು ಕಲಿಸಲು ಸಾಧ್ಯವಿಲ್ಲದಿದ್ದರೂ ಎಷ್ಟು ಸಾಧ್ಯವೇ ಅಷ್ಟು ಎಲ್ಲವನ್ನು ಕಲಿಸಿದ್ದೇವೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios